ದರ್ಶನ್ ಅವರ ಜಾಮೀನು ರದ್ದತಿಯಿಂದ ಚಿತ್ರರಂಗಕ್ಕೆ ಆತಂಕ ಎದುರಾಗಿದೆ. ಡೆವಿಲ್ ಸಿನಿಮಾ ಬಿಡುಗಡೆಗೆ ಅಡ್ಡಿಯಾಗಿದ್ದು, ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಮೇಶ್ ಬಣಕಾರ್ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅನಾರೋಗ್ಯದ ನಿಮಿತ್ತ ದರ್ಶನ್ ಅವರಿಗೆ ಹೈಕೋರ್ಟ್ ಕಡೆಯಿಂದ ಜಾಮೀನು ನೀಡಲಾಗಿತ್ತು. ಇದನ್ನು ರಾಜ್ಯ ಸರ್ಜಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಅವರಿಗೆ ರಾಜಾತಿಥ್ಯ ನೀಡಿದ್ದಕ್ಕೂ ಕೂಡ ಪ್ರಶ್ನೆ ಎದ್ದಿತ್ತು. ಈಗ ಜಾಮೀನು ರದ್ದಾಗಿದೆ.
25
ಪ್ರಿಯಾ ಹಾಸನ್ ಏನಂದ್ರು?
“ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಲೇಬೇಕು, ಉಪ್ಪು ತಿಂದ ಮೇಲೆ ನೀರು ಕುಡಿಲೇ ಬೇಕು. ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಅನ್ನೋ ಹಾಗೆ ದರ್ಶನ್ ಆಗಿದ್ದಾರೆ. ದರ್ಶನ್ ಒಳ್ಳೆ ವ್ಯಕ್ತಿ ಆಗಿ ಹೊರಗೆ ಬರಲಿ. ದರ್ಶನ್ ಅಭಿಮಾನಿಗಳಿಗೂ ಇದು ಅರ್ಥ ಆಗಬೇಕು. ದರ್ಶನ್ ಅವರನ್ನು ಪ್ರೀತಿ ಮಾಡಿ ಆದರೆ ಅವರ ತಪ್ಪಿಗೂ ಪ್ರೋತ್ಸಾಹ ಕೊಡಬೇಡಿ. ಹೆಣ್ಣು ಮಕ್ಕಳಿಗೆ ಗೌರವ ಕೊಡೋದನ್ನು ಕಲಿಯಿರಿ. ದರ್ಶನ್ ಅಭಿಮಾನಿಗಳೇ ಹೆಣ್ಣು ಮಕ್ಕಳಿಗೆ ಕೆಟ್ಟ ಮೆಸೇಜ್ ಮಾಡುತ್ತಾರೆ” ನಟಿ ನಿರ್ಮಾಪಕಿ ಪ್ರಿಯಾ ಹಾಸನ್ ಹೇಳಿಕೆ ನೀಡಿದ್ದಾರೆ.
35
ದರ್ಶನ್ ಮಾಡಿಕೊಂಡಿರೋದು ಸ್ವಯಂಕೃತ ಅಪರಾಧ!
“ದರ್ಶನ್ ಪ್ರಕರಣ ಅವರ ಅಭಿಮಾನಿಗಳಿಗೆ ಪಾಠವಾಗಿದೆ. ನೀವು ದರ್ಶನ್ ಮಾಡಿಕೊಂಡ ಕೆಲಸವನ್ನ ಮಾಡಿಕೊಳ್ಳಬೇಡಿ. ನೀವು ನಿಮ್ಮ ಮನೆಗೆ ಹೀರೋ ಆಗಿ ಸಾಕು. ದರ್ಶನ್ ಮಾಡಿಕೊಂಡಿರೋದು ಸ್ವಯಂ ಕೃತ ಅಪರಾಧ” ಎಂದಿದ್ದಾರೆ.
45
ಉಮೇಶ್ ಬಣಕಾರ್ ಏನಂದ್ರು?
“ಇದು ದುರಂತ. ಚಿತ್ರರಂಗಕ್ಕೆ ನೂರಕ್ಕೆ ನೂರು ಭಾಗ ನಷ್ಟ. ಡೆವಿಲ್ ಸಿನಿಮಾಗೆ ಇದರಿಂದ ತೊಂದರೆ ಆಗಿದೆ. ಡೆವಿಲ್ ಸಿನಿಮಾ ಹಾಡು ಬಿಡುಗಡೆ ಆಗಬೇಕಿತ್ತು. ಯಾವ ನಟರು ಇಂತಹ ಸಮಸ್ಯೆಗಳನ್ನು ತಂದುಕೊಳ್ಳಬಾರದು. ಇದ್ರೆ ನೆಮ್ಮದಿಯಾಗಿ ಇರ್ಬೇಕು ಅನ್ನೋ ಡೆವಿಲ್ ಸಿನಿಮಾ ಹಾಡು ಬಿಡುಗಡೆ ಆಗಬೇಕಿತು. ಆದ್ರೆ ದರ್ಶನ್ ಅವರಿಗೆ ನೆಮ್ಮದಿ ಇಲ್ಲದ ಹಾಗಾಗಿದೆ. ಯಾವ ಸಮಯದಲ್ಲಿ ಏನಾಗುತ್ತೆ ಅಂತ ಹೇಳೋಕೆ ಆಗಲ್ಲ ಎಂದು ನಟ ದರ್ಶನ್ ಅವರೇ ಸಿನಿಮಾ ತಂಡದ ಜೊತೆ ಹೇಳಿಕೊಂಡಿದ್ರು. ಹಾಗಾಗಿ ಡೆವಿಲ್ ಸಿನಿಮಾ ಕೆಲಸವನ್ನ ಬೇಗ ಬೇಗ ಮುಗಿಸಿದ್ರು. ದರ್ಶನ್ ಅವರಿಗೆ ಜೈಲಿನಿಂದ ಬಿಡುಗಡೆ ಆಗೋಕೆ ಇನ್ನೂ ಅವಕಾಶ ಇದೆ. ಇಲ್ಲಿ ಡೆವಿಲ್ ಸಿನಿಮಾ ನಿರ್ಮಾಪಕರು ನಿರಪರಾದಿಗಳು”
ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹೇಳಿಕೆ ನೀಡಿದ್ದಾರೆ.
55
ಡೆವುಲ್ ರಿಲೀಸ್ ಯಾವಾಗ?
ದರ್ಶನ ನಟನೆಯ ಡೆವಿಲ್ ಸಿನಿಮಾ ಕೆಲಸ ಮುಗಿದಿದೆ, ದರ್ಶನ್ ಪಾತ್ರದ ಡಬ್ಬಿಂಗ್ ಕೆಲಸ ಕೂಡ ಮುಗಿದಿದೆ. ದರ್ಶನ್ ಜೈಲಿನಲ್ಲಿ ಇರೋದಿಕ್ಕೆ ಈ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂದು ಕಾದು ನೋಡಬೇಕಿದೆ.