ಬಿದಿರು ಬೊಂಬೆ ತರ ಕಾಣ್ತಿದ್ದೀರಿ; ರಶ್ಮಿಕಾ ಮಂದಣ್ಣ ಏನ್ ಮಾಡಿದ್ರೂ ಸಮಸ್ಯೆ ಗುರು

First Published | Apr 19, 2023, 9:15 AM IST

 ವೈರಲ್ ಆಯ್ತು ರಶ್ಮಿಕಾ ಮಂದಣ್ಣ ಮತ್ತೊಂದು ಫೋಟೋ ಶೂಟ್. ದುಬಾರಿ ಸಂಭಾವನೆ ಮುಂದೆ ಕಾಮೆಂಟ್ ಲೆಕ್ಕವಿಲ್ಲ ಎಂದ ನೆಟ್ಟಿಗರು... 

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಇತ್ತೀಚಿಗೆ ಸಿನಿಮಾಗಳ ಜೊತೆ ಜಾಹೀರಾತುಗಳಲ್ಲಿ ಹೆಚ್ಚಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲಾ ರೀತಿಯಲ್ಲಿ ಸಂಪಾದನೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಂನಲ್ಲಿ ಕೆಲವೊಂದು ಬ್ರ್ಯಾಂಡ್ ಪ್ರಮೋಟ್ ಮಾಡುತ್ತಾರೆ ಟಿವಿಯಲ್ಲಿ ಕೆಲವು ಬ್ರ್ಯಾಂಡ್ ಪ್ರಮೋಟ್ ಮಾಡ್ತಾರೆ. 

Tap to resize

ಸದ್ಯ ರಶ್ಮಿಕಾ ಮಂದಣ್ಣ ಅಮೆರಿಕಾದ ಮಹಿಳಾ ಫ್ಯಾಷನ್ ಮ್ಯಾಗಜಿನ್‌ Harpers bazaarನ ಕವರ್‌ ಪೇಜ್‌ ಫೋಟೋಶೂಟ್ ಮಾಡಿಸಿದ್ದಾರೆ. ಈ ಮ್ಯಾಗಜಿನ್ ಭಾರತದಲ್ಲೂ ಇದೆ. 

ಕ್ರೀಮ್ ಬಣ್ಣದ ಶೂಟ್ ಧರಿಸಿ ರಶ್ಮಿಕಾ ಮಂದಣ್ಣ ಮಿಂಚುತ್ತಿದ್ದಾರೆ. ಫೋಟೋ ಸಖತ್ ಅಗಿ ಬಂದಿದ್ದರೂ ಬಿದಿರು ಬೊಂಬೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. 

ನ್ಯಾಷನಲ್‌ ಕ್ರಷ್‌ಗೆ ಜನರಿಂದ ಎಷ್ಟು ಪ್ರೀತಿ ಸಿಗುತ್ತದೆ ಅಷ್ಟೇ ಟ್ರೋಲ್ ಮತ್ತು ನೆಗೆಟಿವ್ ಕಾಮೆಂಟ್ ಎದುರಿಸುತ್ತಿದ್ದಾರೆ.  ಅನೇಕ ಬಾರಿ ಧ್ವನಿ ಎತ್ತಿದ್ದಾರೆ. 

ಅಮೆರಿಕಾ ಮ್ಯಾಗಜಿನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಂದ್ರೆ ಪ್ರಿಯಾಂಕಾ ಚೋಪ್ರಾ ರೀತಿ ಹಾಲಿವುಡ್‌ಗೆ ಕಾಲಿಟ್ಟರೂ ಆಶ್ಚರ್ಯವಿಲ್ಲ ಎಂದು ಟಾಲಿವುಡ್-ಸ್ಯಾಂಡಲ್‌ವುಡ್‌ ಮಂದಿ ಲೆಕ್ಕಾಚಾರ ಹಾಕುತ್ತಿದ್ದಾರೆ.

Latest Videos

click me!