ಬೆಂಗಳೂರಿನಲ್ಲಿ ಏಪ್ರಿಲ್ 17ರಂದು ನಡೆದ ಆರ್‌ಸಿಬಿ ಮತ್ತು ಸಿಎಸ್‌ಕೆ ಮ್ಯಾಚ್ ನೋಡಲು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ತಮಿಳು ನಟ ಧನುಷ್ ಒಟ್ಟಿಗೆ ಸೇರಿದ್ದಾರೆ.
26
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶಿವಣ್ಣ, ಪುತ್ರಿ ನಿವೇದಿತಾ ಮತ್ತು ಧನುಷ್ ಇರುವ ಫೋಟೋ ವೈರಲ್ ಅಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
36
ಶಿವಣ್ಣ ಆರ್‌ಸಿಬಿಗೆ ಸಪೋರ್ಟ್ ಮಾಡುತ್ತಿದ್ದಾರೆ, ಧನುಷ್ ಸಿಎಸ್‌ಕೆಗೆ ಸಪೋರ್ಟ್ ಮಾಡುತ್ತಿದ್ದಾರೆ. ಪುಟ್ಟ ಹುಡುಗಿ ಸಿಎಸ್‌ಕೆ ಎಂದು ಬರೆದುಕೊಂಡು ಶಿವಣ್ಣನಿಗೆ ಮುತ್ತು ಕೊಟ್ಟಿದ್ದಾರೆ.
46
'ಇಂದು ರಾತ್ರಿ ಆರ್‌ಸಿಬಿ ಕ್ರಿಕೆಟ್ ಮ್ಯಾಚ್ ನೋಡಲು ಸಖತ್ ಖುಷಿಯಾಗಿರುವೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇರುವೆ. ಗೇಮ್ ಶುರು' ಎಂದು ಶಿವಣ್ಣ ಬರೆದುಕೊಂಡಿದ್ದಾರೆ.
56
ಶಿವಣ್ಣ ಈ ಸಲ ಕಪ್ ನಮ್ದೇ ಎಂದು ಒಮ್ಮೆ ಹೇಳಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಸೌತ್ ಇಂಡಿಯನ್ ಡರ್ಬಿ ಎನ್ನುತ್ತಿದ್ದಾರೆ ನೆಟ್ಟಿಗರು.
66
ಶಿವಣ್ಣ, ಧನುಷ್ ಮಾತ್ರವಲ್ಲ ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ದೊಡ್ಡ ತಾರಾ ಬಳಗ ಕ್ರಿಕೆಟ್ ಮ್ಯಾಚ್ ನೋಡಲು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೇರಿದ್ದರು. ಸೋತರು ಚಿಂತೆ ಇಲ್ಲ ಕಪ್ ನಮ್ದೆ ಎಂದಿದ್ದಾರೆ.