ಸೀರೆ, ದಾವಣಿ ಬಿಟ್ಟು ಗ್ಲಾಮರಸ್ ಲುಕ್ ನಲ್ಲಿ ಪೋಸ್ ಕೊಟ್ಟ ರಣವಿಕ್ರಮನ ಬೆಡಗಿ ಅಂಜಲಿ

First Published | Feb 28, 2024, 5:26 PM IST

ಪುನೀತ್ ರಾಜ್ ಕುಮಾರ್ ಅಭಿನಯದ ರಣ ವಿಕ್ರಮ ಸಿನಿಮಾದಲ್ಲಿ ಗೌರಿಯಾಗಿ ನಟಿಸುವ ಮೂಲಕ ಕನ್ನಡಿಗರ ಮೆಚ್ಚುಗೆ ಗಳಿಸಿದ ನಟಿ ಅಂಜಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. 
 

ತಮಿಳು, ತೆಲುಗು ಸಿನಿಮಾಗಳಲ್ಲಿ ತನ್ನ ನ್ಯಾಚುರಲ್ ಅಭಿನಯದಿಂದ ಜನಮನ ಗೆದ್ದು, ಕನ್ನಡದಲ್ಲಿ ಹೊಂಗನಸು, ರಣವಿಕ್ರಮ (Ranavikrama), ಭೈರಾಗಿ ಸಿನಿಮಾದಲ್ಲಿ ಮಿಂಚಿದ ನಟಿ ಅಂಜಲಿ. 
 

ಪುನೀತ್ ರಾಜ್ ಕುಮಾರ್ (Punith Rajkumar) ಜೊತೆ ರಣವಿಕ್ರಮ ಸಿನಿಮಾದಲ್ಲಿ ಗೌರಿಯಾಗಿ ನಟಿಸಿ ಕನ್ನಡಿಗರ ಮೆಚ್ಚುಗೆ ಗಳಿಸಿದ್ದರು, ಇಂದಿಗೂ ಕೂಡ ಜನರ ಬಾಯಲ್ಲಿ ಗೌರಿ ಗೌರಿ ಹಾಡು ಕೇಳಿ ಬರುತ್ತೆ. ಈ ನಟಿ ಕೊನೆಯದಾಗಿ ಇರಟ್ಟ ಸಿನಿಮಾದಲ್ಲಿ ನಟಿಸಿದ್ದರು. 
 

Tap to resize

ಸಿನಿಮಾಗಳಲ್ಲಿ ಆಗಲಿ, ರಿಯಲ್ ಆಗಿರಲಿ ಯಾವಾಗಲೂ ಸೀರೆ ಉಟ್ಟು, ಹೆಚ್ಚಾಗಿ ಟ್ರೆಡಿಶನಲ್ ಲುಕ್ ನಲ್ಲೇ ಕಾಣಿಸಿಕೊಳ್ಳುವ ಅಂಜಲಿ (Anjali)ಈ ಬಾರಿ ಗ್ಲಾಮರ್ಸ್ ಲುಕ್ ನೀಡುವ ಮೂಲಕ ಪೋಸ್ ನೀಡಿದ್ದು, ಇಂಟರ್ನೆಟ್ ಬಿಸಿ ಹೆಚ್ಚಿಸಿದೆ. 
 

ಹೌದು ಅಂಜಲಿ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ 'ಟ್ರೆಂಡ್ ಗಳೇ ತುಂಬಿರುವ ಈ ಪ್ರಪಂಚದಲ್ಲಿ ನಾನು ಕ್ಲಾಸಿಕ್ ಆಗಿ ಇರೋಕೆ ಇಷ್ಟಪಡ್ತೀನಿ 'ಎನ್ನುವ ಕಾಪ್ಶನ್ ಹಾಕುವ ಮೂಲಕ ಸಖತ್ ಗ್ಲಾಮರಸ್ ಫೋಟೋ ಶೇರ್ ಮಾಡಿದ್ದಾರೆ. 
 

ಕೆಂಪು ಬಣ್ಣದ ಫಾರ್ಮಲ್ ಪ್ಯಾಂಟ್, ಅದಕ್ಕೊಂದು ಕೆಂಪು ಬಣ್ಣದ ಡೀಪ್ ನೆಕ್ ಕ್ರಾಪ್ ಟಾಪ್ ಜೊತೆಗೆ ಅದೇ ಕೆಂಪು ಬಣ್ಣದ ಬ್ಲೇಜರ್ ಧರಿಸಿ (Fuchsia power suit and a blazer)ಸ್ಟೈಲಿಶ್ ಲುಕ್ ನೀಡುವ ಮೂಲಕ ಮೊದಲ ಬಾರಿಗೆ ಇಷ್ಟೊಂದು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. 
 

ಸದಾ ಸೀರೆ, ದಾವಣಿಯಲ್ಲಿ ಕಾಣಿಸಿಕೊಳ್ಳುವ ನಟಿಯ ಈ ಗ್ಲಾಮರಸ್ (glamorous), ಬೋಲ್ಡ್ ಫೋಟೋಗಳನ್ನು ನೋಡಿ ಅಭಿಮಾನಿಗಳು ನಿಮಗೆ ಸೀರೆನೇ ಚೆನ್ನಾಗಿ ಕಾಣಿಸುತ್ತೆ ಎಂದರೆ, ಮತ್ತೆ ಕೆಲವರು ತುಂಬಾನೆ ಹಾಟ್ ಆಗಿ ಕಾಣಿಸ್ತಿದ್ದೀರಾ ಎಂದೂ ಹೇಳಿದ್ದಾರೆ. 
 

ನಟಿ ಅಂಜಲಿ ಕೊನೆಯ ಬಾರಿಗೆ ಮಲಯಾಳಂ ಥ್ರಿಲ್ಲರ್ ಡ್ರಾಮಾ ಇರಟ್ಟಾ ಮತ್ತು ಮಾಚೆರ್ಲಾ ನಿಯೋಜವರ್ಗಂ ಚಿತ್ರದಲ್ಲಿ ಬ್ಲಾಕ್ಬಸ್ಟರ್ ಹಾಡಿನಲ್ಲಿ ಕಾಣಿಸಿಕೊಂಡರು.ಸದ್ಯದಲ್ಲೇ ಅವರು ಗೀತಾಂಜಲಿ ಎನ್ನುವ ಹಾರರ್ ಥ್ರಿಲ್ಲರ್ (Horror Thriller) ಸಿನಿಮಾದ ಸೀಕ್ವಲ್ ಆಗಿರುವ ಗೀತಾಂಜಲಿ ಮಲ್ಲಿ ವಚ್ಚಿಂದಿ ಸಿನಿಮಾದೊಂದಿಗೆ ತೆರೆ ಮೇಲೆ ಬರಲಿದ್ದಾರೆ. ಇದು ಅಂಜಲಿಯ 50ನೇ ಸಿನಿಮಾವಾಗಲಿದೆ. 
 

Latest Videos

click me!