ಗ್ಲಾಮರಸ್ ಲುಕ್‌ನಲ್ಲಿ ಕಂಗೊಳಿಸಿದ ಮಾಲಾಶ್ರೀ ಪುತ್ರಿ: ಯಕ್ಕೋ ನೀನು ಕಾಟೇರ ಸಿನಿಮಾ ಹೀರೋಯಿನ್ ಅಲ್ವೇನಕ್ಕೋ ಎಂದ ಫ್ಯಾನ್ಸ್‌!

First Published | Feb 27, 2024, 12:30 AM IST

ನಟಿ ಮಾಲಾಶ್ರೀ ಅವರು ಕನ್ನಡ ಸಿನಿಮಾ ರಂಗದ ಕನಸಿನ ರಾಣಿಯಾಗಿ ಮೆರೆದಿದ್ದರು. ಇದೀಗ ಅವರ ಪುತ್ರಿ ಆರಾಧನಾ ಕಾಟೇರಾ ಚಿತ್ರದಿಂದ ಅಬ್ಬರಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಸ್​ ಶೇರ್ ಮಾಡಿದ್ದಾರೆ.

ಸ್ಯಾಂಡಲ್‌ವುಡ್ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಮಗಳು ಆರಾಧನಾ ರಾಮ್ ದರ್ಶನ್ ಕಾಟೇರ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇದೀಗ ಗ್ಲಾಮರಸ್ ಫೋಟೋಸ್​ ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗ ನಿರ್ಮಾಪಕ ರಾಮ್ ಹಾಗೂ ನಟಿ ಮಾಲಾಶ್ರೀ ಮಗಳು ಆರಾಧನಾ ದರ್ಶನ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ​ಮೊದಲ ಸಿನಿಮಾದಲ್ಲೇ ದರ್ಶನ್ ಜೊತೆ ನಟಿಸುವ ಅವಕಾಶ ಆರಾಧನಾಗೆ ಸಿಕ್ಕಿತ್ತು.

Tap to resize

ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ನಟಿ ಆರಾಧನಾ ರಾಮ್​, ಇದೀಗ ಬೋಲ್ಡ್‌ ಅಂಡ್ ಗ್ಲಾಮರಸ್ ಫೋಟೋಶೂಟ್​ನಲ್ಲಿ ಮಿಂಚುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಬ್ಲ್ಯಾಕ್ ಕಲರ್ ಡ್ರೆಸ್ ತೊಟ್ಟ ಆರಾಧನಾ ರಾಮ್​ ಕ್ಯಾಮೆರಾಗೆ ಸಖತ್ತಾಗಿ ಪೋಸ್ ಕೊಟ್ಟಿದ್ದಾರೆ. ನಟಿಯ ಫೋಟೋ ನೋಡಿದ ನೆಟ್ಟಿಗರು ಚೆಂದದ ಚೆಲುವೆ, ಕಾಟೇರಾ ಬ್ಯೂಟಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ನೆಟ್ಟಿಗ ಯಕ್ಕೋ ನೀನು ಕಾಟೇರ ಸಿನಿಮಾ ಹೀರೋಯಿನ್ ಅಲ್ವೇನಕ್ಕೋ ಎಂದು ಕಮೆಂಟ್ ಮಾಡಿದ್ದಾನೆ.

ಸ್ಯಾಂಡಲ್​ವುಡ್​ನ ಕನಸಿನ ರಾಣಿ ಎಂದೆ ಕರೆಸಿಕೊಳ್ಳುವ ಮಾಲಾಶ್ರೀ ಮಗಳು ಆರಾಧನಾ ಅಂದದಲ್ಲಿ ಅಮ್ಮನನ್ನು ಮೀರಿಸುವಂತಿದ್ದಾರೆ. ಆರಾಧನಾ ಬ್ಯೂಟಿಗೆ ಈಗಾಗಲೇ ಫ್ಯಾನ್ಸ್ ಫಿದಾ ಆಗಿದ್ದಾರೆ.

ಮುಂಬೈನಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದ ಆರಾಧನಾ ರಾಮ್​, ಮೊದಲ ಸಿನಿಮಾದಲ್ಲಿ ಕನ್ನಡಿಗರ ಮನಗೆದ್ದರು ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಆರಾಧನಾ ರಾಮ್​ ಚೆಂದದ ಫೋಟೋವನ್ನು ಶೇರ್ ಮಾಡಿದ್ದಾರೆ.

Latest Videos

click me!