‘ನಮ್ಮ ಸಿನಿಮಾದ ಟ್ರೇಲರ್ ನೋಡಿ ರಾಣಾ ದಗ್ಗುಬಾಟಿ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಈ ಸಿನಿಮಾದ ತೆಲುಗು ರೈಟ್ಸ್ ಖರೀದಿಸುವ ಬಗ್ಗೆ ಆಸಕ್ತಿ ತೋರಿದ್ದಾರೆ’ ಎಂದು ‘ಪಪ್ಪಿ’ ಸಿನಿಮಾ ನಿರ್ದೇಶಕ ಆಯುಷ್ ಮಲ್ಲಿ ಹೇಳಿದ್ದಾರೆ.
25
ಉತ್ತರ ಕರ್ನಾಟಕ ಭಾಷೆಯಲ್ಲಿ ಸ್ಥಳೀಯ ಕಲಾವಿದರನ್ನಿಟ್ಟು ಆಯುಷ್ ಮಲ್ಲಿ ನಿರ್ದೇಶಿಸಿರುವ ‘ಪಪ್ಪಿ’ ಸಿನಿಮಾ ಮೇ 1ರಂದು ತೆರೆಗೆ ಬರಲಿದೆ. ಧ್ರುವ ಸರ್ಜಾ ಈ ಸಿನಿಮಾವನ್ನು ಅರ್ಪಣೆ ಮಾಡುತ್ತಿದ್ದಾರೆ.
35
‘ರಾಣಾ ದಗ್ಗುಬಾಟಿ ಅವರ ಆಫೀಸಿನಿಂದ ಕರೆ ಬಂದಾಗ ಅಚ್ಚರಿಯಾಯಿತು. ಅವರಂಥಾ ವ್ಯಕ್ತಿಗಳು ನಮ್ಮ ಸಿನಿಮಾಕ್ಕೆ ನೀಡುವ ಬೆಂಬಲ ನನ್ನಂಥಾ ಅನೇಕ ತರುಣರಿಗೆ ಸ್ಫೂರ್ತಿಯಾಗುತ್ತದೆ.
45
ರಾಜ್ ಬಿ ಶೆಟ್ಟಿ ಕೂಡ ಸಿನಿಮಾದ ಟ್ರೇಲರನ್ನು ಮೆಚ್ಚಿ ಏನೇ ಹೆಲ್ಪ್ ಬೇಕಿದ್ದರೂ ಕೇಳಿ ಎಂದು ಬೆನ್ನು ತಟ್ಟಿದ್ದಾರೆ. ರಮ್ಯಾ ಮೇಡಂ ಬೆಂಬಲಿಸುವ ಮಾತನ್ನಾಡಿದ್ದಾರೆ. ಇವೆಲ್ಲ ನಮಗೆ ಬಹಳ ಚೈತನ್ಯ ನೀಡಿದೆ’ ಎಂದು ಆಯುಷ್ ಮಲ್ಲಿ ಹೇಳಿದ್ದಾರೆ.
55
1 ಗಂಟೆ 50 ನಿಮಿಷ ಅವಧಿಯ ಈ ಸಿನಿಮಾ ಉತ್ತರ ಕರ್ನಾಟಕ ಭಾಷೆಯಲ್ಲಿ ಇಬ್ಬರು ಬಾಲಕರ ನಿರೂಪಣೆಯಲ್ಲಿ ಸಾಗುತ್ತದೆ. ಆಯುಷ್ ಮಲ್ಲಿ ಸ್ಥಳೀಯ ಕಲಾವಿದರು ಹಾಗೂ ಕೇವಲ ಇಬ್ಬರು ತಂತ್ರಜ್ಞರ ಸಹಾಯದಿಂದ ಈ ಸಿನಿಮಾ ಮಾಡಿದ್ದಾರೆ.