ರಚಿತಾಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ರಮ್ಯಾ..ಎಲ್ಲ ಕಡೆಯಿಂದ ಶುಭಾಶಯ

First Published | Oct 4, 2021, 12:35 AM IST

ಬೆಂಗಳೂರು(ಅ. 03))    ಗುಳಿಕೆನ್ನೆ ಚೆಲುವೆ ರಚಿತಾ ರಾಮ್(Rachita Ram)  ಅವರಿಗೆ ಜನ್ಮದಿನದ ಸಂಭ್ರಮ.  ದಕ್ಷಿಣ ಭಾರತದ ಚಿತ್ರರಂಗದ(Sandalwood) ಗಣ್ಯರಿಂದ ಶುಭಾಶಯಗಳು ಹರಿದು ಬಂದಿವೆ. ರಮ್ಯಾ  ದಿವ್ಯ ಸ್ಪಂದನಾ ವಿಶೇಷ ಗಿಫ್ಟ್ ಕಳಿಸಿದ್ದಾರೆ. 

ರಮ್ಯಾ ಕಳಿಸುರುವ ವಿಶೇಷ ಗಿಫ್ಟ್ ನ್ನು ಶೇರ್ ಮಾಡಿಕೊಂಡಿರುವ ರಚಿತಾ ಧನ್ಯವಾದ  ಹೇಳಿದ್ದಾರೆ. ರಚಿತಾ ರಾಮ್ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡವರು.

ಸರ್ಪ್ರೈಸ್ ಕೊಟ್ಟಿರುವುದಕ್ಕೆ ರಮ್ಯಾ ಅವರಿಗೆ ಅನಂತ ಧನ್ಯವಾದಗಳನ್ನು ರಚಿತಾ ಸಲ್ಲಿಸಿದ್ದಾರೆ. SIIMA (South Indian International Movie Awards) ರಚಿತಾ  ಪ್ರಶಸ್ತಿಗೆ ಭಾಜನರಾಗಿದ್ದರು.

Tap to resize

ನಟಿ ಆಶಿಕಾ ರಂಗನಾಥ್, ನಟ ರಮೇಶ್ ಅರವಿಂದ್, ಅಭಿಷೇಕ್ ಅಂಬರೀಶ್, ಬಿಗ್ ಬಾಸ್ ಲ್ಯಾಗ್ ಮಂಜು, ನಟಿ ನಿಧಿ ಸುಬ್ಬಯ್ಯ, ಕಿರುತೆರೆ ನಟಿ, ನಿರೂಪಕಿ ಅಂಕಿತಾ ತಮ್ಮ ಶುಭಾಶಯಗಳನ್ನು ರಚಿತಾ ಅವರಿಗೆ ತಿಳಿಸಿದ್ದಾರೆ.

ಲವ್ ಯು ರಚ್ಚು ಸಿನಿಮಾ ಸಹ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ 1.8 ಮಿಲಿಯನ್ ಫಾಲೋವರ್ ಗಳನ್ನು ರಚಿತಾ ಹೊಂದಿದ್ದಾರೆ.

ಶಬರಿ ಸಿನಿಮಾ ತಂಡವೂ ರಚಿತಾಗೆ ಶುಭಾಶಯ ಸಲ್ಲಿಕೆ ಮಾಡಿದೆ. ಅಭಿಮಾನಿಗಳಿಗೆ ವಂದನೆ  ಹೇಳಿರುವ ರಚಿತಾ ರಾಮ್ ಮತ್ತಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಲಿದ್ದಾರೆ. 

ಬುಲ್ ಬುಲ್ ಸಿನಿಮಾ ಮೂಲಕ ಸೂಪರ್ ಎಂಟ್ರಿ ಕೊಟ್ಟು ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಕಾಮಿಡಿ ಶೋ ಒಂದರ ನಿರ್ಣಾಯಕರಾಗಿಯೂ ಕಾಣಿಸಿಕೊಳ್ಳುತ್ತಿದ್ದರು.


ರಮ್ಯಾ ಕಳಿಸುರುವ ವಿಶೇಷ ಗಿಫ್ಟ್ ನ್ನು ಶೇರ್ ಮಾಡಿಕೊಂಡಿರುವ ರಚಿತಾ ಧನ್ಯವಾದ  ಹೇಳಿದ್ದಾರೆ. ರಚಿತಾ ರಾಮ್ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡವರು.
 

ಕಿಚ್ಚ ಸುದೀಪ್ ರಚಿತಾ ರಾಮ್ ಗೆ ಜನ್ಮದಿನದ ಶುಭಾಶಯ ಕೋರಿದ್ದು ನಟಿ ಧನ್ಯವಾದ ತಿಳಿಸಿದ್ದಾರೆ. ಕಿಚ್ಚ ಸುದೀಪ್ ಕೋಟಿಗೊಬ್ಬ 3 ಅಕ್ಟೋಬರ್ 14 ರಂದು ತೆರೆಗೆ ಅಪ್ಪಳಿಸಲಿದೆ.

Latest Videos

click me!