ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ; ಮದುವೆ ಸಂಭ್ರಮದ ಫೋಟೋ!

ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಹಾಗೂ ಅಕ್ಷಯ್ ಸಪ್ತಪದಿ ತುಳಿಸಿದ್ದಾರೆ. ಕೋವಿಡ್‌19 ನಿಯಮದ ಪ್ರಕಾರ ಸರಳವಾಗಿ ನಡೆದ ಮದುವೆ ಹೇಗಿತ್ತು ನೋಡಿ..

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಿಹಾರಿಕಾ ಮತ್ತು ಅಕ್ಷಯ್.
ನಿಹಾರಿಕಾ ಮತ್ತು ಅಕ್ಷಯ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಗುರು ಹಿರಿಯರಿಂದ ಗ್ರೀನ್‌ ಸಿಗ್ನಲ್ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬನ್ನೇರುಘಟ್ಟ ರಸ್ತೆಯಲ್ಲಿರುವ 'ಮಿರಾಯಾ ಗ್ರೀನ್ಸ್' ರೆಸಾರ್ಟ್‌ನಲ್ಲಿ ಸಂಗೀತ್ ಹಾಗೂ ಮದುವೆ ಕಾರ್ಯಕ್ರಮ ನಡೆದಿದೆ.
ಸಂಗೀತ್ ಕಾರ್ಯಕ್ರಮದಲ್ಲಿ ಪೋಷಕರ ಜತೆ ಹೆಜ್ಜೆ ಹಾಕಿದ ನಿಹಾರಿಕಾ ಕೆಂಪು ಗೌನ್ ಧರಿಸಿದ್ದರು.
ತಾಯಿ ಜೊತೆ ಪುಷ್ಪಕ ವಿಮಾನ ಚಿತ್ರದ ಜಿಲ್ಕಾ ರೇ ಹಾಡಿಗೆ ಡ್ಯಾನ್ಸ್‌ ಮಾಡಿದರೆ, ತಂದೆ ಜೊತೆ ಫುಲ್ ಪಾರ್ಟಿ ಮೋಡ್‌ ಹಾಡಿನ ಹಾಡಿಗೆ ನರ್ತಿಸಿದರು.
ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸೇರಿ ಅನೇಕ ಸಿನಿಮಾ ತಾರೆಯರು ನವ ಜೋಡಿಗೆ ಶುಭ ಹಾರೈಸಿದರು.
ಜನವರಿ ಎರಡನೇ ವಾರದಲ್ಲಿ ನಿಹಾರಿಕಾ ಹಾಗೂ ಅಕ್ಷಯ್ ಆರಕತಕ್ಷತೆ ಕಾರ್ಯಕ್ರಮ ನಡೆಯಲಿದೆ.

Latest Videos

click me!