Ashika Ranganath Moms Birthday: ಚಂದನವನದ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಅವರ ಮುದ್ದಿನ ತಾಯಿ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನಟಿ ಅಮ್ಮನ ಜೊತೆಗಿನ ಒಂದಷ್ಟು ಮುದ್ದಾದ ಫೋಟೊಗಳನ್ನು, ವಿಡಿಯೋಗಳನ್ನು ಶೇರ್ ಮಾಡಿ ಶುಭ ಕೋರಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಚುಟು ಚುಟು ಬೆಡಗಿ ಎಂದೇ ಫೇಮಸ್ ಆಗಿರುವ ನಟಿ ಆಶಿಕಾ ರಂಗನಾಥ್ ಅವರಿಗಿಂದು ವಿಶೇಷ ದಿನ. ಯಾಕಂದ್ರೆ ಇವತ್ತು ಅವರ ಮುದ್ದಿನ ತಾಯಿ ಸುಧಾ ರಂಗನಾಥ್ ಅವರು ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನಟಿ ಮುದ್ದಾದ ಫೋಟೊಗಳನ್ನು ಶೇರ್ ಮಾಡಿದ್ದಾರೆ.
27
ಅಮ್ಮನ ಹುಟ್ಟುಹಬ್ಬ
ಆಶಿಕಾ ರಂಗನಾಥ್ ಗೆ ಸದಾ ಬೆನ್ನೆಲುಬಾಗಿರುವ ಎಲ್ಲಾ ಕಡೆ ಶೂಟಿಂಗ್ ಹೋದರೂ ಅಲ್ಲಿ ಮಗಳ ಜೊತೆಗೆ ಸಾತ್ ನೀಡುವ, ಮಗಳ ಬೇಕು ಬೇಡಗಳನ್ನು ನೋಡಿಕೊಳ್ಳುವ ಆಶಿಕಾ ಮುದ್ದಿನ ಅಮ್ಮ ಸುಧಾ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕೆಲವು ಅನ್ ಸೀನ್ ಫೋಟೊಗಳನ್ನು ಆಶಿಕಾ ಶೇರ್ ಮಾಡಿದ್ದಾರೆ.
37
ಶಕ್ತಿಯಾಗಿರುವ ಅಮ್ಮ
ಮಮ್ಮಿ ಬಿಯರ್, ಹುಟ್ಟುಹಬ್ಬದ ಶುಭಾಶಯಗಳು. ನೀನೆಂದರೆ ಮನೆ,, ನೀನು ಶಕ್ತಿ - ನಮ್ಮ ಇಡೀ ಜಗತ್ತನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಮಹಿಳೆ. ತಮಾಷೆ, ಡ್ರಾಮ, ರಕ್ಷಣಾತ್ಮಕ ಮತ್ತು ಅಂತ್ಯವಿಲ್ಲದ ಕಾಳಜಿಯು ಸೇರಿ, ಎಲ್ಲ ರೀತಿಯಲ್ಲೂ ನಮ್ಮನ್ನು ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ ಆಶಿಕಾ..
ನಿಮ್ಮ ಮಗುವಿನಂತಹ ಸಂತೋಷ ಮತ್ತು ನಿಮ್ಮ ತುಂಬು ಪ್ರೀತಿಗೆ ಧನ್ಯವಾದಗಳು. ನೀನಿಲ್ಲದೆ ನಾವು ಕಳೆದುಹೋಗುತ್ತೇವೆ, ಅಮ್ಮ. ಎಂದು ಆಶಿಕಾ ರಂಗನಾಥ್ ಬರೆದುಕೊಂಡಿದ್ದಾರೆ. ಆ ಮೂಲಕ ಮುದ್ದಿನ ಅಮ್ಮನಿಗೆ ಅಷ್ಟೇ ಮುದ್ದಾಗಿ ಪ್ರೀತಿಯಿಂದ ಶುಭಾಶಯಗಳನ್ನು ತಿಳಿಸಿದ್ದಾರೆ. ಅಭಿಮಾನಿಗಳು ಸಹ ತಮ್ಮ ನೆಚ್ಚಿನ ನಟಿಯ ತಾಯಿಗೆ ಬರ್ತ್ ಡೇ ವಿಶಸ್ ತಿಳಿಸಿದ್ದಾರೆ.
57
ಅಮ್ಮನ ಜೊತೆಗಿನ ಫೋಟೊಗಳು
ಆಶಿಕಾ ಅಮ್ಮನ ಜೊತೆಗಿನ ಶೂಟಿಂಗ್ ಸೆಟ್ ಫೋಟೋಗಳು, ಅಮ್ಮ-ಅಪ್ಪನ ಫೋಟೊ, ಅಕ್ಕ ಅನುಷಾ ರಂಗನಾಥ್ ಹಾಗು ಅಮ್ಮನ ಜೊತೆಗಿನ ಫೋಟೊ, ಅಮ್ಮ ನಗುತ್ತಿರುವ ವಿಡಿಯೋ ಹಾಗೂ ಅಮ್ಮನ ಬರ್ತ್ ಡೇ ಸೆಲೆಬ್ರೇಷನ್ ಫೋಟೊಗಳನ್ನು ಶೇರ್ ಮಾಡಿದ್ದಾರೆ.
67
ಆಶಿಕಾ ರಂಗನಾಥ್ ಸಿನಿಮಾಗಳು
ಕ್ರೇಜಿ ಬಾಯ್ಸ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶಿಕಾ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ತಮ್ಮ ನಟನೆ ಮತ್ತು ಡ್ಯಾನ್ಸ್ ನಿಂದ ಮನ ಸೆಳೆದರು. ಕನ್ನಡದ ಚುಟು ಚುಟು ಬೆಡಗಿ ಎಂದೇ ಜನಪ್ರಿಯತೆ ಪಡೆದರು. ಇತ್ತೀಚೆಗೆ ಅವರು ನಟಿಸಿರುವ ಗತವೈಭವ ಸಿನಿಮಾ ರಿಲೀಸ್ ಆಗಿದ್ದು, ಜನಮೆಚ್ಚುಗೆಗೆ ಪಾತ್ರವಾಗಿದೆ.
77
ತಮಿಳು-ತೆಲುಗಿನಲ್ಲೂ ಆಶಿಕಾ ಹವಾ
ಕನ್ನಡ ಮಾತ್ರವಲ್ಲದೇ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲೂ ಆಶಿಕಾ ದಿಗ್ಗಜರ ಜೊತೆ ನಟಿಸಿದ್ದಾರೆ. ಅಲ್ಲದೇ ಚಿರಂಜೀವಿ ಜೊತೆ ತೆಲುಗಿನ ‘ವಿಶ್ವಂಭರಂ’ ಸಿನಿಮಾದಲ್ಲೂ ಹಾಗೂ ಕಾರ್ತಿ ಜೊತೆ ‘ಸರ್ದಾರ್ 2’ ಎನ್ನುವ ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ. ಈ ಸಿನಿಮಾಗಳು ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.