ಚಂದನವನ ಕರ್ಪೂರದ ಬೊಂಬೆ ಶ್ರುತಿ ಅವರ ಪುತ್ರಿ ಗೌರಿ ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಲ್ಲಿರುತ್ತಾರೆ. ಇನ್ನೂ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿಲ್ಲ, ಆದರೂ ಸಾಕಷ್ಟು ಅಭಿಮಾನಿಗಳನ್ನು ಪಡೆದಿರುವ ಗೌರಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೊಸ ಫೋಟೊ ಸದ್ದು ಮಾಡುತ್ತಿದೆ.
ಗೌರಿ ಶ್ರುತಿ ಯಾರು ಅನ್ನೋದು ನಿಮಗೆ ಗೊತ್ತೇ ಇರುತ್ತೆ ಅಲ್ವಾ? ಚಂದನವನದ ಕರ್ಪೂರದ ಗೊಂಬೆ ಶ್ರುತಿ ಅವರ ಪುತ್ರಿ ಗೌರಿ. ಇವರು ಸಿನಿಮಾಗ ಇನ್ನೂ ಎಂಟ್ರಿ ಕೊಟ್ಟಿಲ್ಲ ಆದರೆ, ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಗೌರಿ ಏನೇ ಮಾಡಿದ್ರು ಅದು ಸುದ್ದಿಯಾಗುತ್ತಲೇ ಇರುತ್ತೆ.
26
ಸೀರೆಯಲ್ಲಿ ಮಿಂಚಿದ ಗೌರಿ
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಗೌರಿ, ಇದೀಗ ಕೆಂಪು ಬಣ್ಣದ ಸೀರೆಯುಟ್ಟು ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೊ ಶೇರ್ ಆಗುತ್ತಿದ್ದಂತೆ, ಸಾವಿರಾರು ಜನ ಲೈಕ್ ಮಾಡಿದ್ದು, ಕಾಮೆಂಟ್ ಸೆಕ್ಷನ್ ಪೂರ್ತಿಯಾಗಿ ಹಾರ್ಟ್ ಇಮೋಜಿಗಳಿಂದ ತುಂಬಿ ಹೋಗಿದೆ.
36
ಸುಂದರಿ ಗೌರಿ
ಸಿಂಪಲ್ ಅಗಿರುವ ಕೆಂಪು ಸೀರೆ, ಅದಕ್ಕೊಂದು ಸಿಂಪಲ್ ಆಫ್ ವೈಟ್ ಬ್ಲೌಸ್ ಧರಿಸಿ, ಕೆಂಪು ಪುಟ್ಟ ಬಿಂದಿಯನ್ನಿಟ್ಟು ಓಪನ್ ಹೇರ್ ಬಿಟ್ಟು ಗೌರಿ ಶ್ರುತಿ ಪೋಸ್ ಕೊಟ್ಟಿದ್ದಾರೆ. ತಮ್ಮ ಫೋಟೊಗಳ ಜೊತೆಗೆ ಗೌತಿ Forever a saree girlie ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಗೌರಿ ತುಂಬಾನೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
ಗೌರಿ ಶ್ರುತಿ ಇತ್ತೀಚೆಗೆ ನಡೆದ ಗಿಚ್ಚಿಗಿಲಿಗಿಲಿ ಖ್ಯಾತಿ ಮಾನಸ ಮತ್ತು ಶಿವು ನಿಶ್ಚಿತಾರ್ಥ ಸಮಾರಂಭದಲ್ಲಿ ಗೌರಿ ಕೆಂಫು ಸೀರೆಯಲ್ಲಿ ಮಿಂಚಿದ್ದರು. ಸಾವಿರಾರು ಅತಿಥಿಗಳು, ಸೆಲೆಬ್ರಿಟಿಗಳ ನಡುವೆ ಗೌರಿ ಮಿಂಚುತ್ತಿದ್ದು, ಕ್ಯಾಮೆರಾ ಕಣ್ಣುಗಳೆಲ್ಲಾ ಗೌರಿ ಮೇಲೆ ಇದ್ದಿದ್ದಂತೂ ಸುಳ್ಳಲ್ಲ.
56
ಶ್ರುತಿ ಪುತ್ರಿ ಸಿನಿಮಾಗೆ ಎಂಟ್ರಿ ಕೊಡ್ತಾರಾ?
ಶ್ರುತಿ ಈಗಾಗಲೇ ಹಲವಾರು ಬಾರಿ ಗೌರಿಯನ್ನು ಸಿನಿಮಾಕ್ಕೆ ಶೀಘ್ರದಲ್ಲಿ ಲಾಂಚ್ ಮಾಡೋದಾಗಿ ಹೇಳಿದ್ದರು. ಆದರೆ ಇಲ್ಲಿವರೆಗೂ ಗೌರಿ ಚಂದನವನಕ್ಕೆ ಎಂಟ್ರಿ ಕೊಟ್ಟಿಲ್ಲ. ಅಭಿಮಾನಿಗಳಂತೂ ಯಾವಾಗ ಗೌರಿಯನ್ನು ತೆರೆಯ ಮೇಲೆ ಕಾಣೋದು ಎಂದು ಕಾಯುತ್ತಿದ್ದಾರೆ.
66
ನಟನೆ ತರಬೇತಿ ಪಡೆದ ಗೌರಿ
ಗೌರಿ ಈಗಾಗಲೇ ನಟನಾ ತರಬೇತಿ ಕೂಡ ಪಡೆದಿದ್ದಾರೆ. ಡಿಗ್ರಿ ಪಡೆದ ಬಳಿಕ ನಟನೆಯ ಕಡೆಗೆ ಹೆಚ್ಚು ಒಲವು ತೋರಿಸಿಕೊಂಡಿರುವ ಗೌರಿ, ವಿವಿಧ ನಾಟಕಗಳಲ್ಲೂ ಭಾಗವಹಿಸಿದ್ದಾರೆ. ಅಷ್ಟೇ ಅಲ್ಲದೇ ಗೌರಿ ಗಾಯಕಿ ಕೂಡ ಹೌದು. ಗೌರಿ ಸದ್ಯ ನೆಟ್ಟಿಗರ ಫೇವರಿಟ್ ಆಗಲು ಮುಖ್ಯ ಕಾರಣ ಅವರ ಸಿಂಪಲ್ ಲುಕ್. ಇವರ ಪಕ್ಕದ್ಮನೆ ಹುಡುಗಿ ಲುಕ್ಕನ್ನೇ ಜನ ಇಷ್ಟಪಟ್ಟಿದ್ದು, ಹೀರೋಯಿನ್ ಆಗಿ ನೋಡೋದಕ್ಕೆ ಕಾಯುತ್ತಿದ್ದಾರೆ.