ಗೆಳೆಯ ಅಂಬಿ ಪುತ್ರನ ಮದ್ವೆಲಿ ಬಿಳಿ ಪಂಚೆ- ಶರ್ಟ್‌ನಲ್ಲಿ ಮಿಂಚಿದ ರಜನಿಕಾಂತ್: ಇಲ್ಲಿವೆ ತಾರೆಯರ ಫೋಟೋಗಳು

Published : Jun 05, 2023, 11:25 AM ISTUpdated : Jun 05, 2023, 11:40 AM IST

ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಮದ್ವೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ಮೋಹನ್ ಬಾಬು, ವೆಂಕಯ್ಯ ನಾಯ್ಡು ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು. 

PREV
111
ಗೆಳೆಯ ಅಂಬಿ ಪುತ್ರನ ಮದ್ವೆಲಿ ಬಿಳಿ ಪಂಚೆ- ಶರ್ಟ್‌ನಲ್ಲಿ ಮಿಂಚಿದ ರಜನಿಕಾಂತ್: ಇಲ್ಲಿವೆ ತಾರೆಯರ ಫೋಟೋಗಳು

ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಇಂದು (ಜೂನ್ 5) ಅದ್ದೂರಿಯಾಗಿ ದಾಂಪತ್ಯಕ್ಕೆ ಕಾಲಿಟ್ಟರು. ಫ್ಯಾಷನ್ ಡಿಸೈನರ್ ಅವಿವಾ ಬಿಡಪ ಜೊತೆ ಅಭಿಷೇಕ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಂದು ಬೆಳಗ್ಗೆ 9:30 ರಿಂದ 10:30 ವರೆಗೆ ನಡೆದ ಮಹೂರ್ತದಲ್ಲಿ ಅಭಿಷೇಕ್ ಮತ್ತು ಅವಿವಾ ಪತಿ-ಪತ್ನಿಯರಾದರು. 

211

ಅಭಿಷೇಕ್ ಕುರ್ತಾ ಮತ್ತು ಪಂಚೆಯಲ್ಲಿ ಕಾಣಿಸಿಕೊಂಡರೆ ಅವಿವಾ ಕೆಂಪು ಬಣ್ಣದ ಜೆರಿ ಸೀರೆಯಲ್ಲಿ ಮಿಂಚಿದ್ದಾರೆ. ಇಬ್ಬರ ಮದುವೆ ಗೌಡರ ಸಾಂಪ್ರದಾಯದ ಪ್ರಕಾರ ನೆರವೇರಿದೆ. ಬೆಂಗಳೂರಿನ ಅರಮನೆ ಮೈದಾನದ ಚಾಮರವಜ್ರದಲ್ಲಿ ಅಭಿಷೇಕ್ ಅಂಬರೀಷ್ ಬಹುಕಾಲದ ಗೆಳತಿ ಅವಿವಾಗೆ ಮಾಂಗಲ್ಯಧಾರಾಣೆ ಮಾಡಿದರು. 
 

311

ಅಭಿಷೇಕ್ ಮತ್ತು ಅವಿವಾ ಮದುವೆಗೆ ಅನೇಕ ಗಣ್ಯರು ಆಗಮಿಸಿದ್ದರು. ಕನ್ನಡ ಸಿನಿಮಾ ಗಣ್ಯರು ಮಾತ್ರವಲ್ಲದೇ ಪರಭಾಷೆಯ ತಾರೆಯರು ಆಗಮಿಸಿ ಶುಭಹಾರೈಸಿದ್ದಾರೆ. 

411

ಪರಭಾಷೆಯ ತಾರೆಯರಾದ ಸೂಪರ್ ಸ್ಟಾರ್ ರಜನಿಕಾಂತ್, ಮೋಹನ್ ಬಾಬು, ಮಂಚು ಮನೋಜ್, ಲಕ್ಷ್ಮೀ ಮಂಚು ಸೇರಿದಂತೆ ಅನೇಕರು ಆಗಮಿಸಿ ನವಜೋಡಿಗೆ ಶುಭಹಾರೈಸಿದ್ದಾರೆ. 
 

511

ಸೂಪರ್ ಸ್ಟಾರ್ ರಜನಿಕಾಂತ್ ಗೆಳೆಯ ಅಂಬಿ ಪುತ್ರನ ಮದ್ವೆಯಲ್ಲಿ ಬಿಳಿ ಪಂಚೆ ಮತ್ತು ಶರ್ಟ್‌ ಮಿಂಚಿದ್ದಾರೆ. ಅಭಿಷೇಕ್ ದಂಪತಿ ಜೊತೆ ಮಾತನಾಡಿ ಸಂತಸ ಪಟ್ಟಿದ್ದಾರೆ. 

611

ಇನ್ನೂ ಪುತ್ರನ ಮದ್ವೆಯಲ್ಲಿ ನಟಿ, ಸಂಸದೆ ಸುಮಲತಾ ಅಂಬರೀಷ್ ಬಿಳಿ ಮತ್ತು ಗೋಲ್ಡನ್ ಬಣ್ಣದ ಜೆರಿ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಮಾತನಾಡುತ್ತಿರುವ ಫೋಟೋ ಗಮನ ಸೆಳೆಯುತ್ತಿದೆ. ತನ್ನ ಸೊಸೆಯನ್ನು ರಜನಿಕಾಂತ್‌ಗೆ ಪರಿಚಯಿಸಿದ್ದಾರೆ. 
 

711

ಇನ್ನೂ ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡ ಅಂಬಿ ಪುತ್ರನ ಮದ್ವೆಗೆ ಆಗಮಿಸಿ ಅಭಿಷೇಕ್ ಮತ್ತು ಅವಿವಾ ಮದುಗೆ ಶುಭಹಾರೈಸಿದ್ದಾರೆ. ರಜನಿಕಾಂತ್, ಮೋಹನ್ ಬಾಬು ಮತ್ತು ವೆಂಕಯ್ಯ ನಾಯ್ಡು ಒಟ್ಟಿಗೆ ಕ್ಯಾಮರಾಗೆ ಸೆರೆಯಾಗಿದ್ದಾರೆ. 
 

811

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಮದುವೆಗೆ ಆಗಮಿಸಿ ನವ ಜೋಡಿಗೆ ಶುಭಹಾರಿಸಿದ್ದಾರೆ. 

911

ಅಭಿಷೇಕ್ ಮತ್ತು ಅವಿವಾ ಜೋಡಿಗೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ಆಗಮಿಸಿ ಶುಭಹಾರೈಸಿದ್ದಾರೆ. ಯಶ್ ಶೇರ್ವಾನಿಯಲ್ಲಿ ಕಾಣಿಸಿಕೊಂಡರೆ ರಾಧಿಕಾ ಧಾವಣಿಯಲ್ಲಿ ಮಿಂಚಿದ್ದಾರೆ. 

1011

ಅಂಬರೀಷ್ ನಟನೆಯ ಕೊನೆಯ ಸಿನಿಮಾ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಗುರುದತ್ ಗಾಣಿಗ, ಅಭಿಷೇಕ್ ಮದ್ವೆ ಸಂಭ್ರಮದಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭಹಾರೈಸಿದ್ದಾರೆ. 

1111

7ಕ್ಕೆ ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಮೂಲಗಳ ಪ್ರಕಾರ ಮಂಡ್ಯದಲ್ಲೂ ಅದ್ದೂರಿ ಬಾಡೂಟ ವ್ಯವಸ್ಥೆ ಹಾಗೂ ಆರತಕ್ಷತೆ ಕಾರ್ಯಕ್ರಮ ಅಯೋಜಿಸಲಾಗಿದೆ ಎನ್ನಲಾಗಿದೆ. 
 

Read more Photos on
click me!

Recommended Stories