'ಡಾರ್ಲಿಂಗ್ ಫ್ರೆಂಡ್' ಪ್ರಶಾಂತ್ ನೀಲ್ ಹುಟ್ಟುಹಬ್ಬ ಆಚರಿಸಿದ ಪ್ರಭಾಸ್: ಇಲ್ಲಿವೆ ಸುಂದರ ಫೋಟೋಗಳು

Published : Jun 04, 2023, 11:33 AM IST

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನೀಲ್ ಹುಟ್ಟುಹಬ್ಬವನ್ನು ಪ್ರಭಾಸ್  ಅದ್ದೂರಿಯಾಗಿ ಅಚರಣೆ ಮಾಡಿದ್ದಾರೆ. 

PREV
16
'ಡಾರ್ಲಿಂಗ್ ಫ್ರೆಂಡ್' ಪ್ರಶಾಂತ್ ನೀಲ್ ಹುಟ್ಟುಹಬ್ಬ ಆಚರಿಸಿದ ಪ್ರಭಾಸ್: ಇಲ್ಲಿವೆ ಸುಂದರ ಫೋಟೋಗಳು

ಪ್ರಶಾಂತ್ ನೀಲ್ ಕನ್ನಡ ಸಿನಿಮಾರಂಗ ಖ್ಯಾತ ನಿರ್ದೇಶಕ. ಇಡೀ ಭಾರತ ಅಷ್ಟೆಯಲ್ಲ ವಿಶ್ವವೇ ಕನ್ನಡ ಸಿನಿಮಾರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ. ಜಾಗತಿಕ ಮಟ್ಟದಲ್ಲಿ ಕನ್ನಡ ಕೀರ್ತಿ ಪತಾಕೆ ಹಾರಿದ ಹೆಮ್ಮೆಯ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಇಂದು (ಜೂನ್ 4) ಹುಟ್ಟುಹಬ್ಬ ಸಂಭ್ರಮ. 
 

26

ಪ್ರಶಾಂತ್ ನೀಲ್ ಭಾರತದ ಬಹುಬೇಡಿಕೆಯ ನಿರ್ದೇಶಕರಲ್ಲಿ ಒಬ್ಬರು. ಉಗ್ರಂ, ಕೆಜಿಎಫ್ ಸರಣಿ ಬಳಿಕ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿರುವ ಪ್ರಶಾಂತ್ ನೀಲ್ ಸದ್ಯ ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. 

36

ಬ್ಲಾಕ್‌ಬಸ್ಟರ್ ಕೆಜಿಎಫ್ 2 ಬಳಿಕ ಪ್ರಶಾಂತ್ ನೀಲ್ ಸಲಾರ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಟಾಲಿವುಡ್ ಸ್ಟಾರ್ ಪ್ರಭಾಸ್ ಜೊತೆ ಪ್ರಶಾಂತ್ ನೀಲ್ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಸಲಾರ್ ಸಿನಿಮಾದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. 

46

ಅಂದಹಾಗೆ ಪ್ರಶಾಂತ್ ನೀಲ್ ಹುಟ್ಟುಹಬ್ಬವನ್ನು ಪ್ರಭಾಸ್ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಇಡೀ ಸಲಾರ್ ತಂಡ ಕೇಕ್ ಕತ್ತರಿಸಿ ಸಂಭ್ರಮಿಸಿದೆ. ಸಂಭ್ರಮದಲ್ಲಿ ಪ್ರಶಾಂತ್ ನೀಲ್ ಪತ್ನಿ, ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ಸೇರಿದಂತೆ ಅನೇಕರು ಭಾಗಿಯಾಗಿದ್ದರು. 

56

ಜನ್ಮದಿನ ಆಚರಣೆ ಬಳಿಕ ನಟ ಪ್ರಭಾಸ್ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಪ್ರೀತಿಯ ವಿಶ್ ಮಾಡಿದ್ದಾರೆ. ಫೋಟೋ ಶೇರ್ ಮಾಡಿ ಡಾರ್ಲಿಂಗ್ ಫ್ರೆಂಡ್ ಪ್ರಶಾಂತ್ ನೀಲ್ ಅವರಿಗೆ ಹುಟ್ಟುಹಬ್ಬದದ ಶುಭಾಶಯಗಳು ಎಂದು ಹೇಳಿದ್ದಾರೆ. 

66

ಸಲಾರ್ ಸಿನಿಮಾದಿಂದ ವಿಶೇಷ ವಿಡಿಯೋ ರಿಲೀಸ್ ಮಾಡಿ ಪ್ರಶಾಂತ್ ನೀಲ್ ಅವರಿಗೆ ವಿಶ್ ಮಾಡಲಾಗಿದೆ. ಸಲಾರ್ ಮೇಕಿಂಗ್ ವಿಡಿಯೋ ಇದಾಗಿದ್ದು ಪ್ರಶಾಂತ್ ಅವರ ಅಪರೂಪದ ಕ್ಷಣಗಳನ್ನು ಸೆರೆಹಿಡಿದು ವಿಡಿಯೋ ಮೂಲಕ ಬಿಡುಗಡೆ ಮಾಡಿ ಶುಭಕೋರಲಾಗಿದೆ. 
 

Read more Photos on
click me!

Recommended Stories