‘ಸು ಫ್ರಂ ಸೋ’ ಚಿತ್ರವನ್ನು 7 ಲಕ್ಷ 75 ಸಾವಿರಕ್ಕೂ ಅಧಿಕ ಮಂದಿ ನೋಡಿದ್ದಾರೆ ಎಂದು ಈ ರಿಪೋರ್ಟ್‌ನಲ್ಲಿ ರಿವೀಲ್ ಆಗಿದ್ದು, ಸಿನಿಮಾದ ರಿಪೋರ್ಟ್ ಕಾರ್ಡ್ ಅನ್ನು ರಾಜ್ ಬಿ ಶೆಟ್ಟಿ ಬಿಡುಗಡೆ ಮಾಡಿದ್ದಾರೆ.
‘ಸು ಫ್ರಂ ಸೋ’ ಸಿನಿಮಾದ ರಿಪೋರ್ಟ್ ಕಾರ್ಡ್ ಅನ್ನು ರಾಜ್ ಬಿ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ಗುರುವಾರದವರೆಗೆ ಈ ಚಿತ್ರವನ್ನು 7 ಲಕ್ಷ 75 ಸಾವಿರಕ್ಕೂ ಅಧಿಕ ಮಂದಿ ನೋಡಿದ್ದಾರೆ ಎಂದು ಈ ರಿಪೋರ್ಟ್‌ನಲ್ಲಿ ರಿವೀಲ್ ಆಗಿದೆ.
27
ರಿಲೀಸ್ ಆಗಿ ಇಷ್ಟು ದಿನಗಳಾದರೂ ಚಿತ್ರ ತುಂಬಿದ ಗೃಹದ ಪ್ರದರ್ಶನ ಕಾಣುತ್ತಿದ್ದು, ಬಹುತೇಕ ವೀಕೆಂಡ್ ಶೋಗಳು ಮೊದಲೇ ಹೌಸ್‌ಫುಲ್ ಆಗಿವೆ ಎಂದು ರಾಜ್ ಬಿ ಶೆಟ್ಟಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
37
ಸು ಫ್ರಮ್ ಸೋ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಸ್ವಾಮಿಜಿ ಕ್ಯಾರೆಕ್ಟರ್ ಮಾಡಿದ್ದಾರೆ. ಶ್ರೀ ಕರುಣಾಕರ ಗುರೂಜೀಗಳು ಅನ್ನೋ ರೋಲ್ ಮಾಡಿದ್ದಾರೆ. ಸದ್ಯ ಈ ಸಿನಿಮಾ ಎರಡನೇ ವಾರವೂ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ.
ಸು ಫ್ರಮ್ ಸೋ ಸಿನಿಮಾಗೆ ಜೆಪಿ ತುಮಿನಾಡ್ ನಿರ್ದೇಶನ ಇದೆ. ಈ ಚಿತ್ರವನ್ನು ರಾಜ್ ಬಿ. ಶೆಟ್ಟಿ ಮೊದಲಾದವರು ನಿರ್ಮಿಸಿದ್ದಾರೆ. ಶನೀಲ್ ಗೌತಮ್, ಪ್ರಕಾಶ್ ತುಮಿನಾಡ, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಸಂಧ್ಯಾ ಅರಕೆರೆ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
57
ಎಲ್ಲೆಲ್ಲೂ‘ಬಾವ’ನ ಹವಾ: ‘ಸು ಫ್ರಂ ಸೋ’ ಸಿನಿಮಾದ ‘ಬಂದರು ಬಂದರು ಬಾವ ಬಂದರು’ ಹಾಡು ಭಾರೀ ಜನಪ್ರಿಯತೆ ಪಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಬಾವನ ಹವಾ ಸೃಷ್ಟಿಯಾಗಿದೆ.
67
ನಿರೀಕ್ಷೆಗೂ ಮೀರಿದ ಜನಪ್ರಿಯತೆ ಕಂಡು ಖುಷಿಯಾಗಿರುವ ನಿರ್ಮಾಪಕ ರಾಜ್ ಬಿ ಶೆಟ್ಟಿ, ರವಿ ಅಣ್ಣ ಪಾತ್ರಧಾರಿ ಶನೀಲ್ ಗೌತಮ್ ಹಾಗೂ ನಿರ್ದೇಶಕ, ನಟ ಜೆ ಪಿ ತುಮಿನಾಡು ಈ ಹಾಡಿಗೆ ಕುಡುಕ ಬಾವನ ಪಾತ್ರದಂತೆ ಹೆಜ್ಜೆ ಹಾಕಿದ್ದಾರೆ.
77
‘ಇದು ನಮ್ಮ ಬಾವ ಬಂದರು ವರ್ಶನ್. ಥ್ಯಾಂಕ್ಯೂ ಕರ್ನಾಟಕ, ನೆಕ್ಸ್ಟ್ ಸ್ಟಾಪ್ ಕೇರಳ’ ಎಂದು ರಾಜ್ ಶೆಟ್ಟಿ ಹೇಳಿದ್ದಾರೆ. ಈ ಹಾಡು ಇನ್ನೂ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿಲ್ಲ. ಕೆಲವೇ ಸೆಕೆಂಡ್‌ಗಳ ಹಾಡಿನ ಟ್ಯೂನ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಸಾಕಷ್ಟು ಮಂದಿ ಇದಕ್ಕೆ ರೀಲ್ಸ್ ಮಾಡಿದ್ದಾರೆ.