ಅನೀಶ್‌ ತೇಜೇಶ್ವರ್‌ಗೆ 'ಲವ್‌ ಓಟಿಪಿ' ಕಳುಹಿಸಿದ ಆರೋಹಿ ನಾರಾಯಣ್‌: ಏನಿದು ಹೊಸ ಸ್ಟೋರಿ!

Published : Aug 02, 2025, 05:52 PM IST

ಅನೀಶ್‌ ತೇಜೇಶ್ವರ್‌ ಅವರ ನಟನೆಯ ‘ಲವ್‌ ಓಟಿಪಿ’ ಸಿನಿಮಾಕ್ಕೆ ಆರೋಹಿ ನಾರಾಯಣ್‌ ನಾಯಕಿ. ಚಿತ್ರದ ಶೀರ್ಷಿಕೆಯಲ್ಲಿರುವ ‘ಓಟಿಪಿ’ ಎಂದರೆ ಓವರ್‌ ಟಾರ್ಚರ್‌ ಪ್ರೆಜರ್‌ ಎಂದರ್ಥ.

PREV
15

ಅನೀಶ್‌ ತೇಜೇಶ್ವರ್‌ ಅವರ ನಟನೆಯ ‘ಲವ್‌ ಓಟಿಪಿ’ ಸಿನಿಮಾಕ್ಕೆ ಆರೋಹಿ ನಾರಾಯಣ್‌ ನಾಯಕಿ. ನಟನೆ ಜತೆಗೆ ಅನೀಶ್‌ ತೇಜೇಶ್ವರ್‌ ಅವರೇ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಎಂ ವಿಜಯ್‌ ರೆಡ್ಡಿ ನಿರ್ಮಿಸಲಿದ್ದಾರೆ.

25

‘ಸನಾ ಎಂಬ ಪಾತ್ರ ನನ್ನದು. ತರಲೆ ಟೀನೇಜ್‌ ಹುಡುಗಿ ಹಾಗೂ ಗಂಭೀರ ಉದ್ಯೋಗಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ತೆಲುಗು ಹಾಗೂ ಕನ್ನಡದಲ್ಲಿ ಈ ಸಿನಿಮಾ ಬರುತ್ತಿದೆ. ಇದು ನನ್ನ ಮೊದಲ ತೆಲುಗು ಸಿನಿಮಾ. ಚಿತ್ರ ಈಗ ರಿಲೀಸ್‌ಗೆ ರೆಡಿ ಇದೆ’ ಎಂದಿದ್ದಾರೆ ಆರೋಹಿ.

35

ಅಂದಹಾಗೆ ಚಿತ್ರದ ಶೀರ್ಷಿಕೆಯಲ್ಲಿರುವ ‘ಓಟಿಪಿ’ ಎಂದರೆ ಓವರ್‌ ಟಾರ್ಚರ್‌ ಪ್ರೆಜರ್‌ ಎಂದರ್ಥ. ಈ ತಲೆಮಾರಿನ ಯುವ ಪ್ರೇಮಿಗಳ ಕತೆಯನ್ನು ಒಳಗೊಂಡ ಚಿತ್ರವಿದು. ನಿಮ್ಮ ನಿರೀಕ್ಷೆಗಳನ್ನು ಪೂರೈಸಲು ನಮ್ಮ ತಂಡವು ಶ್ರಮಿಸುತ್ತಿದೆ.

45

ನೀವು ನನ್ನನ್ನು ಮತ್ತೊಂದು ಭರವಸೆಯ ಮತ್ತು ವಿಶಿಷ್ಟ ಪಾತ್ರದಲ್ಲಿ ನೋಡುತ್ತೀರಿ ಎಂದು ನಾನು ನಂಬುತ್ತೇನೆ. ಹೆಚ್ಚಿನ ಪ್ರೇಕ್ಷಕರನ್ನು ತಲುಪಲು, ನಾವು ಕನ್ನಡ ಮತ್ತು ತೆಲುಗು ಎರಡರಲ್ಲೂ ಏಕಕಾಲದಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ ಎಂದಿದ್ದಾರೆ ಅನೀಶ್‌ ತೇಜೇಶ್ವರ್‌.

55

ಇನ್ನು 2010ರಲ್ಲಿ ತೆರೆಕಂಡ ನಮ್ಮ ಏರಿಯಾದಲ್ಲೊಂದಿನ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಅನೀಶ್‌ ತೇಜೇಶ್ವರ್‌ ಪಾದಾರ್ಪಣೆ ಮಾಡಿದರು. ಇವರಿಗೆ ಹೆಸರು ತಂದು ಕೊಟ್ಟಿದ್ದು `ಅಕಿರ' ಚಿತ್ರ.

Read more Photos on
click me!

Recommended Stories