ನನಗೆ ಯಾರ ಜೊತೆಯೂ ಮನಸ್ತಾಪ ಇಲ್ಲ: ರಿಷಬ್ ಜೊತೆಗಿನ ಸಂಬಂಧ ಕುರಿತು ರಾಜ್ ಬಿ ಶೆಟ್ಟಿ ಹೇಳಿದ್ದೇನು?

Published : Dec 18, 2025, 04:26 PM IST

ನನಗಂತೂ ಏನೂ ಮನಸ್ತಾಪವಿಲ್ಲ. ನಾನು ಎಲ್ಲೂ ಯಾರ ಹೆಸರೂ ಮಿಸ್‌ ಮಾಡಲಿಲ್ಲ. ಅವರೂ ಉದ್ದೇಶಪೂರ್ವಕವಾಗಿ ಮಿಸ್‌ ಮಾಡಿದ್ದಾರೆ ಅಂತ ಅನಿಸುವುದಿಲ್ಲ. ಇಂಥದ್ದನ್ನೆಲ್ಲ ಅಲ್ಲಲ್ಲೇ ಬಿಟ್ಟು ಮುಂದಕ್ಕೆ ಹೋಗಬೇಕು ಎಂದರು ರಾಜ್ ಬಿ ಶೆಟ್ಟಿ.

PREV
15
ಒಂದು ಪಾತ್ರ ಮಾಡಿದ್ದೇನಷ್ಟೇ

ನಾನು 45 ಸಿನಿಮಾ ಬಗ್ಗೆ ಮಾತಾಡಬೇಕಾದರೆ ಮೊದಲು ಹೇಳುವುದು ಶಿವಣ್ಣ ಅವರ ಹೆಸರು. ಆ ಬಳಿಕ ಉಪೇಂದ್ರ, ನಂತರ ಅರ್ಜುನ್‌ ಜನ್ಯಾ ಹೆಸರು ಉಲ್ಲೇಖಿಸುತ್ತೇನೆ. ಈ ಸಿನಿಮಾದಲ್ಲಿ ನಾನು ಒಂದು ಪಾತ್ರ ಮಾಡಿದ್ದೇನಷ್ಟೇ.

25
ಹೆಸರು ನೆನಪಿಗೆ ಬರದೇ ಇರಬಹುದು

ಕೆಲವೊಮ್ಮೆ ಫ್ಲೋನಲ್ಲಿ ಮಾತನಾಡುವಾಗ ನನ್ನ ಹೆಸರು ನೆನಪಿಗೆ ಬರದೇ ಇರಬಹುದು. ಉದ್ದೇಶಪೂರ್ವಕವಾಗಿ ಅದನ್ನು ಮಾಡುತ್ತಾರೆ ಎಂದು ನಾನು ಅಂದುಕೊಳ್ಳುವುದಿಲ್ಲ. ಚುಚ್ಚಬೇಕು ಅಂತ ಹೀಗೆ ಮಾಡುತ್ತಾರೆ ಅಂದರೆ ಅದು ನನಗೆ ತಾಗುವುದೂ ಇಲ್ಲ ಎಂದು ರಾಜ್‌ ಬಿ. ಶೆಟ್ಟಿ ಹೇಳಿದ್ದಾರೆ.

35
ಮನಸ್ತಾಪ ಇದೆ ಎಂಬ ರೂಮರ್‌

ಶಿವಣ್ಣ, ಉಪೇಂದ್ರ, ರಾಜ್‌ ಬಿ. ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘45’ ಸಿನಿಮಾಗೆ ಶುಭ ಹಾರೈಸುವ ವೇಳೆ ರಿಷಬ್‌ ಶೆಟ್ಟಿ ಅವರು, ರಾಜ್‌ ಬಿ.ಶೆಟ್ಟಿ ಅವರ ಹೆಸರನ್ನು ಉಲ್ಲೇಖಿಸಿಲ್ಲ ಎನ್ನುವ ಕುರಿತು ಚರ್ಚೆ ನಡೆಯುತ್ತಿದ್ದು, ಅವರಿಬ್ಬರ ನಡುವೆ ಮನಸ್ತಾಪ ಇದೆ ಎಂಬ ರೂಮರ್‌ ಹರಡಿದೆ. ಅದಕ್ಕೆ ಸಂಬಂಧಿಸಿದಂತೆ ರಾಜ್ ಬಿ. ಶೆಟ್ಟಿ ಈಗ ಸ್ಪಷ್ಟನೆ ನೀಡಿದ್ದಾರೆ.

45
ಸೀರಿಯಸ್‌ ಆಗಿ ತೆಗೆದುಕೊಳ್ಳಬೇಕಿಲ್ಲ

‘ನನಗಂತೂ ಏನೂ ಮನಸ್ತಾಪವಿಲ್ಲ. ನಾನು ಎಲ್ಲೂ ಯಾರ ಹೆಸರೂ ಮಿಸ್‌ ಮಾಡಲಿಲ್ಲ. ಅವರೂ ಉದ್ದೇಶಪೂರ್ವಕವಾಗಿ ಮಿಸ್‌ ಮಾಡಿದ್ದಾರೆ ಅಂತ ಅನಿಸುವುದಿಲ್ಲ. ಇಂಥದ್ದನ್ನೆಲ್ಲ ಅಲ್ಲಲ್ಲೇ ಬಿಟ್ಟು ಮುಂದಕ್ಕೆ ಹೋಗಬೇಕು, ಅಷ್ಟು ಸೀರಿಯಸ್‌ ಆಗಿ ತೆಗೆದುಕೊಳ್ಳಬೇಕಿಲ್ಲ’ ಎಂದೂ ಅವರು ಹೇಳಿದ್ದಾರೆ.

55
ಹಾವಳಿ ಕೊಡುವ ಚಿತ್ರ ಮಾಡಬೇಕು

ಹಾವಳಿ ಕೊಡುವ ಚಿತ್ರ ಮಾಡಬೇಕು

ನಾನು 45 ಚಿತ್ರದಲ್ಲಿ ಸ್ಟಾರ್‌ಗಳ ಜೊತೆಗೆ ಕೆಲಸ ಮಾಡಿದ್ದೇನೆ ಅನಿಸಲಿಲ್ಲ. ಶಿವಣ್ಣ, ಉಪೇಂದ್ರ ಅವರು ಅಷ್ಟು ಸರಳವಾಗಿದ್ದರು. ನಾವು ಪರಭಾಷೆ ಹಾವಳಿ ಎನ್ನುತ್ತೇವೆ. ನಾವು ಕೂಡ ಹಾವಳಿ ಕೊಡುವ ಚಿತ್ರ ಮಾಡಬೇಕು. ಆ ರೀತಿಯ ಚಿತ್ರ ‘45’ ಆಗಲಿದೆ ಎನ್ನುವ ಭರವಸೆ ಇದೆ ಎಂದರು.

Read more Photos on
click me!

Recommended Stories