Ragini Dwivedi: ಕನ್ನಡ ಚಿತ್ರರಂಗದಲ್ಲಿ ತುಪ್ಪದ ಬೆಡಗಿ ಎಂದೆ ಗುರುತಿಸಿಕೊಂಡ ನಟಿ ರಾಗಿಣಿ ದ್ವಿವೇದಿ, ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಹೊಸದೊಂದು ಫೋಟೊ ಶೇರ್ ಮಾಡಿದ್ದಾರೆ. ಈ ಫೋಟೊಗಳಲ್ಲಿ ವ್ಯಕ್ತಿಯೊಬ್ಬರ ಜೊತೆ ನಟಿ ಕ್ಲೋಸ್ ಆಗಿ ಕಾಣಿಸಿಕೊಂಡಿದ್ದು, ನಟಿ ಲವ್ವಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ.
ಕನ್ನಡ ಚಿತ್ರರಂಗದ ಖ್ಯಾತ ನಟಿ, ತಮ್ಮ ಬೋಲ್ಡ್, ಹಾಟ್ ಲುಕ್ ಗಳ ಮೂಲಕ ಗಮನ ಸೆಳೆಯುವ ಸುಂದರಿ ರಾಗಿಣಿ ದ್ವಿವೇದಿ ಇತ್ತೀಚೆಗೆ ಶೇರ್ ಮಾಡಿರುವ ಒಂದು ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಪ್ರೀತಿ ಮಾಡ್ತಿದ್ದಾರೆ ಎನ್ನುವ ಸುದ್ದಿ ಕೂಡ ಹರಡಿದೆ.
26
ನಟಿ ಶೇರ್ ಮಾಡಿರುವ ಫೋಟೊ ಯಾವುದು?
ನಟಿ ಸೆಲ್ಫಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಪಂಜಾಬಿ ವ್ಯಕ್ತಿಯೊಬ್ಬರು, ಹಿಂಬದಿಯಿಂದ ರಾಗಿಣಿಯನ್ನು ತಬ್ಬಿಕೊಂಡಿದ್ದಾರೆ. ಫೋಟೊದಲ್ಲಿ ರಾಗಿಣಿ ಮುದ್ದಾಗಿ ನಗುತ್ತಾ ಪೋಸ್ ಕೊಟ್ಟಿದ್ದಾರೆ. ನಟಿ ಜೊತೆ ಕಾಣಿಸಿಕೊಂಡಿರುವವರು ಗುರ್ಮೀತ್ ಅಹುಲ್ವಾಲಿಯಾ.
36
ಕ್ಯಾಪ್ಶನ್ ಏನ್ ಹೇಳ್ತಿದೆ?
ಇನ್ನು ಫೋಟೋಗಳ ಜೊತೆ ನಟಿ ಕೊಟ್ಟಿರುವ ಕ್ಯಾಪ್ಶನ್ ಕೂಡ ಮತ್ತಷ್ಟು ಅನುಮಾನವನ್ನು ಹುಟ್ಟುಹಾಕಿದೆ. ಅದಕ್ಕೆ ಕಾರಣ ಏನಂದ್ರೆ, ನಟಿ ಕ್ಯಾಪ್ಶನಲ್ಲಿ “TO THE MOST BEAUTIFUL BONDS” ಎಂದು ಬರೆದುಕೊಂಡಿದ್ದಾರೆ. ಇನ್ನು ಹ್ಯಾಶ್ ಟ್ಯಾಗ್ ಹಾಕಿ ಫ್ರೆಂಡ್ಸ್ ಡೆ, ಬೆಸ್ಟ್ ಫ್ರೆಂಡ್ ಆಫ್ ದಿ ಇಯರ್ ಎಂದು ಬರೆದುಕೊಂಡಿದ್ದಾರೆ.
ರಾಗಿಣಿ ಜೊತೆ ವ್ಯಕ್ತಿಯೊಬ್ಬ ಅಷ್ಟೊಂದು ಕ್ಲೋಸ್ ಆಗಿ ಫೋಟೊ ಕ್ಲಿಕ್ ಮಾಡಿರೋದು ನೋಡಿ ಜನ
ಇವರಿಗೆ ಕರ್ನಾಟಕದವರು ಯಾರೂ ಸಿಕ್ಕಿಲ್ವಾ?
ಅಕ್ಕ ಕೊನೆಗೂ ಬಾವನನ್ನು ಪರಿಚಯ ಮಾಡಿಕೊಟ್ರು
ಇವರೇನಾ ನಿಮ್ಮ ಗಂಡ
ಯಾಕೆ ಈ ರೀತಿ ಫೋಟೊಗಳನ್ನು ಹಾಕ್ತೀರಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
56
ಹಿಂದೆಯೂ ಲವ್ ಗಾಸಿಪ್ ಇತ್ತು
ಕೆಲವು ತಿಂಗಳ ಹಿಂದೆ ರಾಗಿಣಿ ಹಾಗೂ ನಟ ರಾಜವರ್ಧನ್ ಒಟ್ಟೊಟ್ಟಿಗೆ ಎಲ್ಲಾ ಕಡೆ ಕಾಣಿಸಿಕೊಳ್ಳುತ್ತಾರೆ, ಅವರಿಬ್ಬರ ಮಧ್ಯೆ ಲವ್ ಇದೆ ಎನ್ನುವ ಗಾಸಿಪ್ ಹರಡಿತ್ತು. ಆದರೆ ನಟ ರಾಜವರ್ಧನ್ ಅದನ್ನು ತಳ್ಳಿ ಹಾಕಿದ್ದರು. ಅವರು ನನ್ನ ಒಳ್ಳೆ ಫ್ರೆಂಡ್ ಅಷ್ಟೇ, ನಾವು ಒಟ್ಟಿಗೆ ಸೇರಿ ಕೆಲಸ ಮಾಡುತ್ತೇವೆ, ಗಾಸಿಪ್ ಗೆ ತಲೆ ಕೆಡಿಸಲ್ಲ ಎಂದಿದ್ದರು.
66
ಸದ್ಯ ಏನು ಮಾಡ್ತಿದ್ದಾರೆ ರಾಗಿಣಿ
ರಾಗಿಣಿ ಕಳೆದ ವರ್ಷ ಸಿಕ್ಕಾಪಟ್ಟೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಸಂಜು ವೆಡ್ಸ್ ಗೀತಾ 2, ಗಜರಾಮ, ಹೃದಯಪೂರ್ವಂ, ವೃಷಭ, ಸಿನಿಮಾಗಳಲ್ಲಿ ನಟಿಸಿದ್ದರು. ಈ ವರ್ಷ ಸಾರಿ ಕರ್ಮ ರಿಟರ್ನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.