Radhika Pandit ಹುಟ್ಟುಹಬ್ಬ: ಯಶ್​ ವಿಶೇಷ ಗಿಫ್ಟ್! ನಟಿಗೆ ಈಗ ಎಷ್ಟು ವರ್ಷ? ಸಿನಿಮಾಕ್ಕೆ ಮರಳ್ತಾರಾ?

Published : Mar 07, 2026, 05:09 PM IST

ನಟಿ ರಾಧಿಕಾ ಪಂಡಿತ್ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು, ಅವರ ವಯಸ್ಸು, ಪತಿ ಯಶ್ ನೀಡಿದ ಉಡುಗೊರೆ ಮತ್ತು ಸಿನಿಮಾಗೆ ಮರಳುವ ಬಗ್ಗೆ ಅಭಿಮಾನಿಗಳ ಹಾರೈಕೆಯ ಕುರಿತು ಮಾಹಿತಿ ಇಲ್ಲಿದೆ. 

PREV
16
ರಾಧಿಕಾ ಪಂಡಿತ್​ ಹುಟ್ಟುಹಬ್ಬ

ಇಂದು ನಟಿ ರಾಧಿಕಾ ಪಂಡಿತ್​ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ದಿನವನ್ನು ಅಭಿಮಾನಿಗಳ ಜೊತೆ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ ನಟಿ. ಇದಾಗಲೇ ಹಲವಾರು ಅಭಿಮಾನಿಗಳು ನಟಿಗೆ ಕಾತರದಿಂದ ಕಾಯುತ್ತಿದ್ದು, ಶುಭಾಶಯಗಳ ಸುರಿಮಳೆಯನ್ನೇಗೈದಿದ್ದಾರೆ.

26
ನಟಿಗೆ ವಯಸ್ಸೆಷ್ಟು?

ಗೂಗಲ್​ ದಾಖಲೆ ಪ್ರಕಾರ, ನಟಿಗೆ ಈಗ 42 ವರ್ಷ ವಯಸ್ಸು. 1984ರಲ್ಲಿ ನಟಿ ಹುಟ್ಟಿದ್ದು, ಇಂತ 42ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಸದ್ಯ ಸಿನಿಮಾದಿಂದ ದೂರ ಇದ್ದು, ಮಕ್ಕಳ ಲಾಲನೆ ಪಾಲನೆ ಮಾಡುತ್ತಿದ್ದಾರೆ ರಾಧಿಕಾ. ಅವರು ಮತ್ತೆ ಸಿನಿಮಾಕ್ಕೆ ಮರಳಬೇಕು ಎನ್ನುವುದು ಅವರ ಅಭಿಮಾನಿಗಳ ಹಾರೈಕೆ.

36
ಯಶ್​ ಉಡುಗೊರೆ ಏನು?

ಇದೇ ವೇಳೆ ಯಶ್​ ಕೊಟ್ಟ ಉಡುಗೊರೆ ಬಗ್ಗೆ ಕೇಳಿದ ಪ್ರಶ್ನೆಗೆ ನಟಿ, ‘ನಮ್ಮ ಪಾಲಿಗೆ ಪರಸ್ಪರ ಸಮಯ ಕೊಟ್ಟುಕೊಳ್ಳುವುದು ದೊಡ್ಡ ಉಡುಗೊರೆ. ವಸ್ತುಗಳ ಉಡುಗೊರೆ ಯಾತ್ತೂ ಮಾಡಲ್ಲ. ಇಬ್ಬರೂ ಜೊತೆಯಾಗಿದ್ದರೆ ಅದಕ್ಕಿಂತ ದೊಡ್ಡ ಉಡುಗೊರೆ ಮತ್ತೊಂದಿಲ್ಲ ಎಂದಿದ್ದಾರೆ.

46
ಸೊಸೆಗೆ ವಿಷ್​

ಯಶ್​ ಅವರ ಅಮ್ಮ ಪುಷ್ಪ ಅರುಣ್​ ಕುಮಾರ್​ ಸೊಸೆಗೆ ವಿಷ್​ ಮಾಡಿದ್ದಾರೆ. ನಮ್ಮ ಅದ್ಭುತ ಸೊಸೆಗೆ ಹುಟ್ಟುಹಬ್ಬದ ಶುಭಾಶಯಗಳು. ನಿನ್ನ ಜೀವನ ಯಾವಾಗಲೂ ಖುಷಿ ಹಾಗೂ ಆಶೀರ್ವಾದಗಳಿಂದ ತುಂಬಿರಲಿ ಎಂದು ಹಾರೈಸಿದ್ದಾರೆ. ಅಷ್ಟೇ ಅಲ್ಲದೆ ಸೊಸೆಯ ಜೊತೆಗಿದ್ದ ಹಳೆಯ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ.

56
ಹಲವು ಸಿನಿಮಾಗಳಲ್ಲಿ ನಟನೆ

ಮೊಗ್ಗಿನ ಮನಸು ಚಿತ್ರದಲ್ಲಿ ಯಶ್​ ಜೊತೆ ರಾಧಿಕಾ ನಟಿಸಿದ್ದರು. ಇದಾದ ಬಳಿಕ ಹಲವಾರು ಹಿಟ್​ ಸಿನಿಮಾಗಳನ್ನು ನಟಿ ನೀಡಿದ್ದಾರೆ. ಅದ್ಧೂರಿ, ಅಲೆಮಾರಿ, ಹುಡುಗರು, ಕೃಷ್ಣನ್ ಲವ್ ಸ್ಟೋರಿ, ಡ್ರಾಮಾ, ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಪೀಕ್​ನಲ್ಲಿ ಇರುವಾಗಲೇ ಯಶ್​ ಜೊತೆ ಮದುವೆಯಾಯಿತು.

66
ಅಭಿಮಾನಿಗಳ ಹಾರೈಕೆ

ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿರೋ ರಾಧಿಕಾ ಪಂಡಿತ್​ ಆದಷ್ಟು ಬೇಗ ಸಿನಿಮಾಕ್ಕೆ ಮರಳಲಿ ಎನ್ನುವುದು ಅಭಿಮಾನಿಗಳ ಹಾರೈಕೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories