ಅಬ್ಬಬ್ಬಾ! ಸಂತೂರ್ ಮಮ್ಮಿ ಅಂದ್ರೆ ರಾಧಿಕಾ ಪಂಡಿತ್ ಎಂದ ನೆಟ್ಟಿಗರು!

First Published | Feb 3, 2024, 12:38 PM IST

ಗೋಲ್ಡನ್ ಬ್ರೌನ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡ ರಾಧಿಕಾ ಪಂಡಿತ್. ಸಿಂಪಲ್‌ ಲುಕ್‌ನ ಮೆಚ್ಚಿ ಕೊಂಡಾಡಿದ ನೆಟ್ಟಿಗರು.... 

ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಅಪ್ಲೋಡ್ ಮಾಡಿರುವ ಫೋಟೋ ವೈರಲ್ ಆಗುತ್ತಿದೆ.

ಗೋಲ್ಡನ್ ಬ್ರೌನ್ ಬಣ್ಣದ ಮ್ಯಾಕ್ಸಿಯಲ್ಲಿ ರಾಧಿಕಾ ಪಂಡಿತ್ ಫೋಟೋ ಅಪ್ಲೋಡ್ ಮಾಡಿದ್ದಾರೆ. ಇದಕ್ಕೆ ಸಿಂಪಲ್ ಆಗಿರುವ ಆಭರಣ ಧರಿಸಿದ್ದಾರೆ.

Latest Videos


ಬ್ಲ್ಯಾಕ್ ಬಣ್ಣದ ಹೀಲ್ಸ್‌, ಕೈಗೆ ಹಸಿರು ಬಣ್ಣದ ಬ್ರೇಸ್ಲೆಟ್‌, ವಜ್ರದ ಉಂಗುರ ಮತ್ತು ವಜ್ರದ ಕಿವಿ ಓಲೆ ಧರಿಸಿದ್ದಾರೆ. ಮೇಕಪ್ ತುಂಬಾನೇ ಕಡಿಮೆ.

 'ಹಲೋ ಟು ಥಿ ಮಂಥ್ ಆಫ್‌ ಲವ್' ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ. ಈ ಫೋಟೋಗಳನ್ನು ಫೋಕಸ್‌ ಫೋಟೋಗ್ರಾಫಿ ಸರ್ವಿಸ್‌ ಕ್ಲಿಕ್ ಮಾಡಿರುವುದು.

ನೀವು ಸಂತೂರ್ ಮಮ್ಮಿ ಜಾಹೀರಾತಿಗೆ ಸೂಟ್ ಆಗುತ್ತೀರಾ, ನೀವೇ ನಿಜವಾದ ಸಂತೂರ್ ಮಮ್ಮಿ, ಸ್ಟಾರ್ ನಟಿಯಾದರು ಎಷ್ಟು ಸಿಂಪಲ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ರಾಧಿಕಾ ಪಂಡಿತ್ ಆಗಾಗ ಮಕ್ಕಳ ಫೋಟೋ ಅಪ್ಲೋಡ್ ಮಾಡಬೇಕು ಇಲ್ಲವಾದರೆ ಕಾಮೆಂಟ್‌ ಮತ್ತು ಮಸೇಜ್ ಮಾಡಿ ಐರಾ ಮತ್ತು ಯಥರ್ವ್‌ನ ಅಭಿಮಾನಿಗಳು ವಿಚಾರಿಸಿಕೊಳ್ಳುತ್ತಿರುತ್ತಾರೆ. 

click me!