ಹ್ಯಾಪಿ ಬರ್ತಡೇ ಗೊಲ್ಲು; ಸಹೋದರನ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್!

First Published | Nov 8, 2024, 11:23 AM IST

ಅಣ್ಣನಿಗೆ ಬರ್ತಡೇ ವಿಶ್ ಮಾಡಿದ ರಾಧಿಕಾ ಪಂಡಿತ್. ಭಾವ-ಭಾಮೈದ ಹೀರೋಗಳು ಎಂದು ನೆಟ್ಟಿಗರು.....
 

ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್ ತಮ್ಮ ಸಹೋದರನ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ಇನ್‌ಸ್ಟಾಗ್ರಾಂನಲ್ಲಿ ವಿಶ್ ಮಾಡಿದ್ದಾರೆ. 

'ನಿನ್ನಂತ ಸಹೋದರನನ್ನು ಪಡೆಯಲು ನಾನು ನಿಜಕ್ಕೂ ಪುಣ್ಯ ಮಾಡಿದ್ದೆ ಗೌರಂಗ್. ಯಾರು ಬೆಟರ್‌ ಎಂದು ಮತ್ತೇಗೆ ತೋರಿಸುವುದು?' ಎಂದು ರಾಧಿಕಾ ಬರೆದುಕೊಂಡಿರುವುದು.

Tap to resize

ರಾಧಿಕಾ ಪಂಡಿತ್ ಅಣ್ಣ ಗೌರಂಗ್‌ ಆರಂಭದಿಂದಲೂ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವುದು ತುಂಬಾ ಕಡಿಮೆ. ರಾಧಿಕಾ ಸಹೋದರ ವಿದೇಶದಲ್ಲಿ ನೆಲೆಸಿದ್ದರು.

ರಾಧಿಕಾ ಸಹೋದರ ಗೌರಂಗ್ ಮತ್ತು ಪತ್ನಿ ಸಹನಾ ಚಿಕಾಗೋದಲ್ಲಿ ನೆಲೆಸಿದ್ದಾರೆ. ಇವರಿಗೆ ರಿಯಾ ಮತ್ತು ಆರವ್‌ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

ಹೇಗೆ ಐರಾ ಮತ್ತು ಅಥರ್ವ್‌ ಬಾಂಡ್ ಆಗುತ್ತಿದ್ದಾರೆ ರಾಧಿಕಾ ಮತ್ತು ಗೌರಂಗ್‌ ಕೂಡ ಚಿಕ್ಕ ವಯಸ್ಸಿನಿಂದ ಸಿಕ್ಕಾಪಟ್ಟೆ ಕ್ಲೋಸ್. ವರ್ಷಕ್ಕೆ ಒಮ್ಮೆ ರಾಧಿಕಾ ವಿದೇಶ ಪ್ರಯಾಣ ಮಾಡಿ ಅವರನ್ನು ಭೇಟಿ ಮಾಡುತ್ತಾರೆ.

ಯಶ್ ಮತ್ತು ಗೌರಂಗ್‌ ಫೋಟೋವನ್ನು ಒಟ್ಟಿಗೆ ನೋಡಿದ ಜನರು ವಾವ್ ಸೂಪರ್ ಆಗಿದೆ ಇಬ್ಬರೂ ಪಕ್ಕಾ ಹೀರೋ ರೀತಿ ಇದ್ದಾರೆ ಒಟ್ಟಿಗೆ ಸಿನಿಮಾ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ. 

Latest Videos

click me!