ನಿಮ್ಮ ಬೆಂಗಳೂರು ಹುಡುಗಿ ಎನ್ನುತ್ತಾ ಸೀರೆಯಲ್ಲಿ ಪೋಸ್ ಕೊಟ್ಟ ಶ್ರೀಲೀಲಾ… ಮತ್ತೆ ಚಂದನವನಕ್ಕೆ ಕಾಲಿಡ್ತಾರಾ ಬ್ಯೂಟಿ?

Published : Nov 07, 2024, 11:30 AM ISTUpdated : Nov 07, 2024, 11:33 AM IST

ಕನ್ನಡದಲ್ಲಿ ಕಿಸ್, ಭರಾಟೆ ಸಿನಿಮಾಗಳಲ್ಲಿ ಮಿಂಚಿ ಸದ್ಯ ತೆಲುಗು ಸಿನಿಮಾ ಜಗತ್ತಿನಲ್ಲಿ ಮಿಂಚುತ್ತಿರುವ ನಟಿ ಶ್ರೀಲೀಲಾ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರಾ ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ ನಟಿಯ ಹೊಸ ಸೋಶಿಯಲ್ ಮೀಡಿಯಾ ಪೋಸ್ಟ್.   

PREV
15
ನಿಮ್ಮ ಬೆಂಗಳೂರು ಹುಡುಗಿ ಎನ್ನುತ್ತಾ ಸೀರೆಯಲ್ಲಿ ಪೋಸ್ ಕೊಟ್ಟ ಶ್ರೀಲೀಲಾ… ಮತ್ತೆ ಚಂದನವನಕ್ಕೆ ಕಾಲಿಡ್ತಾರಾ ಬ್ಯೂಟಿ?

ತೆಲುಗು ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿರುವ, ತಮ್ಮ ನಟನೆಯ ಜೊತೆಗೆ, ಸೌಂದರ್ಯ ಮತ್ತು ಡ್ಯಾನ್ಸ್ ಮೂವ್ ಗಳಿಂದ ಜನಪ್ರಿಯತೆ ಪಡೆದಿರುವ ಕನ್ನಡದ ನಟಿ ಅಂದ್ರೆ ಅದು ಶ್ರೀಲೀಲಾ (Sreeleela). ಸ್ಟಾರ್ ನಟರೊಂದಿಗೆ ನಟನೆ ಮಾಡುವ ಅವಕಾಶ ಪಡೆದ ನಟಿಯೂ ಹೌದು. 
 

25

ಬಾಲ ನಟಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ ಮೊದಲು ನಟಿಸಿದ ಚಿತ್ರದ ಹೆಸರು ಚಿತ್ರಾಂಗಧ. ಈ ಹಾರರ್ ಥ್ರಿಲ್ಲರ್ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದ ಶ್ರೀಲೀಲಾ, ಕೇವಲ ಎರಡೇ ವರ್ಷಗಳಲ್ಲಿ ತಮ್ಮ ಲುಕ್ ಬದಲಾಯಿಸಿಕೊಳ್ಳುವ ಮೂಲಕ ಸ್ಯಾಂಡಲ್ ವುಡ್ ನ ಕಿಸ್ ಸಿನಿಮಾ ಮೂಲಕ ಅದ್ಧೂರಿಯಾಗಿ ಎಂಟ್ರಿ ಕೊಟ್ಟರು ಶ್ರೀಲೀಲಾ. 
 

35

ಶ್ರೀಲೀಲಾ  ಕನ್ನಡದಲ್ಲಿ ಭರಾಟೆ, ಬೈ ಟು ಲವ್, ಜೇಮ್ಸ್ ಸಿನಿಮಾಗಳಲ್ಲಿ ನಟಿಸಿರುವ ಇವರು ತೆಲುಗಿನಲ್ಲಿ ಧಮಾಕಾ, ಭಗವಂತ ಕೇಸರಿ, ಸ್ಕಂದ, ಎಕ್ಸ್ಟ್ರಾ ಆರ್ಡಿನರಿ ಮ್ಯಾನ್, ಆದಿಕೇಶವ, ಗುಂಟೂರು ಖಾರಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶ್ರೀಲೀಲಾ ಎನರ್ಜಿ, ಡ್ಯಾನ್ಸ್, ನಟನೆ ಹಾಗೂ ಅವರು ಮುದ್ದು ಮುಖಕ್ಕೆ ತೆಲುಗು ಸಿನಿ ರಸಿಕರು ಸಿಕ್ಕಾಪಟ್ಟೆ ಫ್ಯಾನ್ ಆಗ್ಬಿಟ್ಟಿದ್ದಾರೆ. ಇನ್ನಷ್ಟು ಸಿನಿಮಾಗಳು ಸಹ ಶ್ರೀಲೀಲಾ ಕೈಯಲ್ಲಿವೆ. 
 

45

ರಾಬಿನ್ ಹುಡ್, ಉಸ್ತಾದ್ ಭಗತ್ ಸಿಂಗ್, ಆರ್ ಟಿ 75 ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ನಾಲ್ಕು ಕನ್ನಡ ಸಿನಿಮಾಗಳ ಬಳಿಕ ಶ್ರೀಲೀಲಾ ಮತ್ತೆ ಕನ್ನಡದಲ್ಲೆ ನಟಿಸಿಯೇ ಇಲ್ಲ. ಇದನ್ನ ನೋಡಿ ಅಭಿಮಾನಿಗಳಂತೂ ಮತ್ತೆ ಕನ್ನಡಕ್ಕೆ ಬನ್ನಿ, ಕನ್ನಡ ಚಿತ್ರರಂಗವನ್ನು ಮರೆತಿ ಬಿಟ್ಟಿದ್ದಿರೇನೋ ಎನ್ನುವಂತೆ ಕಾಮೆಂಟ್ ಮಾಡುತ್ತಿದ್ದರು. ಬೆಳೆಯೋಕೆ ಕನ್ನಡ ಬೇಕು, ಹೆಸರು ಮಾಡಿದ ಮೇಲೆ ಮತ್ತೆ ಕನ್ನಡ ಬೇಡ ಅಂತಾನೂ ಹೇಳಿರೋದು ಇದೆ. ಇದೀಗ ಅದಕ್ಕೆ ಉತ್ತರ ಎಂಬಂತೆ ಶ್ರೀಲೀಲಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. 
 

55

ಸೀರೆಯುಟ್ಟು, ವಿವಿಧ ರೀತಿಯ ಪೋಸ್ ಕೊಟ್ಟಿರುವ ಶ್ರೀಲೀಲಾ, ಕ್ಯಾಪ್ಶನ್ ಅಲ್ಲಿ, ನಿಮ್ಮ ಬೆಂಗಳೂರು ಹುಡುಗಿ ಅಂತ ಬರೆದಿದ್ದಾರೆ. ಇದನ್ನು ನೋಡಿ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ, ಏನಪ್ಪಾ ಶ್ರೀಲೀಲಾ ಮತ್ತೆ ಕನ್ನಡಕ್ಕೆ ಎಂಟ್ರಿ ಕೊಡ್ತಿದ್ದಾರ? ಅದಕ್ಕಾಗಿಯೇ ಈ ರೀತಿಯಾಗಿ ಕ್ಯಾಪ್ಶನ್ ಕೊಟ್ಟಿದ್ದಾರ? ಅಥವಾ ಅವರನ್ನ ಕನ್ನಡಿಗರು ಕೂಡ ನೆನಪಿಸಿಕೊಳ್ಳಲಿ ಎಂದು ಈ ಟ್ರಿಕ್ ಟ್ರೈ ಮಾಡಿದ್ದಾರ ಅಂತಾನೂ ಹೇಳಿದ್ದಾರೆ. ಒಟ್ಟಿನಲ್ಲಿ ನಟಿಯ ಸುಂದರವಾದ ಸೀರೆ ಫೋಟೊವನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟಪಟ್ಟಿರೋದಂತೂ ನಿಜಾ. 
 

Read more Photos on
click me!

Recommended Stories