ಹೊಸ ಲುಕ್‌ನಲ್ಲಿ ರಚಿತಾ ರಾಮ್; ಹೇರ್‌ ಕಟ್‌ ಮಾಡೋರಿಗೂ ಇಷ್ಟೋಂದು ಹಣ ಕೊಡ್ತಾರಾ?

First Published | Nov 7, 2024, 7:28 PM IST

ರಚಿತಾ ರಾಮ್‌ ಹೇರ್‌ಕಟ್ ಫೋಟೋ ವೈರಲ್. ಬುಲ್ ಬುಲ್ ಕೂದಲ ಮೇಲೆ ನೆಟ್ಟಿಗರ ಕಣ್ಣು..... 
 

 ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್, ಬುಲ್ ಬುಲ್ ರಚಿತಾ ರಾಮ್‌ ಕೆಲವು ದಿನಗಳ ಹಿಂದೆ ಹೊಸ ಕೇರ್‌ ಮೇಕ್‌ ಓವರ್ ಮಾಡಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 ರಚಿತಾ ರಾಮ್‌ಗೆ ಹೇರ್‌ ಕಟ್ ಮಾಡಿರುವ ವ್ಯಕ್ತಿ ಹೆಸರು ಆದರ್ಶ್ ಎಂದು. ಐಷಾರಾಮಿ ಸಲೂನ್ ಟೋನಿ ಆಂಡ್ ಗೌನಲ್ಲಿ ರಚ್ಚು ಹೇರ್‌ ಕಟ್ ಮಾಡಿಸಿದ್ದಾರೆ.

Tap to resize

ಹೇರ್‌ಕಟ್‌ ನಂತರ ರಚಿತಾ ರಾಮ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಕಪ್ಪು ಬಣ್ಣದ ಶಾರ್ಟ್ಸ್‌ಗೆ ಗ್ರೇ ಬಣ್ಣದ ಟೀ-ಶರ್ಟ್‌ ಧರಿಸಿದ್ದು ಇದಕ್ಕೆ ಮ್ಯಾಚ್ ಆಗುವ ವೈಟ್ ಶೂ ಧರಿಸಿದ್ದಾರೆ.

ಆಶ್ಚರ್ಯಕ್ಕೆ ರಚಿತಾ ರಾಮ್ ಹೇರ್‌ ಕಟ್ ಮಾಡಿಸಿಕೊಂಡಿರುವುದು ಮಂಗಳೂರಿನಲ್ಲಿ ಇರುವ ಟೋನಿ ಆಂಡ್ ಗೌ ಸಲೂನ್‌ನಲ್ಲಿ, ಇಲ್ಲಿ ಏನೇ ಮಾಡಿಸಿಕೊಂಡರೂ ಸಿಕ್ಕಾಪಟ್ಟೆ ಕಾಸ್ಲಿ.

ಸಾಮಾನ್ಯವಾಗಿ ಈ ಐಷಾರಾಮಿ ಸಲೂನ್‌ಗೆ ಹೋಗುವುದು ಸಿಕ್ಕಾಪಟ್ಟೆ ದುಡ್ಡು ಇರುವವರೆ. ರಚಿತಾ ರಾಮ್ ರೀತಿ ಸ್ಟೈಲಿಷ್ಟ್‌ ಬಳಿ ಹೇರ್‌ ಕಟ್ ಮಾಡಿಸಬೇಕು ಅಂದ್ರೆ 7-8 ಸಾವಿರ ಆಗಬಹುದು ಅಂತಾರೆ ನೆಟ್ಟಿಗರು.

ರಚಿತಾ ರಾಮ್‌ ಹೇರ್‌ಕಟ್ ಮತ್ತು ಐ ಬ್ರೂ ಸ್ಟೈಲ್‌ ಬಗ್ಗೆ ಸಾಕಷ್ಟು ಜನರಿಗೆ ಕ್ಯೂರಿಯಾಸಿಟಿ ಇದೆ. ಚಿತ್ರರಂಗಕ್ಕೆ ಕಾಲಿಟ್ಟ ಸಮಯದಿಂದಲೂ ರಚ್ಚು ಹೇರ್‌ ಮತ್ತು ಐಬ್ರೂ ಹಾಗೆ ಮೇನ್ಟೈನ್ ಮಾಡಿದ್ದಾರೆ.

Latest Videos

click me!