ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅದ್ದೂರಿಯಾಗಿ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆ ಮೂಲಕ ಲಕ್ಷ್ಮೀ ಕೃಪೆಗೆ ಪಾತ್ರರಾಗಿದ್ದಾರೆ.
216
ಇತ್ತಿಚಿನ ದಿನಗಳಲ್ಲಿ ಎಲ್ಲಿಯೂ ಸುದ್ದಿಯಲ್ಲಿ ಇಲ್ಲದಿರುವ ರಾಧಿಕಾ ಕುಮಾರಸ್ವಾಮಿ ತಮ್ಮ ಮಗಳು ಶಮಿಕಾ ಕುಮಾರಸ್ವಾಮಿಯ ವಿಚಾರದಲ್ಲಿಯೇ ಬ್ಯುಸಿಯಾಗಿದ್ದಾರೆ.
316
ಶಮಿಕಾ ಕುಮಾರಸ್ವಾಮಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಎನ್ನುವ ಸುದ್ದಿಗಳಿದ್ದರೂ, ಅದಿನ್ನೂ ಖಚಿತವಾಗಿಲ್ಲ.
416
'ವರಮಹಾಲಕ್ಷ್ಮಿ ದೇವಿಯು ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ, ಐಶ್ವರ್ಯ ಮತ್ತು ನೆಮ್ಮದಿ ನೀಡಿ ಕಾಪಾಡಲಿ.. ವರಮಹಾಲಕ್ಷ್ಮಿ ವ್ರತದ ಶುಭಾಶಯಗಳು..' ಎಂದು ಅವರು ಬರೆದುಕೊಂಡಿದ್ದಾರೆ.
516
ಚಿನ್ನದ ಬಣ್ಣದ ಸೀರೆಯುಟ್ಟು, ಆಕರ್ಷಕ ಆಭರಣಗಳೊಂದಿಗೆ ರಾಧಿಕಾ ಕುಮಾರಸ್ವಾಮಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಇದರ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.
616
ಇಡೀ ವಿಡಿಯೋದಲ್ಲಿ ಅವರು ಒಬ್ಬರೇ ಕಾಣುತ್ತಿದ್ದು, ಬಹಳ ಅದ್ದೂರಿಯಾಗಿ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಿದ್ದಾರೆ ಎನ್ನುವುದನ್ನು ಅಲಂಕಾರ ನೋಡಿಯೇ ತಿಳಿದುಕೊಳ್ಳಬಹುದಾಗಿದೆ.
716
ಬೆಳ್ಳಿಯ ಆರತಿ, ಬೆಳ್ಳಿಯ ವಸ್ತುಗಳಿಂದಲೇ ರಾಧಿಕಾ ಕುಮಾರಸ್ವಾಮಿ ಅವರು ಪೂಜೆ ಸಲ್ಲಿಸಿದ್ದು, ಇದು ನೆಟ್ಟಿಗರ ಗಮನವನ್ನೂ ಸೆಳೆದಿದೆ.
816
ಶುಕ್ರವಾರ ಹಂಚಿಕೊಂಡಿರುವ ಈ ವಿಡಿಯೋವನ್ನು ಈವರೆಗೂ 57 ಲಕ್ಷ ಮಂದಿ ವೀಕ್ಷಣೆ ಮಾಡಿದ್ದು, ಹೆಚ್ಚಿನವರೆಲ್ಲೂ ನಿಮಗೆ ವಯಸ್ಸೇ ಆಗೋದಿಲ್ವಾ ಎಂದು ಕೇಳಿದ್ದಾರೆ.
916
ವರಮಹಾಲಕ್ಷ್ಮೀ ಹಬ್ಬದ ಫೋಟೋ & ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದೀರಿ. ನೀವು ಭೀಮನ ಅಮವಾಸ್ಯೆಯ ಫೋಟೋ ಹಾಕ್ತೀರಿ ಅಂತಾ ನೋಡ್ತಿದ್ದೆ ಎಂದು ಒಬ್ಬರು ಬರೆದಿದ್ದಾರೆ.
1016
ನಿಮ್ಮ ಮನೆಯಲ್ಲಿ ಲಕ್ಷ್ಮೀ ತಾಂಡವವಾಡ್ತಿದ್ದಾಳೆ. ಇನ್ನೆಷ್ಟು ಲಕ್ಷ್ಮೀ ಬರಬೇಕು ತಾಯಿ. ಸ್ವಲ್ಪ ಲಕ್ಷ್ಮಿಯನ್ನ ನಮ್ಮನೆಗೂ ಕಳಿಸಿ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
1116
ಹಾಗೇನಾದರೂ ವರಮಹಾಲಕ್ಷ್ಮೀ ಹಬ್ಬದ ಅಲಂಕಾರಕ್ಕೆ ಏನಾದರೂ ಪ್ರಶಸ್ತಿ ನೀಡೋದಾಗಿದ್ದರೆ, ನಿಮಗೆ ಖಂಡಿತಾ ಪ್ರಶಸ್ತಿ ಬರ್ತಿತ್ತು ಎಂದು ಮತ್ತೊಬ್ಬರು ಬರೆದಿದ್ದಾರೆ.
1216
ಈ ವಯಸ್ಸಲ್ಲೂ ನೀವೆಷ್ಟು ಮುದ್ದಾಗಿ ಕಾಣುತ್ತಿದ್ದೀರಿ. ಮತ್ತೆ ನೀವು ಯಾಕೆ ಸಿನಿಮಾಗಳನ್ನು ಮಾಡಬಾರದು ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.
1316
ಇನ್ನು ವಿಡಿಯೋದಲ್ಲಿ ತೋರಿಸಿರುವ ಹಾಗೆ ರಾಧಿಕಾ ಕುಮಾರಸ್ವಾಮಿ ಭರ್ಜರಿಯಾಗಿ ವರಮಹಾಲಕ್ಷ್ಮೀ ಹಬ್ಬ ಆಚರಣೆ ಮಾಡಿದ್ದಾರೆ ಅನ್ನೋದು ಅಲಂಕಾರದಿಂದಲೇ ಕಾಣಬಹುದಾಗಿದೆ.
1416
ಹಣ್ಣು, ಹೂವುಗಳೊಂದಿಗೆ ಮಾತ್ರವಲ್ಲದೆ, ಬೆಳ್ಳಿಯ ದೀಪಗಳು, ಸೀರೆ, ವಿಶೇಷ ಸಿಹಿ ತಿನಿಸುಗಳನ್ನು ದೇವರ ಮುಂದೆ ಇಟ್ಟು ರಾಧಿಕಾ ಕುಮಾರಸ್ವಾಮಿ ಸಂಭ್ರಮಿಸಿದ್ದಾರೆ.
1516
ಇನ್ನು ಸಿನಿಮಾದ ವಿಚಾರವಾಗಿ ಬರೋದಾದರೆ, ರಾಧಿಕಾ ಕುಮಾರಸ್ವಾಮಿ ಅಜಗ್ರಥ ಹೆಸರಿನ ಸಿನಿಮಾದ ಶೂಟಿಂಗ್ ಮುಗಿಸಿದ್ದು, ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
1616
ಈ ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ಅವರೊಂದಿಗೆ ಬಾಲಿವುಡ್‌ನ ಶ್ರೇಯಸ್ ತಲ್ಪಾಡೆ ನಟಿಸಿದ್ದಾರೆ. ಕಳೆದ ಜುಲೈನಲ್ಲಿ ಈ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ.