ತಮಿಳು ಚಿತ್ರರಂಗಕ್ಕೆ ಹಾರಿದ ನಿಖಿಲ್ ಕುಮಾರಸ್ವಾಮಿ 'ರೈಡರ್' ನಟಿ ಸಂಪದಾ; ಚಿನ್ನದ ಮೊಟ್ಟೆ ನೀವು ಎಂದ ನೆಟ್ಟಿಗರು!

First Published | Aug 17, 2024, 10:33 AM IST

ಬ್ಯಾಕ್ ಟು ಬ್ಯಾಕ್ ಹಿಟ್ ಪ್ರಾಜೆಕ್ಟ್‌ಗಳಿಗೆ ಸಹಿ ಹಾಕಿದ ಸಂಪದಾ. ತಮಿಳು ಚಿತ್ರರಂಗಕ್ಕೆ ಹಾರಿದ ಚಿನ್ನದ ಮೊಟ್ಟೆ ಎಂದ ನೆಟ್ಟಿಗರು...
 

ಕನ್ನಡ ಕಿರುತೆರೆಯ ಜನಪ್ರಿಯ ಮಿಥುನ ರಾಶಿ ಧಾರಾವಾಹಿಯಲ್ಲಿ ಮಿಂಚಿದ ಸಂಪದಾ ಹುಲಿವನ ಸದ್ಯ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.

ನಿಖಿಲ್ ಕುಮಾರಸ್ವಾಮಿ ನಟನೆ ರೈಡರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಸಂಪದಾ ಇದೀಗ ಪ್ರಜ್ವಲ್ ದೇವರಾಜ್‌ ಜೊತೆ ಕರಾವಳಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

Tap to resize

ಇದಲ್ಲದೆ ಶ್ರೀ ಶ್ರೀ ಶ್ರೀ ರಾಜ ವಾರು ಸಿನಿಮಾದಲ್ಲಿ ಸಂಪದಾ ನಟಿಸುತ್ತಿದ್ದಾರೆ. ರಾಜ್ ತರುಣ್, ಸಂದೀಪ್ ಮಾಧವ್ ಅವರ ಮಾಸ್ ಮಹಾರಾಜು ಚಿತ್ರಕ್ಕೂ ಸಂಪದಾ ನಟಿಸುತ್ತಿದ್ದಾರೆ.

ಇದೀಗ ತೆಲುಗು ನಟ ವಿಶ್ವಕ್‌ ಸೇವ್‌ ನಟನೆಯ 13ನೇ ಸಿನಿಮಾ ಘೋಷಣೆ ಮಾಡಿದ್ದಾರೆ. ಚಿತ್ರದ ಮುಹೂರ್ತ ಅದ್ಧೂರಿಯಾಗಿ ನಡೆದಿದ್ದು ವಿಎಸ್‌ 13 ಎನ್ನುವ ಟೈಟಲ್ ಇಟ್ಟಿದ್ದಾರೆ.

 ಶ್ರೀಧರ್ ಗಂಟ ಎನ್ನುವ ಹೊಸ ನಿರ್ದೇಶಕರು ಅಕ್ಷನ್ ಕಟ್ ಹೇಳುತ್ತಿದ್ದು ಐಪಿಎಸ್‌ ಅಧಿಕಾರಿ  ಪಾತ್ರದಲ್ಲಿ ವಿಶ್ವಕ್‌ ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲಿ ಶೂಟಿಂಗ್ ಆರಂಭವಾಗಲಿದೆ.

ಕೈ ತುಂಬಾ ಆಫರ್‌ಗಳನ್ನು ನೋಡಿದ ನೆಟ್ಟಿಗರು ಮೇಡಂ ನೀವು ಚಿನ್ನದ ಮೊಟ್ಟೆ ಹೀಗಾಗಿ ದೊಡ್ಡ ಪ್ರಾಜೆಕ್ಟ್‌ಗಳು ಕೈಗೆ ಬರುತ್ತಿದೆ ಮಜಾ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ. 

Latest Videos

click me!