ಆಕಾಶ್, ಅರಸುನಂತಹ ಸೂಪರ್ ಹಿಟ್ ಸಿನಿಮಾ ನೀಡಿದ ನಿರ್ದೇಶಕರ ಹೊಸ ಚಿತ್ರಕ್ಕೆ ಅಮೃತಾ ಪ್ರೇಮ್ ನಾಯಕಿ

Published : Aug 17, 2024, 01:43 PM ISTUpdated : Aug 17, 2024, 01:45 PM IST

ಚಂದನವನಕ್ಕೆ ಈಗಷ್ಟೇ ಕಾಲಿಟ್ಟ ಚೆಲುವೆ, ನಟ ನೆನಪಿರಲಿ ಪ್ರೇಮ್ ಪುತ್ರಿ ಇದೀಗ ಆಕಾಶ್, ಅರಸುನಂತಹ ಸೂಪರ್ ಹಿಟ್ ಸಿನಿಮಾ ನೀಡಿದ ನಿರ್ದೇಶಕ ಮಹೇಶ್ ಬಾಬು ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.   

PREV
17
ಆಕಾಶ್, ಅರಸುನಂತಹ ಸೂಪರ್ ಹಿಟ್ ಸಿನಿಮಾ ನೀಡಿದ ನಿರ್ದೇಶಕರ ಹೊಸ ಚಿತ್ರಕ್ಕೆ ಅಮೃತಾ ಪ್ರೇಮ್ ನಾಯಕಿ

ಟಗರು ಪಲ್ಯ ಸಿನಿಮಾದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟು, ಮೊದಲ ಚಿತ್ರದಲ್ಲೇ ಭರವಸೆ ಹುಟ್ಟಿಸಿದಂತಹ ನಟಿ ಹಾಗೂ ನೆನಪಿರಲಿ ಪ್ರೇಮ್ ಅವರ ಪುತ್ರಿ ಅಮೃತಾ ಪ್ರೇಮ್ (Amrutha Prem) ಇದೀಗ ಮತ್ತೊಂದು ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 

27

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನೆಚ್ಚಿನ ನಿರ್ದೇಶಕ, ಕನ್ನಡ ಚಿತ್ರರಂಗಕ್ಕೆ ಆಕಾಶ್, ಅರಸುನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಮಹೇಶ್ ಬಾಬು ನಿರ್ದೇಶುತ್ತಿರೋ ಹೊಸ ಸಿನಿಮಾಗೆ ಅಮೃತಾ ಪ್ರೇಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 
 

37

ಕನ್ನಡ ಚಿತ್ರರಂಗಕ್ಕೆ ಆಶಿಕಾ ರಂಗನಾಥ್, ಐಂದ್ರಿತಾ ರೇ, ಕೃತಿ ಕರಬಂಧ ಮೊದಲಾದ ನಾಯಕಿಯರನ್ನು ಪರಿಚಯಿಸಿದ ಖ್ಯಾತಿ ಮಹೇಶ್ ಬಾಬು (Director Mahesh Babu) ಅವರದ್ದು, ಇದೀಗ ಇವರು ತಮ್ಮ ಹೊಸ ಚಿತ್ರಕ್ಕೆ ಅಮೃತಾ ಪ್ರೇಮ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. 

47

ನಟಿ ಅಮೃತಾ ನಿನ್ನೆ ವರಮಹಾಲಕ್ಷ್ಮಿ(Varamahalakshmi) ಹಬ್ಬದ ಹಿನ್ನೆಲೆಯಲ್ಲಿ ಸಿಹಿ ಸುದ್ದಿಯನ್ನು ಹಂಚಿಕೊಂಡಿರುವ ನಟಿ,  ತಮ್ಮ ಹೊಸ ಸಿನಿಮಾದ ವಿಡಿಯೋ ಪೋಸ್ಟರ್ ಬಿಡುಗಡೆ ಮಾಡಿ, ನನ್ನ ಮುಂದಿನ ಚಿತ್ರ, ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಹೀಗೆ ಇರಲಿ ಎಂದು ಬರೆದುಕೊಂಡಿದ್ದಾರೆ. 
 

57

ಅಮೃತಾ ಮೊದಲ ಸಿನಿಮಾ ಟಗರು ಪಲ್ಯದ (Tagarupalya)ಮೂಲಕ ಭರವಸೆ ಹುಟ್ಟಿಸಿದ್ದರು. ಡೆಬ್ಯೂ ಫಿಲಂಗಾಗಿ ಫಿಲಂ ಫೇರ್ ಪ್ರಶಸ್ತಿ ಕೂಡ ಪಡೆದಿದ್ದರು. ಅಷ್ಟೇ ಅಲ್ಲದೇ ತಮ್ಮ ಮುಂದಿನ ಸಿನಿಮಾದ ಕುರಿತು ಆದಷ್ಟು ಬೇಗ ಮಾಹಿತಿ ನೀಡ್ತಿನಿ ಎಂದು ಹಲವಾರು ಬಾರಿ ಮಾಧ್ಯಮದ ಮುಂದೆ ಕೂಡ ಹೇಳಿದ್ದರು. ಇದೀಗ ಕೊನೆಗೂ ತಮ್ಮ ಹೊಸ ಸಿನಿಮಾದ ಮಾಹಿತಿ ನೀಡಿದ್ದಾರೆ. 

67

ಎರಡನೇ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿದ್ದು, ಸದ್ಯಕ್ಕೆ ಸಿನಿಮಾಗೆ ಪ್ರೊಡಕ್ಷನ್ #02 (Production #02) ಎಂದು ಹೆಸರಿಡಲಾಗಿದೆ. ಈ ಸಿನಿಮಾದಲ್ಲೂ ಅಮೃತಾ ಗ್ರಾಮೀಣ ಪ್ರತಿಭೆಯಾಗಿದ್ದಂತೆ ಕಾಣಿಸುತ್ತೆ, ಯಾಕಂದ್ರೆ ಚಿತ್ರದ ಪೋಸ್ಟರ್ ನಲ್ಲಿ ನಟಿ ಲಂಗ ದಾವಣಿಯಲ್ಲಿ ಕಾಣಿಸಿಕೊಂಡಿದ್ದಾರೆ. 
 

77

ಈ ಸಿನಿಮಾಗೆ ಈಗಾಗಲೇ ಸೀರಿಯಲ್ ಗಳಲ್ಲಿ ಮಿಂಚಿರುವ ಸ್ಮೈಲ್ ಗುರು ರಕ್ಷಿತ್ (smile Guru Rakshith) ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ವೀರಮದಕರಿ ಸಿನಿಮಾದ ಬಾಲನಟಿ ಜೆರುಶಾ ಕೂಡ ನಟಿಸುತ್ತಿದ್ದಾರೆ ಎನ್ನುವ ಮಾಹಿತಿ ಕೂಡ ಈ ಹಿಂದೆ ಕೇಳಿಬಂದಿತ್ತು. ಒಟ್ಟಲ್ಲಿ ಹೊಸ ಸಿನಿಮಾ ಅನೌನ್ಸ್ ಮಾಡಿರೋ ಅಮೃತಾಗೆ ಅಭಿಮಾನಿಗಳು ಶುಭ ಕೋರಿದ್ದಾರೆ. 

Read more Photos on
click me!

Recommended Stories