ನನಗಿಂತ ಜಾಸ್ತಿ ಸಿನಿಮಾ ಪ್ರೀತಿಯುಳ್ಳ ನಿರ್ದೇಶಕ, ನಿರ್ಮಾಪಕ ವೇದ್‌ಗುರು ಅವರಿಗೆ ಈ ಸಿನಿಮಾದಿಂದ ಒಳ್ಳೆಯದಾಗಲಿ. ಇದೊಂದು ಒಳ್ಳೆಯ ಪ್ರಯತ್ನ, ಈ ಚಿತ್ರಕ್ಕೆ ಎಲ್ಲರ ಪ್ರೀತಿ- ಬೆಂಬಲ ಅಗತ್ಯವಿದೆ ಹೀಗೆ ಹೇಳಿದ್ದು ಅಜಯ್ ರಾವ್.
‘ನನ್ನ ವೃತ್ತಿ ಬದುಕಿನಲ್ಲಿ ರಾಧೇಯ ಸಿನಿಮಾ ಬಹಳ ವಿಶೇಷವಾದದ್ದು. ಇಂಥದ್ದೊಂದು ಪಾತ್ರ ಮಾಡಬೇಕು, ನನ್ನೊಳಗಿನ ಕಲಾವಿದನನ್ನು ಬೇರೆ ರೀತಿಯಲ್ಲಿ ಪರಿಚಯಿಸಬೇಕು. ಅದು ಈ ಸಿನಿಮಾದಲ್ಲಿ ಸಾಧ್ಯವಾಗಿದೆ’. ಹೀಗೆ ಹೇಳಿದ್ದು ಅಜಯ್ ರಾವ್.
25
ಈ ಸಿನಿಮಾದಿಂದ ಒಳ್ಳೆಯದಾಗಲಿ
ಅವರು ನಟಿಸಿರುವ ‘ರಾಧೇಯ’ ಸಿನಿಮಾ ಈಗಾಗಲೇ ಬಿಡುಗಡೆಯಾಗಿದೆ. ಈ ಕುರಿತು ಅಜೇಯ್ ರಾವ್ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನನಗಿಂತ ಜಾಸ್ತಿ ಸಿನಿಮಾ ಪ್ರೀತಿಯುಳ್ಳ ನಿರ್ದೇಶಕ, ನಿರ್ಮಾಪಕ ವೇದ್‌ಗುರು ಅವರಿಗೆ ಈ ಸಿನಿಮಾದಿಂದ ಒಳ್ಳೆಯದಾಗಲಿ.
35
ಎಲ್ಲರ ಪ್ರೀತಿ- ಬೆಂಬಲ ಅಗತ್ಯ
ಇದೊಂದು ಒಳ್ಳೆಯ ಪ್ರಯತ್ನ, ಈ ಚಿತ್ರಕ್ಕೆ ಎಲ್ಲರ ಪ್ರೀತಿ- ಬೆಂಬಲ ಅಗತ್ಯವಿದೆ. ನಾನೂ ಒಬ್ಬ ನಿರ್ಮಾಪಕನಾಗಿದ್ದರಿಂದ ಆತನ ಕಷ್ಟ ಏನೆಂದು ಗೊತ್ತಾಗಿದೆ. ಕ್ರಿಮಿನಲ್ ಆಗಿ ಜೈಲಿನಲ್ಲಿರುವವನ ಕ್ಯಾರೆಕ್ಟರ್ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ.
ನನ್ನ ಪಾತ್ರ ಸೈಕ್ ಥರನೇ ಇದೆ. ಇಂಥ ಪಾತ್ರ ನನಗೆ ಹೊಸದು. ಅಜಯ್ ಹೀಗೂ ಮಾಡುತ್ತಾನಾ ಎಂಬಂಥ ಪಾತ್ರವಿದು ಎಂದರು. ಅಜೇಯ್ ರಾವ್ ಹಾಗೂ ಸೋನಲ್ ಮೊಂತೆರೋ ನಾಯಕ -ನಾಯಕಿಯಾಗಿ ನಟಿಸಿರುವ ಈ ಸಿನಿಮಾ ವಿಶಿಷ್ಟ ಕಥಾಹಂದರವನ್ನು ಹೊಂದಿದೆ.
55
ಭಾವನಾತ್ಮಕ ಆ್ಯಕ್ಷನ್ ಥ್ರಿಲ್ಲರ್
ನಾಯಕನ ತ್ಯಾಗ ಮನೋಭಾವದಿಂದ ರಾಧೇಯ ಎಂಬ ಕರ್ಣನ ಹೆಸರನ್ನು ಇಡಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಇದೊಂದು ಪ್ರೇಮಕತೆಯುಳ್ಳ ಭಾವನಾತ್ಮಕ ಆ್ಯಕ್ಷನ್ ಥ್ರಿಲ್ಲರ್ ಆಗಿದೆ.