ದಪ್ಪ ಆಗಿದ್ದಕ್ಕೆ ಸೋಷಿಯಲ್ ಮೀಡಿಯಾ ಬಿಟ್ರಾ? ರಚಿತಾ ರಾಮ್‌ಗೆ ನೆಟ್ಟಿಗರ ಪ್ರಶ್ನೆ

First Published Jul 16, 2022, 3:47 PM IST

ಸೋಷಿಯಲ್ ಮೀಡಿಯಾದಿಂದ ದೂರ ಉಳಿದುಕೊಂಡ ರಚಿತಾ ರಾಮ್. ಕಾಮೆಂಟ್ಸ್‌ನಲ್ಲಿ ಬೇಸರ ವ್ಯಕ್ತ ಪಡಿಸಿದ ಅಭಿಮಾನಿಗಳು....
 

ಕನ್ನಡ ಚಿತ್ರರಂಗದ ಬುಲ್ ಬುಲ್ ರಚಿತಾ ರಾಮ್‌ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವುದು ಇನ್‌ಸ್ಟಾಗ್ರಾಂನಲ್ಲಿ ಮಾತ್ರ, ಹೀಗಾಗಿ 2 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ.

2021ರಲ್ಲಿ 100 ಮತ್ತು ಲವ್‌ ಯು ರಚ್ಚು ಸಿನಿಮಾ ಬಿಡುಗಡೆ ಆದ ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

Latest Videos


 2022ರಲ್ಲಿ  ತೆಲುಗು ಸಿನಿಮಾ ಸೂಪರ್ ಮಚಿ ಮತ್ತು ಪ್ರೇಮ್ ನಿರ್ದೇಶನ ಏಕ್ ಲವ್ ಯಾ ಸಿನಿಮಾ ರಿಲೀಸ್ ಆಯ್ತು. ಇದಾದ ಮೇಲೆ ಬ್ಯಾಕ್ ಟು ಬ್ಯಾಕ್ ಬಿಗ್ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿದ್ದಾರೆ.

ಮಾನ್ಸೂನ್ ರಾಗ, ವೀರಂ, ಮಾರ್ಟಿನ್, ಬ್ಯಾಡ್ ಮ್ಯಾನರ್ಸ್‌, ಶಬರಿ ಸರ್ಚಿಂಗ್ ಫಾರ್ ರಾವಣ್ಣ, ಲವ್ ಮಿ ಆರ್‌ ಹೇಟ್‌ ಮಿ, ರವಿ ಬೊಪ್ಪಣ್ಣ ಮತ್ತು ಕ್ರಾಂತಿ ಸಿನಿಮಾ ಚಿತ್ರೀಕರಣದಲ್ಲಿ ರಚ್ಚು ಬ್ಯುಸಿಯಾಗಿದ್ದಾರೆ.

ಕ್ರಾಂತಿ ಸಿನಿಮಾ ಚಿತ್ರೀಕರಣಕ್ಕೆಂದು ಕೆಲವು ದಿನಗಳ ಕಾಲ ರಚಿತಾ ರಾಮ್ ವಿದೇಶ ಪ್ರಯಾಣ ಮಾಡಿದ್ದರು. ಹೊರಡುತ್ತಿರುವ ಮಾಹಿತಿ ಹೊರತು ಪಡಿಸಿ ಏನೂ ಹಂಚಿಕೊಂಡಿಲ್ಲ.

ಸೋಷಿಯಲ್ ಮೀಡಿಯಾದಲ್ಲೂ ಇಲ್ಲ ರಿಯಾಲಿಟಿ ಶೋನಲ್ಲಿ ಕಾಣಿಸುತ್ತಿಲ್ಲ. ಸಣ್ಣ ಪುಟ್ಟ ಕೆಲಸ ಮಾಡಿದ್ದರೂ ಫೋಟೋ ಹಾಕುವ ನಟಿ ಈಗ ಯಾಕೆ ಹಾಕುತ್ತಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.. 

ದಪ್ಪ ಆಗಿದಕ್ಕೆ ಸೋಷಿಯಲ್ ಮೀಡಿಯಾದಿಂದ ದೂರ ಉಳಿದು ಬಿಟ್ರಾ? ಇರ್ಲಿ ಬನ್ನಿ ಏನಾದರೂ ಒಂದು ಫೋಟೋ ಹಾಕಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

click me!