ಜು.15 ಸಸ್ಪೆನ್ಸ್‌ ಕ್ರೈಂ ಥ್ರಿಲ್ಲರ್‌ ಚೇಸ್‌ ರಿಲೀಸ್!

Published : Jul 14, 2022, 10:09 AM IST

ಬಿಡುಗಡೆಯ ಹೊಸ್ತಿಲಿನಲ್ಲಿ ಹೆಚ್ಚಾಯ್ತು ಚೇಸ್ ಟ್ರೈಲರ್‌ನ ಕಿಚ್ಚು

PREV
18
ಜು.15 ಸಸ್ಪೆನ್ಸ್‌ ಕ್ರೈಂ ಥ್ರಿಲ್ಲರ್‌ ಚೇಸ್‌ ರಿಲೀಸ್!

ರಾಧಿಕಾ ನಾರಾಯಣ್‌, ಅವಿನಾಶ್‌ ನರಸಿಂಹರಾಜು, ಅರ್ಜುನ್‌, ರಾಜೇಶ್‌ ನಟರಂಗ, ಶ್ವೇತಾ ಪ್ರಧಾನ ಪಾತ್ರದಲ್ಲಿ ನಟಿಸಿರುವ ಸಸ್ಪೆನ್ಸ್‌ ಕ್ರೈಂ ಥ್ರಿಲ್ಲರ್‌ ಚೇಸ್‌ ಜು.15ರಂದು ಬಿಡುಗಡೆಯಾಗಲಿದೆ. 

28

ವಿಲೋಕ್‌ ಶೆಟ್ಟಿನಿರ್ದೇಶಿರುವ ಈ ಸಿನಿಮಾದ ಟ್ರೇಲರ್‌ ಅನ್ನು ಕಿಚ್ಚ ಸುದೀಪ್‌ ಬಿಡುಗಡೆ ಮಾಡಿದ್ದಾರೆ. ಪ್ರಶಾಂತ್‌ ಶೆಟ್ಟಿನಿರ್ಮಾಣ ಮಾಡಿರುವ ಈ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಶಿವ್‌ ಶೆಟ್ಟಿ. 

38

ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ವಿಲೋಕ್‌ ಶೆಟ್ಟಿ, ‘ಥ್ರಿಲ್ಲರ್‌ ಸಿನಿಮಾಗಳಲ್ಲೂ ಬೇರೆ ಬೇರೆ ಜೋನರ್‌ಗಳಿವೆ. ಎಲ್ಲಾ ಜೋನರ್‌ಗಳನ್ನು ಸೇರಿ ರೂಪಿಸಿರುವ ಸಿನಿಮಾ ಇದು’ ಎಂದರು.

48

ಅವಿನಾಶ್‌ ನರಸಿಂಹರಾಜು, ‘ಈಗಾಗಲೇ ಬಹಳ ಜನ ಸಿನಿಮಾ ನೋಡಿ ಮೆಚ್ಚಿ ಕೊಂಡಿದ್ದಾರೆ’ ಎಂದರು. ರಾಧಿಕಾ ನಾರಾಯಣ್‌, ‘ಮೊದಲ ಬಾರಿಗೆ ಶ್ವಾನದ ಜೊತೆ ನಟಿಸಿದ್ದೇನೆ, ಫೈಟ್‌ ಮಾಡಿದ್ದೇನೆ’ ಎಂದರು. ಅರ್ಜುನ್‌, ‘ಸಿನೆಮಾ ನೋಡಿದ ಮೇಲೆ ವಿಶ್ವಾಸ ಜಾಸ್ತಿ ಆಗಿದೆ’ ಎಂದರು.

58

ತಮಿಳಲ್ಲಿ ಸಕ್ರಿಯರಾಗಿರುವ ಸಂಗೀತ ನಿರ್ದೇಶಕ ಕಾರ್ತಿಕ್‌ ಆಚಾರ್ಯ ಸಂಗೀತ ನೀಡಿರುವ ಮೊದಲ ಕನ್ನಡ ಸಿನಿಮಾ ಇದು. ರಾಜೇಶ್‌ ನಟರಂಗ, ಶ್ವೇತಾ, ಶ್ರೀ ಕ್ರೇಜಿ ಮೈಂಡ್‌್ಸ ಇದ್ದರು. ಈ ಚಿತ್ರವನ್ನು ಯುಎಫ್‌ಓ ಸಂಸ್ಥೆ ಬಿಡುಗಡೆ ಮಾಡುತ್ತಿದೆ. ಯುಎಫ್‌ಓ ರಿಲೀಸ್‌ ಮಾಡುತ್ತಿರುವ ಮೊದಲ ಕನ್ನಡ ಸಿನಿಮಾ ಚೇಸ್‌.

68

ಈ ಚಿತ್ರವನ್ನು ಮನೋಹರ್ ಸುವರ್ಣ ನಿರ್ಮಾಣ ಮಾಡಿದ್ದಾರೆ. ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅನಂತ್ ರಾಜ್ ಅರಸ್ ಛಾಯಾಗ್ರಹಣ, ಕಾರ್ತಿಕ್ ಆಚಾರ್ಯ ಹಿನ್ನೆಲೆ ಸಂಗೀತ ಮತ್ತು ಸಂಗೀತ ನಿರ್ದೇಶನ.

78

ರಾಧಿಕಾ ನಾರಾಯಣ್, ಅವಿನಾಶ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ಶ್ವೇತಾ ಸಂಜೀವುಲು, ರೆಹಮಾನ್ ಹಾಸನ್, ವೀಣಾ ಸುಂದರ್, ಸುಧಾ ಬೆಳವಾಡಿ, ಉಷಾ ಭಂಡಾರಿ, ಸುಂದರ್, ಸತೀಶ್ ಸಿದ್ಧಾರ್ಥ ಮಾಧ್ಯಮಿಕ, ಪ್ರಿಯಾ ಶಟಮರ್ಶನ್ ಮುಂತಾದವರ ಬೃಹತ್ ತಾರಾಗಣವಿದೆ.

88
Chase in the dark

 ಶ್ರೀ ಕ್ರೇಜಿಮೈಂಡ್ಸ್ ಸಂಕಲನ, ಅವಿನಾಶ್ ಎಸ್ ದಿವಾಕರ್ ಕಲಾ ನಿರ್ದೇಶನ, ಸುನೀಲ್ ಕಟಾಬು ಉಪ ನಿರ್ದೇಶನ, ಡಿಫರೆಂಟ್ ಡ್ಯಾನಿ, ಚೇತನ್ ರಮ್ಶಿ ಡಿಸೋಜಾ ಮತ್ತು ವಿನೋದ್ ಸಾಹಸ ನಿರ್ದೇಶನ, ವಿಜಯ ರಾಣಿ ಮತ್ತು ಸುಶಾಂತ್ ಪೂಜಾರಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Read more Photos on
click me!

Recommended Stories