ರಾಗಿಣಿ ದ್ವಿವೇದಿ ನಟನೆಯ ‘ಸಾರಿ ಕರ್ಮ ರಿಟನ್ಸ್‌ರ್’ ಚಿತ್ರದ ಲಿರಿಕಲ್ ಹಾಡು ಬಿಡುಗಡೆ ಆಗಿದೆ. ಈ ಹಾಡನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮ ಹರೀಶ್, ಕನ್ನಡ ಡಬ್ಬಿಂಗ್ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಬಿಡುಗಡೆ ಮಾಡಿದರು.
26
ಬ್ರಹ್ಮ ಚಿತ್ರದ ನಿರ್ದೇಶಕರು. ನವೀನ್ ಕುಮಾರ್ ನಿರ್ಮಾಪಕರು. ಜೈ ಕೃಪ್ಲಾನಿ ಹಾಗೂ ಜೇನ್ ಜಾಜ್‌ರ್ ಸಹ ನಿರ್ಮಾಪಕರಾದರೆ, ಅಫ್ಜಲ… ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
36
‘ಕಲಾವಿದರು ಒಂಚೂರು ರಿಸ್‌್ಕ ತೆಗೆದುಕೊಂಡರೆ ಭಿನ್ನ ಹಾಗೂ ಅದ್ಭುತ ಎನಿಸುವ ಪಾತ್ರಗಳಲ್ಲಿ ನಟಿಸಬಹುದು ಎಂಬುದನ್ನು ನಾನು ಈ ಚಿತ್ರದಿಂದ ಕಲಿತಿದ್ದೇನೆ.
46
ನನಗೆ ಮೊದಲಿಂದಲೂ ಸೂಪರ್ ಹೀರೋ ಅಂದರೆ ಇಷ್ಟ. ಈಗ ಅದೇ ರೀತಿಯ ಸೂಪರ್ ಹೀರೋ ಪಾತ್ರ ಮಾಡುತ್ತಿರುವುದಕ್ಕೆ ಖುಷಿ ಇದೆ’ ಎಂದು ರಾಗಿಣಿ ಹೇಳಿಕೊಂಡರು.
56
ಹಲವು ಚಿತ್ರಗಳಲ್ಲಿ ವಿಲನ್ ಪಾತ್ರಗಳಲ್ಲಿ ನಟಿಸಿರುವ ಅರ್ಜುನ್ ಶರ್ಮ ಚಿತ್ರದ ಮುಖ್ಯ ಪಾತ್ರಧಾರಿ. ನಿರ್ದೇಶಕ ಬ್ರಹ್ಮ ವಿಎಫ್‌ಎಕ್ಸ್ ತಂತ್ರಜ್ಞಾನದ ಪರಿಣಿತರು.
66
‘ನಾನು ಈ ಹಿಂದೆ ಹಿಂದೆ ಸಿದ್ದಿಸೀರೆ ಚಿತ್ರ ನಿರ್ದೇಶಿಸಿದ್ದೆ. ಇದು ಎರಡನೇ ಚಿತ್ರ. ಸೂಪರ್ ಹೀರೊ ಕಾನ್ಸೆಪ್‌್ಟಕತೆ ಇಲ್ಲಿದೆ. ಇದು ಕನ್ನಡದ ಮೊದಲ ಸೂಪರ್ ಹೀರೋ ಸಿನಿಮಾ’ ಎಂದು ಮಾಹಿತಿ ನೀಡಿದರು ನಿರ್ದೇಶಕರು. ರಾಜು ಎಮ್ಮಿಗನೂರು ಸಂಗೀತ, ರಾಜೀವ್ ಛಾಯಾಗ್ರಹಣ ಚಿತ್ರಕ್ಕಿದೆ.