8 ವರ್ಷಗಳ ಬಳಿಕ ಮತ್ತೆ ಒಂದಾದ ಧ್ರುವ ಸರ್ಜಾ - ರಚಿತಾ ರಾಮ್‌.. ಏನಿದು ಹೊಸ ವಿಷ್ಯ?

Published : Nov 17, 2025, 11:54 AM IST

2017ರಲ್ಲಿ ಬಂದ ‘ಭರ್ಜರಿ’ ಚಿತ್ರದ ನಂತರ ಮತ್ತೆ ಧ್ರುವ ಸರ್ಜಾ ಹಾಗೂ ರಚಿತಾ ರಾಮ್‌ ತೆರೆ ಮೇಲೆ ಜೋಡಿಯಾಗಿ ಕಾಣಿಸಿಕೊಳ್ಳುವುದಕ್ಕೆ ಹೊರಟಿದ್ದಾರೆ. ಈಗಿನ ಮಾಹಿತಿ ಪ್ರಕಾರ ಈ ಚಿತ್ರದ್ದು ಗ್ರಾಮೀಣ ಕಥೆಯಾಗಿದೆ.

PREV
15
ರಚಿತಾ ರಾಮ್‌ ನಾಯಕಿ

ನಟ ಧ್ರುವ ಸರ್ಜಾ ಹಾಗೂ ಯುವ ನಿರ್ದೇಶಕ ರಾಜ್‌ಗುರು ಅವರ ಕಾಂಬಿನೇಶನ್‌ನಲ್ಲಿ ಬರಲಿರುವ ಚಿತ್ರಕ್ಕೆ ರಚಿತಾ ರಾಮ್‌ ನಾಯಕಿ ಆಗಲಿದ್ದಾರೆ. ಆ ಮೂಲಕ 2017ರಲ್ಲಿ ಬಂದ ‘ಭರ್ಜರಿ’ ಚಿತ್ರದ ನಂತರ ಮತ್ತೆ ಧ್ರುವ ಸರ್ಜಾ ಹಾಗೂ ರಚಿತಾ ರಾಮ್‌ ತೆರೆ ಮೇಲೆ ಜೋಡಿಯಾಗಿ ಕಾಣಿಸಿಕೊಳ್ಳುವುದಕ್ಕೆ ಹೊರಟಿದ್ದಾರೆ.

25
ಗ್ರಾಮೀಣ ಕಥೆ

ಬಿಡುಗಡೆ ಹಂತದಲ್ಲಿರುವ ‘ಕೆಡಿ’ ಚಿತ್ರದ ನಂತರ ಧ್ರುವ ಸರ್ಜಾ ನಟಿಸಿರುವ ಚಿತ್ರ ಇದೇ ಎನ್ನಲಾಗುತ್ತಿದೆ. ಸದ್ಯಕ್ಕೆ ಚಿತ್ರಕ್ಕೆ ಅಂತಿಮ ಹಂತದ ಪ್ರೀ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಈಗಿನ ಮಾಹಿತಿ ಪ್ರಕಾರ ಈ ಚಿತ್ರದ್ದು ಗ್ರಾಮೀಣ ಕಥೆಯಾಗಿದೆ.

35
ವರ್ಷಕ್ಕೆ 2 ಸಿನಿಮಾ ಮಾಡಬೇಕು

ಸದ್ಯ ಧ್ರುವ ಸರ್ಜಾ ಅವರು ದುನಿಯಾ ಸೂರಿ ಅವರೊಂದಿಗೆ ಒಂದು ಸಿನಿಮಾ ಮಾಡುವುದಕ್ಕೆ ಪ್ಲಾನ್‌ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಇದೆ. ಇನ್ಮುಂದೆ ವರ್ಷಕ್ಕೆ 2 ಸಿನಿಮಾ ಮಾಡಬೇಕು ಎಂದು ಧ್ರುವ ಸರ್ಜಾ ಅವರು ಪ್ಲ್ಯಾನ್‌ ಮಾಡಿಕೊಳ್ಳುತ್ತಿದ್ದಾರೆ.

45
ಹಳ್ಳಿ ಸೊಗಡಿನ ಹಿನ್ನೆಲೆಯ ಚಿತ್ರ

ಹಳ್ಳಿ ಸೊಗಡಿನ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರವನ್ನು ಗೋಲ್ಡ್‌ಮೈನ್ಸ್‌ ಟೆಲಿಫಿಲಮ್ಸ್‌ನ ಮನೀಶ್‌ ಶಾ ಅವರು ನಿರ್ಮಿಸಲಿದ್ದಾರೆ ಎಂಬುದು ಈ ಚಿತ್ರದ ಬಗ್ಗೆ ಕೇಳಿ ಬರುತ್ತಿರುವ ಮತ್ತೊಂದು ಹೊಸ ಸುದ್ದಿ. ಇನ್ನೂ ರಚಿತಾ ರಾಮ್‌ ಒಪ್ಪಿಕೊಂಡಿರುವ ‘ಲ್ಯಾಂಡ್‌ ಲಾರ್ಡ್‌’, ‘ಅಯೋಗ್ಯ 2’ ಹಾಗೂ ‘ಕಲ್ಟ್‌’ ಚಿತ್ರಗಳು ಬೇರೆ ಬೇರೆ ಹಂತದಲ್ಲಿವೆ.

55
ಇಬ್ಬರ ಕೆಮಿಸ್ಟ್ರಿ ವರ್ಕ್ ಆಗಿತ್ತು

ಇನ್ನು ಚೇತನ್ ಕುಮಾರ್ ನಿರ್ದೇಶನದ 'ಭರ್ಜರಿ' ಚಿತ್ರದಲ್ಲಿ ಇಬ್ಬರ ಕೆಮಿಸ್ಟ್ರಿ ಸಖತ್ ವರ್ಕ್ ಆಗಿತ್ತು. ಇದೀಗ ಈ ಜೋಡಿ ಅದೇ ಕೆಮಿಸ್ಟ್ರಿಯನ್ನು ತೆರೆಮೇಲೆ ಮರುಸೃಷ್ಟಿಸುತ್ತದೆಯೇ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

Read more Photos on
click me!

Recommended Stories