ಎರಡು ಕಣ್ಣು ಸಾಲದು ಈ ಬೊಂಬೆ ನೋಡಲು; ರೇಶ್ಮೆ ಸೀರೆಯಲ್ಲಿ ಮಿಂಚಿದ ರಚಿತಾ ರಾಮ್!

First Published | Oct 13, 2024, 4:39 PM IST

ರೇಶ್ಮೆ ಸೀರೆಯಲ್ಲಿ ಮಿಂಚಿದ ರಚಿತಾ ರಾಮ್. ಸದಾ ಸೀರೆ ಆಯ್ಕೆ ಮಾಡಿಕೊಳ್ಳಲು ಕಾರಣ ಕೇಳಿದ ನೆಟ್ಟಿಗರು....

 ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್, ಬುಲ್ ಬುಲ್ ಸುಂದರಿ ರಚಿತಾ ರಾಮ ಸೀರೆಯಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು. ಅದರಲ್ಲೂ ರೇಶ್ಮೆ ಸೀರೆ ಧರಿಸಿದರೆ ಪಡ್ಡೆ ಹುಡುಗರ ನಿದ್ರೆ ಗೆಡಿಸುತ್ತಾರೆ. 

ಟಿವಿ ರಿಯಾಲಿಟಿ ಶೋ, ಖಾಸಗಿ ಕಾರ್ಯಕ್ರಮ, ಸಿನಿಮಾ ಪ್ರಮೋಷ್, ಸಿನಿಮಾ ಲಾಂಚ್ ಈವೆಂಟ್...ಹೀಗೆ ಏನೇ ಇದ್ದರೂ ರಚಿತಾ ರಾಮ್ ಆಯ್ಕೆ ಮಾಡಿಕೊಳ್ಳುವುದು ಟ್ರೆಡಿಷನಲ್‌ ಲುಕ್‌ಗಳನ್ನು.

Tap to resize

ಕೆಲವು ದಿನಗಳ ಹಿಂದೆ ರಚಿತಾ ರಾಮ್ ಪ್ರತಿಷ್ಠಿತ ಬ್ರ್ಯಾಂಡ್ ಫೋಟೋಶೂಟ್‌ಗೆ ರೇಶ್ಮೆ ಸೀರೆ ಧರಿಸಿದ್ದಾರೆ. ಪೇಸ್ಟಲ್ ಪಿಂಕ್ ಬಣ್ಣದ ರೇಶ್ಮೆ ಸೀರೆಗೆ ಗೋಲ್ಡ್‌ ಬಣ್ಣದ ಬಾರ್ಡರ್ ಇದೆ. 
 

ದೊಡ್ಡ ಚಿನ್ನದ ಹಾರ ಧರಿಸಿರುವ ರಚಿತಾ ರಾಮ್, ಕೈಗೆ ಗಾಜಿನ ಬಳೆ ಮತ್ತು ಚಿನ್ನದ ಬಳೆ ಧರಿಸಿದ್ದಾರೆ. ಸಿಂಪಲ್ ಆಗಿ ಕೂದಲು ಗಂಟು ಕಟ್ಟಿ ಹೂವು ಮುಡಿದಿದ್ದಾರೆ. 

ಅಲ್ಲದೆ ಮೇಕಪ್ ಮತ್ತು ಹೇರ್‌ಸ್ಟೈಲ್ ಮುಗಿದ ನಂತರ ರಚಿತಾ ರಾಮ್ ತಾವೇ ಲಿಪ್‌ಸ್ಟಿಕ್ ಹಾಕಿಕೊಂಡಿದ್ದಾರೆ. ಏನೇ ಇದ್ದರೂ ತಮ್ಮ ಲುಕ್‌ ತಾವೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಮೇಡಂ ಇದೇ ಲುಕ್‌ನಲ್ಲಿ ನೀವು ನಿಶ್ಚಿತಾರ್ಥ ಮಾಡಿಕೊಳ್ಳಬಹುದು ಅಷ್ಟೋ ಸೂಪರ್ ಆಗಿದೆ, ಈ ಅಂದ ನೋಡಲು ಎರಡು ಕಣ್ಣು ಸಾಲದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Latest Videos

click me!