ಮಾಲ್ಡೀವ್ಸ್‌ನಲ್ಲಿ ತರುಣ್-ಸೋನಲ್ ಹನಿಮೂನ್: ಮಧುರ ಕ್ಷಣಗಳ ಪೋಟೋಸ್ ಶೇರ್ ಮಾಡಿದ ನವ ಜೋಡಿ

Published : Oct 11, 2024, 04:47 PM ISTUpdated : Oct 12, 2024, 08:47 AM IST

ಇತ್ತೀಚೆಗಷ್ಟೇ ಮಾಲ್ಡೀವ್ಸ್ ನಲ್ಲಿ ಹನಿಮೂನ್ ಮುಗಿಸಿ ಬಂದ ಚಂದನವನದ ನವ ಜೋಡಿ ಸೋನಲ್ ಮೊಂಥೆರೋ ಮತ್ತು ತರುಣ್ ಸುಧೀರ್ ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ಫೋಟೊಗಳನ್ನ ಶೇರ್ ಮಾಡಿದ್ದಾರೆ.   

PREV
17
ಮಾಲ್ಡೀವ್ಸ್‌ನಲ್ಲಿ ತರುಣ್-ಸೋನಲ್ ಹನಿಮೂನ್: ಮಧುರ ಕ್ಷಣಗಳ ಪೋಟೋಸ್ ಶೇರ್ ಮಾಡಿದ ನವ ಜೋಡಿ

ಆಗಸ್ಟ್ ತಿಂಗಳಲ್ಲಿ ಗಣ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ (Tarun Sudhir) ಹಾಗೂ ನಟಿ ಸೋನಲ್ ಮೊಂಥೆರೋ ಇತ್ತೀಚೆಗಷ್ಟೇ ತಮ್ಮ ಹನಿಮೂನ್ ಮುಗಿಸಿಕೊಂಡು ಬಂದಿದ್ದಾರೆ. 
 

27

ಹನಿಮೂನ್ ಗಾಗಿ ಮಾಲ್ಡೀವ್ಸ್ ಗೆ ತೆರಳಿದ್ದ ಚಂದನವನದ ಈ ನವ ಜೋಡಿ, ಅಲ್ಲಿ ಎಂಜಾಯ್ ಮಾಡಿರುವ ಕೆಲವೊಂದು ವಿಡಿಯೋ ತುಣುಕು, ಫೋಟೊಗಳನ್ನು ತಮ್ಮ ಇನ್’ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿದ್ದರು. ಇದೀಗ ಒಂದಷ್ಟು ರೊಮ್ಯಾಂಟಿಕ್ ಫೋಟೊಗಳನ್ನು (romantic photos) ಜೋಡಿ ಶೇರ್ ಮಾಡಿದೆ. 
 

37

ಹನಿಮೂನ್ ಮುಗಿಸಿ ಬಂದಿರುವ ಈ ಜೋಡಿ ಅದೇ ಗುಂಗಿನಲ್ಲಿದ್ದು, ಜೊತೆಗೆ ಇವತ್ತಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಎರಡು ತಿಂಗಳಾಗಿದ್ದು, ಈ ಶುಭ ಸಂದರ್ಭದಲ್ಲಿ ಸೋನಲ್ ಮೊಂಥೆರೋ (Sonal Montherio) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ರೊಮ್ಯಾಂಟಿಕ್ ಜೊತೆಗೆ ಮುದ್ದಾದಕಪಲ್ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. 
 

47

ಸೋನಲ್ ಬಿಳಿ ಗೌನ್ ಧರಿಸಿದ್ರೆ, ತರುಣ್ ಸುಧೀರ್ ಬಿಳಿ ಪ್ಯಾಂಟ್, ಶರ್ಟ್ ಧರಿಸಿದ್ದು, ಕಡಲ ತೀರದ ನೀಲಿ ಸಾಗರದ ಮುಂದೆ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ. ಫೋಟೊಗಳ ಜೊತೆಗೆ In a world full of Colors , we choose white ಎಂದು ಸೋನಲ್ ಬರೆದುಕೊಂಡಿದ್ದಾರೆ. 
 

57

ಜೊತೆಗೆ ನವರಾತ್ರಿ ಹಬ್ಬದ ಈ ಶುಭ ಸಂದರ್ಭದಲ್ಲಿ,  ನಿಮ್ಮ ಪ್ರೀತಿ ಪಾತ್ರರೂ ಯಾವಾಗ್ಲೂ ನಿಮ್ಮ ಜೊತೆ ಇರಲಿ, ನಿಮ್ಮ ಜೀವನದಲ್ಲಿ ಪ್ರೀತಿ, ಸಂತೋಷ, ನಗು, ಅದೃಷ್ಟ ಎಲ್ಲವೂ ಇರಲಿ ದಸರಾ ಹಬ್ಬದ ಶುಭಾಶಯಗಳು ಎಂದು ಎಲ್ಲಾ ಅಭಿಮಾನಿಗಳಿಗೂ ಶುಭ ಕೋರಿದ್ದಾರೆ. 
 

67

ಸ್ಯಾಂಡಲ್ ವುಡ್ ನ (Sandalwood) ಈ ಹೊಸ ಜೋಡಿಯ ಮುದ್ದಾದ ಫೋಟೊಗಳಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಮುದ್ದಾದ ಜೋಡಿ, ಸೂಪರ್ ಜೋಡಿ ಎಂದು ಹೇಳಿದ್ದು, ಜೊತೆಗೆ ಮಾಲ್ಡೀವ್ಸ್ ನಲ್ಲೂ ತಾಳಿ ಬಿಚ್ಚಿಟದೆ, ಅದನ್ನೆ ಧರಿಸಿರುವ ಸೋನಲ್ ಗೆ ನೀವು ತಾಳಿಗೆ ಕೊಡುತ್ತಿರುವ ಗೌರವಕ್ಕೆ ಯಾರ ದೃಷ್ಟಿಯೂ ಬೀಳದಿರಲಿ ಎಂದು ಹಾರೈಸಿದ್ದಾರೆ. 
 

77

ಮಾಲ್ಡೀವ್ಸ್ ಗೆ ತೆರಳುವ ಮುನ್ನ ಈ ಜೋಡಿ, ದುಬೈನಲ್ಲಿ ಐಫಾ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಕಾಟೇರ ಸಿನಿಮಾಗಾಗಿ ತರುಣ್ ಸುಧೀರ್ ಪ್ರಶಸ್ತಿ ಕೂಡ ಸ್ವೀಕರಿಸಿದ್ದರು. ಅದಾದ ಬಳಿಕ ನವ ಜೋಡಿ ಮಾಲ್ಡೀವ್ಸ್ ಗೆ ಹಾರಿತ್ತು, ನಟ ತರುಣ್ ಸುಧೀರ್ ತಮ್ಮ ಪ್ರೀ ಬರ್ತ್ ಡೇಯನ್ನು ಮಾಲ್ಡೀವ್ಸ್ ನಲ್ಲೇ ಆಚರಿಸಿಕೊಂಡಿದ್ದರು. 
 

Read more Photos on
click me!

Recommended Stories