ನಟಿ ರಚಿತಾ ರಾಮ್ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು. ಈ ಸಂದರ್ಭದಲ್ಲಿ, ತಮ್ಮ ಮದುವೆಯ ಬಗ್ಗೆ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಹುಟ್ಟುಹಬ್ಬದ ದಿನವೇ ಡಿಂಪಲ್ ಕ್ವೀನ್ ಹೇಳಿದ್ದೇನು ಕೇಳಿ.
ಇಂದು ಅಂದರೆ ಅಕ್ಟೋಬರ್ 3 ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ (Dimple Queen Rachita Ram) ಹುಟ್ಟುಹಬ್ಬ ಸಂಭ್ರಮ. 33 ವರ್ಷದ ನಟಿಯ ಮದುವೆಯ ಬಗ್ಗೆ ಸದಾ ಅಭಿಮಾನಿಗಳಿಗೆ ಚಿಂತೆ ಇದ್ದೇ ಇದೆ. ಆದ್ದರಿಂದ ಹೋದಲ್ಲಿ ಬಂದಲ್ಲಿ ಆ ಬಗ್ಗೆ ಪ್ರಶ್ನೆಗಳ ಸುರಿಮಳೆಯನ್ನೇಗೈಯಲಾಗುತ್ತದೆ. ಅಷ್ಟಕ್ಕೂ ಇಂದು ರಚಿತಾ ರಾಮ್ ಅವರು ತಮ್ಮ ಅಭಿಮಾನಿಗಳ ಎದುರು ಹುಟ್ಟುಹಬ್ಬ ಆಚರಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದರು.
27
ಅಭಿಮಾನಿಗಳ ಜೊತೆ ಆಚರಣೆ
ನಿನ್ನೆ ನಟಿ, ಇನ್ಸ್ಟಾಗ್ರಾಮ್ನಲ್ಲಿ ಈ ಕುರಿತು ಬರೆದುಕೊಂಡಿದ್ದರು. ಎಲ್ಲರಿಗೂ ನಮಸ್ಕಾರ, ನನ್ನ ಬದುಕಿನಲ್ಲಿ ನೀವು ತೋರಿದ ಪ್ರೀತಿ, ಪ್ರೋತ್ಸಾಹ, ಕಾಳಜಿ ಹಾಗೂ ನನ್ನ ಪ್ರತಿಯೊಂದು ಹಂತದಲ್ಲಿ ನನ್ನ ಜೊತೆ ನಿಂತು ಬೆಂಬಲಿಸಿದ ನಿಮ್ಮೆಲ್ಲರಿಗೂ ನಾನು ಸದಾ ಋಣಿಯಾಗಿದ್ದೇನೆ. ಅಭಿಮಾನಿಗಳ ಒತ್ತಾಯ ಹಾಗೂ ನನ್ನ ಕುಟುಂಬದ ಒತ್ತಾಯದ ಮೇರೆಗೆ, ಅಕ್ಟೋಬರ್ 3ರಂದು ನನ್ನ ಮನೆಯ ಬಳಿ ನಿಮ್ಮೆಲ್ಲರೊಂದಿಗೆ ಈ ವಿಶೇಷ ದಿನವನ್ನು ಹಂಚಿಕೊಳ್ಳಲು ನಾನು ಕಾಯುತ್ತಿದ್ದೆನೆ. ಇದು ಕೇವಲ ಹುಟ್ಟುಹಬ್ಬದ ಆಚರಣೆ ಅಲ್ಲ, ಇದು ನಮ್ಮ ಸಂಬಂಧದ ಸಂಭ್ರಮ, ನಿಮ್ಮ ಪ್ರೀತಿಯ ರಚ್ಚು ಎಂದು ಬರೆದುಕೊಂಡಿದ್ದರು.
37
ಮದುವೆಯ ಬಗ್ಗೆ ಪ್ರಶ್ನೆ
ಆದ್ದರಿಂದ ಇಂದು ಅಭಿಮಾನಿಗಳ ದಂಡೇ ಅವರ ಮನೆಯೆಡೆ ಧಾವಿಸಿದೆ. ಈ ಸಂದರ್ಭದಲ್ಲಿ ನಟಿಗೆ ಮದುವೆಯ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಆಗ ನಟಿ ಹೇಳಿದ ಉತ್ತರ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಂತೂ ಖಂಡಿತ. ಈಗಿನ ಕಾಲದಲ್ಲಿಯೂ ಇಂಥ ಹುಡುಗಿಯರು ಇರ್ತಾರಾ ಎಂದು ಹುಬ್ಬೇರಿಸಿದ್ದಾರೆ ಅಭಿಮಾನಿಗಳು, ಅದು ಕೂಡ ಇಂಥ ಖ್ಯಾತ ಸೆಲೆಬ್ರಿಟಿಯ ಬಾಯಲ್ಲಿ ಇಂಥ ಮಾತಾ?
ಅಷ್ಟಕ್ಕೂ ನಟಿ, ಖಂಡಿತವಾಗಿಯೂ ಮದುವೆ ಆಗುತ್ತೇನೆ. ಆ ಯೋಚನೆ ಕೂಡ ಬಂದಿದೆ. ತಂದೆ-ತಾಯಿಯಂದಿರಿಗೂ ಹೇಳಿದ್ದೇನೆ. ಹುಡುಗನನ್ನು ನೋಡಲು ಶುರು ಮಾಡಿದ್ದಾರೆ. ಇಂಥದ್ದೇ ಕ್ವಾಲಿಟಿ ಅಂತೇನೂ ಇಲ್ಲ. ಯಾರನ್ನೇ ಕರೆದುಕೊಂಡು ಬಂದು ಮದುವೆಯಾಗು ಎಂದರೆ ಆಗುತ್ತೇನೆ. ದೇವರು ಯಾರನ್ನು ಕಳಿಸುತ್ತಾನೋ ಅದನ್ನು ನಾನು ಅಕ್ಸೆಪ್ಟ್ ಮಾಡುತ್ತೇನೆ ಎನ್ನುವ ಮೂಲಕ ಮದುವೆ ಹುಡುಗನ ಸಂಪೂರ್ಣ ಜವಾಬ್ದಾರಿಯನ್ನು ಪಾಲಕರ ಮೇಲೆ ಬಿಟ್ಟಿರುವುದಾಗಿ ಹೇಳುವ ಮೂಲಕ ಶಾಕ್ ಕೊಟ್ಟಿದ್ದಾರೆ.
57
ನಟಿಯಿಂದ ಕಿಟ್ ವಿತರಣೆ
ಇದೇ ವೇಳೆ ಮಾತನಾಡಿದ ನಟಿ, ಇದೇ ಮೊದಲ ಬಾರಿಗೆ ಅಪ್ಪ-ಅಮ್ಮನ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ತಿರೋದು ಖುಷಿ ಕೊಟ್ಟಿದೆ ಎಂದಿದ್ದಾರೆ. ಹುಟ್ಟುಹಬ್ಬದ ನಿಮಿತ್ತ ಪೌರ ಕಾರ್ಮಿಕರಿಗೆ ಕಿಟ್ ಕೂಡ ವಿತರಣೆ ಮಾಡಿದ್ದಾರೆ.
67
ಕೂಲಿ ಚಿತ್ರದ ಖುಷಿಯಲ್ಲಿ ನಟಿ
ಅಷ್ಟಕ್ಕೂ ನಟಿ ರಚಿತಾ ರಾಮ್ ಈಚೆಗೆ 'ಕೂಲಿ' ಚಿತ್ರದಲ್ಲಿ ಖಡಕ್ ವಿಲನ್ ಪಾತ್ರ ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ. ರಜನಿಕಾಂತ್, ಉಪೇಂದ್ರ, ನಾಗಾರ್ಜುನ ಸೇರಿದಂತೆ ಘಟಾನುಘಟಿ ತಾರೆಯರು ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾದಲ್ಲಿ ರಚಿತಾ ರಾಮ್, ಕಲ್ಯಾಣಿ ಎಂಬ ಚಾಲಾಕಿ ಪಾತ್ರವನ್ನು ಮಾಡಿ ಭೇಷ್ ಎನ್ನಿಸಿಕೊಂಡಿದ್ದಾರೆ.
77
ಸಕತ್ ಖಡಕ್ ಪಾತ್ರದಲ್ಲಿ ರಚಿತಾ
'ಕೂಲಿ' (Coolie) ಚಿತ್ರದಲ್ಲಿ ಇವರ ರೋಲ್ ಸಖತ್ ಟ್ವಿಸ್ಟ್ ಮತ್ತು ರೋಚಕ ಟರ್ನ್‌ಗಳಿಂದ ಕೂಡಿದೆ. ಆರಂಭದಲ್ಲಿ ಒಂದು ಪುಟ್ಟ ಪಾತ್ರ ಏನಿಸಿದರೂ, ಎರಡನೆಯ ಭಾಗದಲ್ಲಿ ಇಡೀ ಸಿನಿಮಾದ ಮೇನ್ ವಿಲನ್ ಎಂಬಂತೆ ಕಲ್ಯಾಣಿ ಪಾತ್ರವನ್ನು ರಚಿಸಿದ್ದಾರೆ ನಿರ್ದೇಶಕರು. ರಚಿತಾ ರಾಮ್ ಕೂಡ ಮೊದಲ ಬಾರಿಗೆ ಬೇರೆ ಥರದ ಇಮೇಜ್‌ನಲ್ಲಿ ಕಾಣಿಸಿಕೊಂಡು, ನೋಡುಗರಿಗೆ ಶಾಕ್ ನೀಡಿದ್ದಾರೆ.