ಪುನೀತ್ ರಾಜ್‌ಕುಮಾರ್ ದಕ್ಷಿಣ ಚಿತ್ರರಂಗದ ಅತ್ಯಂತ ಪ್ರೀತಿಯ ನಟರಲ್ಲಿ ಒಬ್ಬರು. ಪುನೀತ್ ಬಾಲ ಕಲಾವಿದನಾಗಿ (Child Artiste) ಚಿತ್ರರಂಗಕ್ಕೆ ಕಾಲಿಟ್ಟರು.ಪ್ರತಿಭಾವಂತ ನಟನಾಗಿದ್ದ ಪುನೀತ್, ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಹೃದಯದಲ್ಲಿ ಶಾಶ್ವತವಾಗಿ ಉಳಿಯುವ ಪುನೀತ್ ಅವರ ಕೆಲವು ಸಿನಿಮಾಗಳು ಇಲ್ಲಿವೆ.
ಬೆಟ್ಟದ ಹೂವು (Bettada Hoo) ಸಿನಿಮಾ ಪುನೀತ್ ಬಾಲ ಕಲಾವಿದನಾಗಿ ನಟಿಸಿದ ಮೊದಲ ಚಿತ್ರ. ಈ ಸಿನಿಮಾ ಶೂಟ್ ಮಾಡುವಾಗ ಪುನೀತ್ ಅವರ ವಯಸ್ಸು ಕೇವಲ 10 ವರ್ಷ. ಈ ಚಿತ್ರಕ್ಕಾಗಿ ಅವರು ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು (National Award) ಸಹ ಪಡೆದರು.
ಬೆಟ್ಟದ ಹೂವಿನ ನಂತರ, ಅವರು 2002 ರಲ್ಲಿ 'ಅಪ್ಪು' ಸಿನಿಮಾದೊಂದಿಗೆ ಸಿನಿಮಾಕ್ಕೆ ಪುನಃ ಪಾದಾರ್ಪಣೆ ಮಾಡಿದರು. ಈ ಸಿನಿಮಾ ತಕ್ಷಣವೇ ಬ್ಲಾಕ್ಬಸ್ಟರ್ ಹಿಟ್ (Black buster Hit) ಆಯಿತು ಹಾಗೂ ಪುನೀತ್ ರಾಜ್‌ಕುಮಾರ್ ನಿಂದ ಇವರು ಅಭಿಮಾನಿಗಳ ಪ್ರೀತಿಯ ಅಪ್ಪು ಆದರು.
Puneeth Rajkumar
ಅಪ್ಪು ಸಿನಿಮಾವನ್ನು ಪೂರಿ ಜಗನ್ನಾಥ್ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ರಕ್ಷಿತಾ, ಅವಿನಾಶ್ ಮತ್ತು ಶ್ರೀನಿವಾಸ ಮೂರ್ತಿ ಮತ್ತು ಸುಮಿತ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು ಮತ್ತು ಬಂಗಾಳಿ ಮುಂತಾದ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಅಪ್ಪು 200 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಓಡಿತು.
2003ರಲ್ಲಿ ರಿಲೀಸ್ ಆದ ಅಭಿ (Abhi) ಸಿನಿಮಾವು ಆ ವರ್ಷದ ಅತಿದೊಡ್ಡ ವಾಣಿಜ್ಯ ಹಿಟ್‌ಗಳಲ್ಲಿ ಒಂದಾಗಿತ್ತು, ಬಾಕ್ಸ್ ಆಫೀಸ್‌ನಲ್ಲಿ (Box Office) 16 ಕೋಟಿ ಗಳಿಸಿತು. ಚಿತ್ರವು ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು (Muslim Girl) ಪ್ರೀತಿಸುವ ಪ್ರೇಮಕಥೆಯ ಸುತ್ತ ಸುತ್ತುತ್ತದೆ. ಈ ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ
ಅರಸು ಚಿತ್ರವು ಪುನೀತ್ ಅವರ ವೃತ್ತಿಜೀವನದ (Career) ದೊಡ್ಡ ಚಿತ್ರಗಳಲ್ಲಿ ಒಂದಾಗಿದೆ. ಈ ಸಿನಿಮಾವನ್ನು ಮಹೇಶ್ ಬಾಬು ನಿರ್ದೇಶಸಿದ್ದಾರೆ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಜೊತೆ ರಮ್ಯಾ ಮತ್ತು ಮೀರಾ ಜಾಸ್ಮಿನ್ ನಾಯಕಿಯರಾಗಿ ತೆರೆ ಹಂಚಿಕೊಂಡಿದ್ದಾರೆ.
ಪ್ರಕಾಶ್ ನಿರ್ದೇಶನದ ರೊಮ್ಯಾಂಟಿಕ್ ಡ್ರಾಮಾ (Romantic Drama) ಚಿತ್ರ ‘ಮಿಲನ’ದಲ್ಲಿ ಪಾರ್ವತಿ ಮೆನನ್ ಮತ್ತು ಪೂಜಾ ಗಾಂಧಿ (Pooja Gandhi) ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಮಿಲನ (Milana) ಕೂಡ ಪುನೀತ್ ಅವರ ವೃತ್ತಿಜೀವನದ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಏಕೆಂದರೆ ಇದು ಸುಮಾರು 50 ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ 100 ದಿನಗಳಿಗಿಂತ ಹೆಚ್ಚು ಓಡಿತು.
ಪುನೀತ್ ಅವರ ಇನ್ನೊಂದು ಹಿಟ್ ಸಿನಿಮಾ ಅಜಯ್. ಇದು action movie ಆಗಿದ್ದು ಮೆಹರ್ ರಮೇಶ್ ಡೈರೆಕ್ಟ್ ಮಾಡಿದ್ದಾರೆ. ಚಿತ್ರದಲ್ಲಿ ಪುನೀತ್ ಎದುರು ಅನುರಾಧಾ ಮೆಹ್ತಾ ಕಾಣಿಸಿಕೊಂಡಿದ್ದಾರೆ. ಅಜಯ್ ತೆಲುಗಿನ ‘ಒಕ್ಕಡು’ ಚಿತ್ರದ ರಿಮೇಕ್ ಆಗಿತ್ತು.
2010 ರಲ್ಲಿ ಬಿಡುಗಡೆಯಾದ ಜಾಕಿ ಸಿನಿಮಾದಲ್ಲಿ ಪುನೀತ್ ಮತ್ತು ಭಾವನಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು. ದುನಿಯಾ ಸೂರಿ ನಿರ್ದೇಶನದ ಈ ಚಿತ್ರವು ಸೌತ್ ಫಿಲ್ಮ್‌ಫೇರ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ಚಿತ್ರ ಎಂದು ಆಯ್ಕೆಯಾಗಿತ್ತು .
'ಹುಡುಗರು' ಮುಟ್ಲಿ-ಸ್ಟಾರ್ ಚಿತ್ರವಾಗಿದ್ದು, ಪುನೀತ್, ಶ್ರೀನಗರ ಕಿಟ್ಟಿ, ಯೋಗೇಶ್ ಮತ್ತು ರಾಧಿಕಾ ಪಂಡಿತ್ (Radhika Pandith) ಪ್ರಮುಖ ಪಾತ್ರಗಳಲ್ಲಿದ್ದಾರೆ. ಕೆ ಮಾದೇಶ್ ನಿರ್ದೇಶನದ ಈ ಚಿತ್ರವು 2010 ರಲ್ಲಿ ಬಿಡುಗಡೆಯಾದ ತಮಿಳು (Tamil) ಚಿತ್ರ 'ನಾಡೋಡಿಗಳು' ರೀಮೇಕ್ ಆಗಿದೆ, ಈ ಚಿತ್ರಕ್ಕಾಗಿ ಪುನೀತ್ ಎರಡು ಪ್ರಶಸ್ತಿಗಳನ್ನು ಗೆದ್ದಿದ್ದಾರೆ - ಫಿಲ್ಮ್‌ಫೇರ್ ಮತ್ತು ಕನ್ನಡದಲ್ಲಿ SIIMA ಅತ್ಯುತ್ತಮ ನಟ ಪ್ರಶಸ್ತಿ.
ಪುನೀತ್ ಅವರ ಇನ್ನೊಂದು action drama ರಾಜಕುಮಾರ (Rajakumar). ಈ ಸಿನಿಮಾದಲ್ಲಿ ಪುನೀತ್ ಅವರ ನಾಯಕಿಯಾಗಿ ಪ್ರಿಯಾ ಆನಂದ್ (Priya Anand) ಕಾಣಿಸಿಕೊಂಡಿದ್ದರು. ರಾಜಕುಮಾರ ಚಿತ್ರವನ್ನು ಸಂತೋಷ್ ಆನಂದ್ರಾಮ್ ಬರೆದು, ನಿರ್ದೇಶಿಸಿದ್ದಾರೆ. ಬಿಡುಗಡೆಯಾದ ಆರು ವಾರಗಳಲ್ಲಿ ಮಲ್ಟಿಪ್ಲೆಕ್ಸ್‌ನಲ್ಲಿ 6,000 ಪ್ರದರ್ಶನಗಳನ್ನು ಪೂರ್ಣಗೊಳಿಸಿದ ಮೊದಲ ಚಲನಚಿತ್ರವಾಗಿದೆ.