'ಸಖತ್' ಟೀಸರ್‌ನಲ್ಲಿ ಬರಲಿದ್ದಾನೆ ಗೋಲ್ಡನ್ ಪುತ್ರ ವಿಹಾನ್

Suvarna News   | Asianet News
Published : Oct 23, 2021, 03:11 PM IST

'ಸಖತ್' ಚಿತ್ರದ ಬಾಲು ಟೀಸರ್ ನಾಳೆ ಬೆಳಗ್ಗೆ 11 ಗಂಟೆ 23 ನಿಮಿಷಕ್ಕೆ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಪೋಸ್ಟ್ ಮಾಡಿದ್ದಾರೆ. 

PREV
18
'ಸಖತ್' ಟೀಸರ್‌ನಲ್ಲಿ ಬರಲಿದ್ದಾನೆ ಗೋಲ್ಡನ್ ಪುತ್ರ ವಿಹಾನ್

ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) 'ಚಮಕ್' ಚಿತ್ರದ ನಂತರ ಸಿಂಪಲ್ ಸುನಿ (Simple Suni) ಜೊತೆ ಮತ್ತೊಮ್ಮೆ ಒಂದಾಗಿದ್ದು, 'ಸಖತ್' ಸಿನಿಮಾದ ಮೂಲಕ ಮೋಡಿ ಮಾಡೋದಕ್ಕೆ ಹೊರಟಿದ್ದಾರೆ. 

28

ಈ ಚಿತ್ರದಲ್ಲಿ ಗಣೇಶ್ ಅವರು ಕಣ್ಣು ಕಾಣದ ವ್ಯಕ್ತಿ (Blind) ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು (Nishvika Naidu) ನಟಿಸಿದ್ದಾರೆ. 

38

ಗಣೇಶ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದು, ತಮ್ಮ ಜೀವನದ ಪ್ರಮುಖ ವಿಷಯಗಳು ಹಾಗೂ ಚಿತ್ರದ ಹಲವಾರು ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

48

'ಸಖತ್' ಚಿತ್ರದ ಬಾಲು ಟೀಸರ್ ನಾಳೆ ಬೆಳಗ್ಗೆ 11 ಗಂಟೆ 23 ನಿಮಿಷಕ್ಕೆ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಗಣೇಶ್ ಪೋಸ್ಟ್ ಮಾಡಿದ್ದಾರೆ.

58

ಮುಖ್ಯವಾಗಿ ಈ ಚಿತ್ರದ ಮೂಲಕ ಗಣೇಶ್ ಪುತ್ರ ವಿಹಾನ್ (Vihan) ಮತ್ತೆ ಬಿಗ್  ಸ್ಕ್ರೀನ್‌ಗೆ ಎಂಟ್ರಿ ಕೊಡುತ್ತಿದ್ದು, ಅಪ್ಪನ 'ಸಖತ್' (Sakkat) ಸಿನಿಮಾದಲ್ಲಿ ಬಾಲ ನಟನ ಪಾತ್ರ ಮಾಡಿದ್ದಾರೆ. 

68

ಗಣೇಶ್ ಅವರ ಬಾಲ್ಯದ ದಿನಗಳ ಪಾತ್ರವನ್ನು ಬಾಲು ಪಾತ್ರದಲ್ಲಿ ವಿಹಾನ್ ಅಭಿನಯಿಸುತ್ತಿದ್ದು, ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ (Dubbing) ಕೂಡ ಮಾಡಿರುವ ಮಗನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಇತ್ತಿಚೆಗಷ್ಟೇ ಗಣೇಶ್ ಹಂಚಿಕೊಂಡಿದ್ದರು.

78

ಬಾಲು & ಜ್ಯೂನಿಯರ್ ಬಾಲು (ವಿಹಾನ್) ನಿಂದ ಡಬ್ಬಿಂಗ್ ಮುಕ್ತಾಯ. ನಮ್ಮಿಬ್ಬರ ಮಾತಿನ ಪುಳಕ ಹಾಗೂ ಕಣ್ ಚಳಕ ನಿಮಗೆ ಮಕ್ಕಳ ದಿನಾಚರಣೆ (Childrens Day) ದಿನಾಂಕದ ಹತ್ತಿರ ಚಿತ್ರಮಂದಿರದಲ್ಲಿ ಕಾಣಸಿಗಲಿದೆ. ನಿಮ್ಮ ಹಾರೈಕೆಯಿರಲಿ ಎಂದು ನಟ ಗಣೇಶ್ ಹೇಳಿದ್ದರು. 

88

ಗಣೇಶ್ ಪುತ್ರಿ ಚಾರಿತ್ರ್ಯ (Charitrya) ಕೂಡಾ 'ಚಮಕ್' (Chamak) ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದರು. ಈ ಹಿಂದೆ 'ಗೀತಾ' (Geeta) ಚಿತ್ರದಲ್ಲಿ ವಿಹಾನ್ ನಟಿಸಿ ಆ ಚಿತ್ರಕ್ಕೂ ಸ್ವತಃ ಡಬ್ಬಿಂಗ್ ಮಾಡಿದ್ದರು.

click me!

Recommended Stories