Puneeth Rajkumar Death:ಪುನೀತ್ ರಾಜ್‌ಕುಮಾರ್ ಬೆಸ್ಟ್‌ ನಟ ಪ್ರಶಸ್ತಿ ಪಡೆದ ಚಿತ್ರಗಳಿವು!

First Published | Oct 29, 2021, 3:52 PM IST

ಕನ್ನಡ ಚಿತ್ರರಂಗದ ಮುತ್ತು ಪುನೀತ್ ರಾಜ್‌ಕುಮಾರ್ ಅಭಿನಯಿಸಿದ ಬಹುತೇಕ ಚಿತ್ರಗಳಿಗೆ ಬೆಸ್ಟ್‌ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಯಾವ ಸಿನಿಮಾಗಳಿಗೆ ಪ್ರಶಸ್ತಿ ಪಡೆದಿದ್ದಾರೆ ನೋಡಿ...

ಬಾಲ ಕಲಾವಿದನಾಗಿ 1985ರಲ್ಲಿ ಬೆಟ್ಟದ ಹೂವು (Bettada Hoovu) ಚಿತ್ರಕ್ಕೆ ಬೆಸ್ಟ್‌ ಚೈಲ್ಡ್‌ ಆರ್ಟಿಸ್ಟ್‌ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. 

1983 ಮತ್ತು 1984ರಲ್ಲಿ ಬಿಡುಗಡೆಯಾದ ಚಲಿಸುವ ಮೋಡಗಳು (Chalisuva Modagalu) ಮತ್ತು ಎರಡು ನಕ್ಷತ್ರಗಳು (Eradu Nakshatragalu) ಎರಡೂ ಚಿತ್ರಕ್ಕೆ ಬೆಸ್ಟ್‌ ಬಾಲ ಕಾಲವಿದ ಪ್ರಶಸ್ತಿ ಪಡೆದುಕೊಂಡಿದ್ದಾರೆ. 

Tap to resize

2008ರಲ್ಲಿ ಪರ್ವತಿ (Parvathi Menon) ಜೊತೆ ನಟಿಸಿದ ಮಿಲನಾ (Milana) ಚಿತ್ರಕ್ಕೆ ಬೆಸ್ಟ್‌ ನಟ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.

2009ರಲ್ಲಿ ಪೋಲಿ ಹುಡುಗನಂತೆ ಕಾಣಿಸಿಕೊಂಡ 'ರಾಜ್ - ದಿ ಶೋ ಮ್ಯಾನ್' (Raj- the show man) ಚಿತ್ರಕ್ಕೆ ಬೆಸ್ಟ್ ನಟ ಪ್ರಶಸ್ತಿ.

2010ರಲ್ಲಿ ನಟಿ ಭಾವನಾ (Bhavana) ಜೊತೆ ನಟಿಸಿದ ಜಾಕಿ (Jackie) ಚಿತ್ರಕ್ಕೆ ಬೆಸ್ಟ್ ನಟ ಪ್ರಶಸ್ತಿ. ಈಗಲ್ಲೂ ಈ ಚಿತ್ರದ ಹಾಡು ಎಲ್ಲೇ ಕೇಳಿದರೂ ಪುನೀತ್ ಹೆಜ್ಜೆ ಹಾಕುತ್ತಾರೆ.

2011ರಲ್ಲಿ ಶ್ರೀನಗರ ಕಿಟ್ಟಿ (Srinagar Kitty), ಲೂಸ್ ಮಾದ ಯೋಗಿ (Loose mada Yogesh) ಜೊತೆಯಾಗಿ ನಟಿಸಿದ ಹುಡುಗರು (Hudugaru) ಚಿತ್ರಕ್ಕೆ ಬೆಸ್ಟ್‌ ನಟ ಪ್ರಶಸ್ತಿ.

2013ರಲ್ಲಿ ಬಿಡುಗಡೆಯಾದ ಯಾರೇ ಕೂಗಾಡಲಿ (Yaare Koogadali) ಚಿತ್ರಕ್ಕೆ ಯೂತ್ ಐಕಾನ್ ಆಫ್ ಸೌತ್‌ ಇಂಡಿಯನ್ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದ್ದಾರೆ.

2016ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಸಿನಿಮಾ ರಣ ವಿಕ್ರಂ (Rana Vikrama) ಚಿತ್ರಕ್ಕೆ ಬೆಸ್ಟ್‌ ನಟ ಪ್ರಶಸ್ತಿ. ಈ ಚಿತ್ರದಲ್ಲೂ ಅಪ್ಪು ಡಿಫರೆಂಡ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

2017ರಲ್ಲಿ ಇಡೀ ಕನ್ನಡಿಗರ ಮನಸ್ಸಿಗೆ ಹತ್ತಿರವಾದ ರಾಜಕುಮಾರ (Rajakumara) ಚಿತ್ರಕ್ಕೆ ಬೆಸ್ಟ್‌ ನಟ ಪ್ರಶಸ್ತಿ.  ಅಪ್ಪು ಅಣ್ಣಾವ್ರ ಸ್ವರೂಪ ಎಂದು ಈ ಸಿನಿಮಾ ನೋಡಿ ಎಲ್ಲರೂ ಹೇಳಿದ್ದಾರೆ.  

2019ರಲ್ಲಿ ಬಿಡುಗಡೆಯಾದ ನಟಸಾರ್ವಭೌಮ (Natasaarvabhowma) ಚಿತ್ರಕ್ಕೆ ಬೆಸ್ಟ್‌ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಲಾಕ್‌ಡೌನ್ ಆಗುವ ಒಂದು ದಿನ ಮುನ್ನ ಬಿಡುಗಡೆಯಾದ ಸಿನಿಮಾ ಇದು.

Latest Videos

click me!