Puneeth Rajkumar James: ಗಣರಾಜ್ಯೋತ್ಸವ ಸಂದರ್ಭ ಪುನೀತ್ ಅಭಿಮಾನಿಗಳಿಗೆ ದೊಡ್ಡ ನ್ಯೂಸ್!

First Published | Jan 26, 2022, 12:52 AM IST

ಬೆಂಗಳೂರು(ಜ. 26)  ಗಣರಾಜ್ಯೋತ್ಸವದ  ದಿವವೇ ಪುನೀತ್​  ರಾಜ್ ಕುಮಾರ್ ಅವರ ಕೊನೆಯ ಚಿತ್ರ ‘ಜೇಮ್ಸ್​’ ಚಿತ್ರದ ಸ್ಪೆಷಲ್​ ಪೋಸ್ಟರ್ ಬಿಡುಗಡೆಯಾಗಲಿದೆ.  ಪುನೀತ್​ ಅವರ ಜನ್ಮದಿನದ ಪ್ರಯುಕ್ತ ಮಾರ್ಚ್​ 17ರಂದು ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.

ಅಶ್ವಿನಿ ಪುನೀತ್ ರಾಜ್‍ಕುಮಾರ್ ಈ ವಿಚಾರವನ್ನು  ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪುನೀತ್​ ಹೀರೋ ಆಗಿ ನಟಿಸಿದ ಕೊನೆಯ ಚಿತ್ರ ‘ಜೇಮ್ಸ್​’  ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ. 

PRK ಮೂರು ಹೊಸ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ; ಅಪ್ಪು 5 ಸಿನಿಮಾಗಳು ಉಚಿತ ಪ್ರಸಾರ!

ಇದರ ಶೂಟಿಂಗ್​ ಇತ್ತೀಚೆಗೆ ಪೂರ್ಣಗೊಂಡಿತ್ತು. ಈಗ ಗಣರಾಜ್ಯೋತ್ಸವದ ಪ್ರಯುಕ್ತ ಸಿನಿಮಾದಿಂದ ವಿಶೇಷ ಪೋಸ್ಟರ್​ ಒಂದು ರಿಲೀಸ್​ ಆಗಲಿದೆ. ಅಪ್ಪು ಅಗಲಿಕೆ ನೋವಲ್ಲಿ ಕಾಲ ಕಳೆಯುತ್ತಿರುವ ಅಭಿಮಾನಿಗಳಿಗೆ ಈ ವಿಚಾರ ಖುಷಿ ನೀಡಿದೆ.

Tap to resize

ಬೆಳಗ್ಗೆ 11.11 ಗಂಟೆಗೆ ಸ್ಪೆಷಲ್ ಪೋಸ್ಟರ್ ರಿಲೀಸ್ ಆಗಲಿದೆ. ಚೇತನ್​ ಕುಮಾರ್​ ಆ್ಯಕ್ಷನ್​ ಕಟ್​ ಹೇಳಿರುವ ಈ ಚಿತ್ರದ  ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. 

ನಟ ಪುನೀತ್ ನಮ್ಮೊಂದಿಗೆ ಇಲ್ಲವಾಗಿದ್ದರೂ ಅವರ ದನಿಯನ್ನು ಬಳಸಿಕೊಳ್ಳುವ ಉದ್ದೇಶ ಇದೆ. ಪುನೀತ್‌ ಅವರ ಧ್ವನಿಯನ್ನು ಇಟ್ಟುಕೊಂಡೇ ಏನಾದರೂ ಹೊಸ ಪ್ರಯತ್ನ ಮಾಡಬೇಕು ಎಂಬ ಆಸೆಯನ್ನು ಈ ಹಿಂದೆ ನಿರ್ದೇಶಕರು ವ್ಯಕ್ತಪಡಿಸಿದ್ದರು. 

Latest Videos

click me!