ತಂಡದ ಜೊತೆ ಮುತ್ತತ್ತಿಯಲ್ಲಿ ಕೊನೆಯ ಶೂಟ್; ಭಾವುಕರಾದ ರಕ್ಷಿತಾ, ಪ್ರೇಮ್!

Suvarna News   | Asianet News
Published : Aug 19, 2021, 12:58 PM IST

'ಏಕ್ ಲವ್ ಯಾ' ಸಿನಿಮಾ ನಿರ್ಮಾಣ ಮಾಡುತ್ತಿರುವ ರಕ್ಷಿತಾ ಪ್ರೇಮ್  ಚಿತ್ರೀಕರಣದ ಕಡೆಯ ದಿನದಂದು ಭಾವುಕರಾಗಿದ್ದಾರೆ. ಇಡೀ ತಂಡದ ಜೊತೆ ಫೋಟೋ ಹಂಚಿಕೊಂಡು ಧನ್ಯವಾದಗಳನ್ನು ತಿಳಿಸಿದ್ದಾರೆ. 

PREV
17
ತಂಡದ ಜೊತೆ ಮುತ್ತತ್ತಿಯಲ್ಲಿ ಕೊನೆಯ ಶೂಟ್; ಭಾವುಕರಾದ ರಕ್ಷಿತಾ, ಪ್ರೇಮ್!

ಡಿಫರೆಂಟ್ ಡೈರೆಕ್ಟರ್ ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿರುವ, ರಕ್ಷಿತಾ ಬಂಡವಾಳ ಹಾಕಿರುವ ಸಿನಿಮಾ 'ಏಕ್ ಲವ್ ಯಾ' ತಂಡ ಸಂಪೂರ್ಣ ಚಿತ್ರೀಕರಣ ಮುಗಿಸಿದೆ. 

27

ಚಿತ್ರದ ಕೊನೆಯ ಶೆಡ್ಯೂಲ್ ಚಿತ್ರೀಕರಣವನ್ನು ಮುತ್ತತ್ತಿಯಲ್ಲಿ ಮಾಡಲಾಗಿದೆ. ಅಲ್ಲಿನ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಇಡೀ ತಂಡ Wrap up ಮಾಡಿದೆ. 

37

ತಮ್ಮ ಚಿತ್ರದಡಿ ಕೆಲಸ ಮಾಡಿದ ಪ್ರತಿಯೊಬ್ಬ ಸದಸ್ಯನ ಜೊತೆಯೂ, ರಕ್ಷಿತಾ ಪ್ರೇಮ್ ಫೋಟೋ ಕ್ಲಿಕ್ಕಿಸಿಕೊಂಡು ಸೋಷಿಯಲ್ ಮೀಡಿಯಾ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ. 

47

'ನನ್ನ ತಂಡದಲ್ಲಿದ್ದ ಪ್ರತಿಯೊಬ್ಬ ತಂತ್ರಜ್ಞರು, ಕಲಾವಿದರು ಹಾಗೂ ಈ ಪ್ರಾಜೆಕ್ಟ್ ಹಿಂದೆ ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದಗಳು. ಈ ಬ್ಯೂಟಿಫುಲ್ ಜರ್ನಿ ನೀವಿಲ್ಲದೆ ಸುಲಭವಾಗಿ ಸಾಗುತ್ತಿರಲಿಲ್ಲ. ಅದರಲ್ಲೂ ಈ ತಂಡದಲ್ಲಿ ಎಲ್ಲರೂ ಹಾರ್ಡ್‌ ವರ್ಕಿಂಗ್ ಬಾಯ್ಸ್ ಇದ್ದಾರೆ,' ಎಂದಿದ್ದಾರೆ.

57

'ಇದೊಂದು ಅದ್ಭುತ ಚಿತ್ರವಾಗಿ ಬರಲಿದೆ. ನೀವು ಖಂಡಿತ ಎಂಜಾಯ್ ಮಾಡುತ್ತೀರಾ ಎಂದು ಭಾವಿಸುವೆ. ಐ ಲವ್ ಯು ಏಕ್ ಲವ್ ಯಾ ಟೀಂ. ಹೀಗೆ ಮುಂದಕ್ಕೂ ಒಟ್ಟಿಗೆ ಕೆಲಸ ಮಾಡೋಣ,' ಎಂದು ಇಡೀ ಕುಟುಂಬದ ಜೊತೆ ಹಂಚಿಕೊಂಡಿದ್ದಾರೆ.

67

ಏಕ್ ಲವ್ ಯಾ ಚಿತ್ರದಲ್ಲಿ ರಕ್ಷಿತಾ ಸಹೋದರ ರಾಣಾ ಅಭಿನಯಿಸುತ್ತಿದ್ದಾರೆ. ರಾಣಾಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಣಿಸಿಕೊಳ್ಳುತ್ತಿದ್ದಾರೆ.  ಪ್ರೇಮ್ ಪ್ರತಿಯೊಂದು ಚಿತ್ರದ ಪ್ರತಿಯೊಂದು ಹಾಡು ರೆಕಾರ್ಡ್ ಬ್ರೇಕ್ ಮಾಡುತ್ತಿದೆ.

77

ಈಗಾಗಲೆ ಚಿತ್ರದ ಪೋಸ್ಟರ್, ಲಿರಿಕಲ್ ವಿಡಿಯೋ ಹಾಗೂ ಹೀರೋ, ಹೀರೋಯಿನ್ ಲುಕ್ ರಿವೀಲ್ ಮಾಡಲಾಗಿದೆ. ಅಲ್ಲದೆ ಕಾರ್ಗಿಲ್ ಭಾಗದಲ್ಲಿ ಚಿತ್ರೀಕರಣ ಮಾಡಿರುವ ಪ್ರೇಮ್, ಈ ದೃಶ್ಯವನ್ನು ವೀಕ್ಷಕರು ತೆರೆ ಮೇಲೆ ನೋಡಲೇಬೇಕು ಎಂದು ಎಲ್ಲಿಯೂ ರಿವೀಲ್ ಮಾಡಿಲ್ಲ.

click me!

Recommended Stories