ನಟಿ ಸುಧಾರಾಣಿ ಹುಟ್ಟು ಹಬ್ಬಕ್ಕೆ ಬಿಗ್ ಸರ್ಪ್ರೈಸ್ ನೀಡಿದ ಶ್ರುತಿ, ಮಾಳವಿಕಾ!

First Published Aug 16, 2021, 12:05 PM IST

51ರ ವಸಂತಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್‌ ಎವರ್‌ಗ್ರೀನ್‌ ಸುಂದರಿ ಸುಧಾರಾಣಿ. ಸ್ನೇಹಿತರ ಸರ್ಪ್ರೈಸ್ ಕೇಕ್, ಗಿಫ್ಟ್‌ ಹೇಗಿತ್ತು ನೋಡಿ....

1986ರಲ್ಲಿ 'ಆನಂದ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ಗೆ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಸುಧಾರಾಣಿ. ಆಗಿನ್ನೂ ಹೈಸ್ಕೂಲ್ ಓದುತ್ತಿದ್ದ ನಟಿಯನ್ನು ಕನ್ನಡಿಗರು ಬಹು ಬೇಗ ಒಪ್ಪಿಕೊಂಡರು.
undefined
ಮನೆ ದೇವ್ರು, ಮಿಡಿದ ಶ್ರುತಿ, ಆಸೆಗೊಬ್ಬ ಮೀಸೆಗೊಬ್ಬ, ಕಾವ್ಯ, ಮನಮೆಚ್ಚಿದ ಹುಡುಗಿ, ಅನುರಾಗ ಸಂಗಮ, ಪಂಚಮ ವೇದ, ಮಣ್ಣಿನ ದೋಣಿ, ಆಟೋ ಶಂಕರ್, ಮೈಸೂರ ಮಲ್ಲಿಗೆ, ಅವನೇ ನನ್ನ ಗಂಡ ಸೇರಿ ಸುಮಾರು 50 ಚಿತ್ರಗಳಲ್ಲಿ ನಟಿಸಿದ್ದಾರೆ.
undefined
ಆಗಸ್ಟ್‌ 15ರಂದು 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಿನಿ ಸ್ನೇಹಿತರಾದ ಶ್ರುತಿ ಹಾಗೂ ಮಾಳವಿಕಾ ಬಿಗ್ ಸರ್ಪ್ರೈಸ್‌ ನೀಡಿದ್ದಾರೆ. ಸುಧಾರಾಣಿ ಮನೆಯ ಗಾರ್ಡನ್‌ನಲ್ಲಿ ಶ್ರುತಿ ಹಾಗೂ ಮಳವಿಕಾ ಇಬ್ಬರೂ ಕೇಕ್‌ ಹಿಡಿದು ನಿಂತುಕೊಂಡು, ಕೊಡೆಯಿಂದ ಮುಖ ಕವರ್ ಮಾಡಿ ಕೊಂಡಿದ್ದಾರೆ.
undefined
ಇಬ್ಬರನ್ನೂ ಕಂಡು ಸುಧಾರಾಣಿ ಸಂತೋಷದಿಂದ ಕುಣಿದಿದ್ದಾರೆ. ಸ್ನೇಹಿತೆಯರು ಎಲ್ಲರೂ ಸೇರಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಇಬ್ಬರೂ ಸೇರಿ ಸುಧಾರಾಣಿಗೆ ಸುಂದರವಾದ ಸರ, ಹಾಗೂ ಹಳದಿ ಸಲ್ವಾರ್‌ ಗಿಫ್ಟ್ ನೀಡಿದ್ದಾರೆ.
undefined
ಈ ಸಂಭ್ರಮದಲ್ಲಿ ಸುಧಾರಾಣಿ ಪುತ್ರಿ ಹಾಗೂ ಶ್ರುತಿ ಪುತ್ರಿ ಗೌರಿ ಸೇರಿಕೊಂಡು ಹಾಡು ಹೇಳಿ ಸಂಭ್ರಮಿಸಿದ್ದಾರೆ. ಇತ್ತೀಚೆಗೆ ಸುಧಾರಾಣಿ, ಮಾಳವಿಕಾ ಮತ್ತು ಶ್ರುತಿ ಸ್ಯಾಂಡಲ್‌ವುಡ್ ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಲು ಅವರ ಮನೆಗೂ ತೆರಳಿದ್ದರೂ. ಸಾಮಾನ್ಯವಾಗಿ ಈ ಮೂವರು ಎಲ್ಲೆಡೆ ಒಟ್ಟಿಗೇ ಕಾಣಿಸಿಕೊಳ್ಳುತ್ತಾರೆ.
undefined
1978ರಿಂದಲೂ ಬಾಲ್ಯನಟಿಯಾಗಿ ಬೆಳ್ಳಿ ತೆರೆ ಮೇಲೆ ತಮ್ಮದೇ ಛಾಪು ಮೂಡಿಸಿರುವ ಸುಧಾರಾಣಿ ಇಂದಿಗೂ ನಟನೆಯಲ್ಲಿ ಸಕ್ರಿಯರಾಗಿದ್ದಾರೆ. ಡಾ.ರಾಜ್‌ಕುಮಾರ್, ಅನಂತ್ ನಾಗ್, ಅಂಬರೀಷ್, ವಿ.ರವಿಚಂದ್ರನ್ ಸೇರಿ ಕನ್ನಡದ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡ ಕೀರ್ತಿ ಸುಧರಾಣಿಗೆ ಸೇರಿದೆ.
undefined
click me!