ಪ್ರವೀಣನ ಕ್ರಶ್ ಪಲ್ಲವಿಯ ಹೊಸ ಫೋಟೋಶೂಟ್: ಶಾರದೆ ಲುಕ್‌ನಲ್ಲಿ ಸಪ್ತ

First Published | Aug 17, 2021, 2:51 PM IST
  • ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ನಾಯಕಿಯ ಹೊಸ ಫೋಟೋ ಶೂಟ್
  • ನವೀನನ ಕ್ರಶ್ ಪಲ್ಲವಿಯ ಹೊಸ ಫೋಟೋಗಳು ವೈರಲ್, @dayakukkaje ಕ್ಲಿಕ್ಕಿಸಿದ ಫೋಟೋಗಳಿವು

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಮೂಲಕ ಖ್ಯಾತಿ ಗಳಿಸಿದ ನಟಿ ಸಪ್ತ ಪಾವೂರು ಅವರು ಹೊಸ ಫೋಟೋ ಶೂಟ್ ಈಗ ವೈರಲ್ ಆಗಿದೆ. ಶಾರದೆಯ ರೂಪದಲ್ಲಿ ಕಾಣಿಸಿಕೊಂಡಿರುವ ನಟಿಯ ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ. 

ಹಸಿರು ಬಣ್ಣದ ಸೀರೆ, ಕೆಂಪು ಕುಪ್ಪಸ, ಅದಕ್ಕೊಪ್ಪುವ ಚಂದದ ಆಭರಣ, ಮಂಗಳೂರು ಮಲ್ಲಿಗೆಯಿಂದ ಅಲಂಕರಿಸಿದ ಕೇಶ ಶೃಂಗಾರ ಅದ್ಭುತವಾಗಿ ಕಾಣಿಸಿದೆ.

Tap to resize

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲಿ ಗಡಿನಾಡ ವಿದ್ಯಾರ್ಥಿನಿ ಪಲ್ಲವಿ ಪಾತ್ರದಲ್ಲಿ ಕಾಣಿಸಿಕೊಂಡ ಸಪ್ತ ಪಾವೂರು ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಒಂದೇ ಸಿನಿಮಾ ಮೂಲಕ ಸಖತ್ ವೈರಲ್ ಆಗಿದ್ದಾರೆ ನಟಿ

ಈ ಹಿಂದೆ ಅಖಿಲಾ ಪಜಿಮಣ್ಣು ಅವರಿಗೆ ಸಿಂಗರಿಸಿದ the_beauty._blog ಅವರೇ ಸಪ್ತಾ ಪಾವೂರು ಅವರಿಗೂ ಈ ಹೊಸ ಲುಕ್ ಕೊಟ್ಟಿದ್ದಾರೆ.

ಕೆಂಪು ಬ್ಲೌಸ್‌ ಮೇಲೆ ಬೆಳ್ಳಿಯ ಚಂದದ ಕಸೂತಿ ಇರುವ ಉಡುಗೆಯಲ್ಲಿ ಮುದ್ದಾಗಿ ಕಾಣಿಸಿದ್ದಾರೆ ನಟಿ
ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ಸಪ್ತಾ ಪಾವೂರು ಫೋಟೋಶೂಟ್ ಮಾಡಿದ್ದು, ದೇವಾಲಯದ ಚಂದದ ಪರಿಸರದಲ್ಲಿ ಶಾರದೆಯ ಕಾನ್ಸೆಪ್ಟ್‌ನಲ್ಲಿ ಶೂಟ್ ಮಾಡಲಾಗಿದೆ

ಹಸಿರು ಸೀರೆಯ ಮೇಲೆ ಬಿಳಿ ಬುಟ್ಟ ಇರುವ ಬೆಳ್ಳಿಯಂಚಿನ ಸೀರೆಯುಟ್ಟಿದ್ದು, ಇದಕ್ಕೊಪ್ಪುವ ಆಭರಣ ಧರಿಸಿದ್ದಾರೆ. ಪುಟ್ಟ ಹುಡುಗಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಸಪ್ತಾ ಲುಕ್ ಚೇಂಜ್ ಆಗಿ ಕಾಣಿಸುತ್ತದೆ

=

ವೀಣಾವಾದಿನ ಪೋಸ್‌ನಲ್ಲಿ ಕಾಣಿಸಿಕೊಂಡ ನಟಿ ಕೈಯಲ್ಲಿ ವೀಣೆ ಹಿಡಿದು ತಲ್ಲೀನಳಾಗಿ ನುಡಿಸುತ್ತಿರುವ ಪೋಸ್ ಕೊಟ್ಟಿದ್ದಾರೆ. ನೀಳ ಕಣ್ರೆಪ್ಪೆ ಹಾಗೂ ಕಿರುನಗು ಸಪ್ತಾ ಸೌಂದರ್ಯ ಹೆಚ್ಚಿಸಿದೆ

ಮಂಗಳೂರಿನ ಪಾವೂರು ಗ್ರಾಮದ ಹುಡುಗಿ ಸಪ್ತಾ ಕನ್ನಡ ಚಿತ್ರರಂಗದಲ್ಲಿ ಬಾಲನಟಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಸತೀಶ್ ಹಾಗೂ ಪವಿತ್ರಾ ದಂಪತಿಯ ಪುತ್ರಿ ಸಪ್ತಾ ಒಂದನೇ ತರಗತಿಯಲ್ಲಿದ್ದಾಗಲೇ ಚೆಲ್ಲಾಪಿಲ್ಲಿ ಸಿನಿಮಾ ಮೂಲಕ ಸ್ಯಾಂಡಲ್ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.

`ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದ ಪಲ್ಲವಿ ಪಾತ್ರದ ಮೂಲಕ ಫೇಮಸ್ ಆದ ಸಪ್ತಾ ಈ ಚಿತ್ರ ಮಾಡುವಾಗ ಮಂಗಳೂರಿನ ಲೂವರ್ಡ್ ಸ್ಕೂಲ್‌ನಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದರು.

Latest Videos

click me!