ಕಾಂತಾರ ಚಾಪ್ಟರ್ 1ರ ಯಶಸ್ಸಿನ ನಂತರ, ನಟ ರಿಷಬ್ ಶೆಟ್ಟಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಬಳಿಕ ಗಾಯತ್ರಿ ಚಿತ್ರಮಂದಿರದಲ್ಲಿ ಅಭಿಮಾನಿಗಳನ್ನು ಭೇಟಿಯಾಗಿ, ಚಿತ್ರದ ಯಶಸ್ಸಿಗೆ ಕನ್ನಡಿಗರನ್ನು ಶ್ಲಾಘಿಸಿದರು. ದೈವಾರಾಧನೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾಂತಾರ ಚಾಪ್ಟರ್ 1ರ ಯಶಸ್ಸಿನ ಹಿನ್ನೆಲೆಯಲ್ಲಿ ನಟ ರಿಷಬ್ ಶೆಟ್ಟಿ ಗುರುವಾರ ನಗರದ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇ ಶ್ವರಿ ದರ್ಶನ ಪಡೆದ ಬಳಿಕ ಗಾಯತ್ರಿ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳ ಸಂಭ್ರಮ ನೋಡಿ ಖುಷಿಪಟ್ಟರು. ಗಾಯತ್ರಿ ಚಿತ್ರಮಂದಿರಕ್ಕೆ ಭೇಟಿ ನೀಡಿದ ಡಿವೈನ್ ಸ್ಟಾರ್‌ನಟ ರಿಷಬ್ ಶೆಟ್ಟಿ ಅವರನ್ನು ಚಿತ್ರಮಂದಿರದ ಮಾಲೀಕ ರಾಜಾರಾಂ ಆತ್ಮಯವಾಗಿ ಸ್ವಾಗತಿಸಿದರು. ಅಭಿಮಾನಿಗಳ ಜೊತೆ ಮಾತನಾಡಿದರು. ನಮ್ಮನ್ನ ನೋಡಲಿಕ್ಕೆ ನೀವು ಬರಬಹುದು. ನಿಮ್ಮನ್ನ ನೋಡಲಿಕ್ಕೆ ನಾವು ಬರಬಾರದಾ? ಎಂದು ಕಾಂತಾರ ಡೈಲಾಗ್ ಹೊಡೆದು ರಂಜಿಸಿದರು.
27
ಏಳು ಬೀಳು ದಾಟಿ ಅಭಿಮಾನಿಗಳ ಆಶೀರ್ವಾದ ನೋಡ್ತಿದ್ದೇವೆ
ಬಳಿಕ ಮಾತನಾಡಿದ ಅವರು, ಇಡೀ ಚಿತ್ರತಂಡ ಮೂರು ವರ್ಷದ ಕಷ್ಟ, ಟೀ ಕಾಫಿ ಕೊಡುವ ಹುಡುಗರಿಂದ ಎಲ್ಲರ ಶ್ರಮ ಹಾಕಿದ್ದಾರೆ. ಕಲಾವಿದರಾಗಿ ನಾವು ಇದನ್ನ ತುಂಬಾ ಎಂಜಾಯ್ ಮಾಡಿದ್ದೇವೆ. ನಾವು ಈ ಕ್ಷಣಗಳನ್ನ ಹೆಚ್ಚು ಸಂಭ್ರಮಪಡುತ್ತೇವೆ. ಹತ್ತಾರು ಅಡೆತಡೆ, ಕಷ್ಟ ನಷ್ಟ ಮೀರಿ ಒಂದು ಹಂತ ತಲುಪಿದ್ದೇವೆ. ಒಂದು ದೈವದ ಚಿತ್ರ ಹೇಳುವಾಗ ಪರೀಕ್ಷೆ ಸಹಜ. ಅಣ್ಣಾವು ಹೇಳಿದ್ರು ಅಭಿಮಾನಿಗಳನ್ನ ತಲುಪುವುದು ಕಷ್ಟ ಅಂತ. ಅದರಂತೆ ನಾವು ಏಳು ಬೀಳು ದಾಟಿ ಅಭಿಮಾನಿಗಳ ಆಶೀರ್ವಾದ ನೋಡ್ತಿದ್ದೇವೆ ಎಂದರು.
37
ಮನೋರಂಜನೆ ಮೀರಿ ದೈವದ ಬಗ್ಗೆ ಹೇಳುವ ಸಿನಿಮಾ
ದೈವಗಳನ್ನ ಅಣಕಿಸುವ ಕೆಲಸ ಆಗುತ್ತಿದೆ. ಕೆಲವು ಸೋಶಿಯಲ್ ಮೀಡಿಯಾಗಳು ಮಾಡುತ್ತಿದ್ದಾರೆ. ಪದೇ ಪದೇ ಅವರ ಬಳಿ ಮನವಿ ಮಾಡುತ್ತಿದ್ದೇವೆ.ಇದು ಮನೋರಂಜನೆ ಮೀರಿ ದೈವದ ಬಗ್ಗೆ ಹೇಳುವ ಸಿನಿಮಾ. ನಮ್ಮಲ್ಲಿ ಕೋಲ ಹೇಗೆ ನಡೆಯುತ್ತದೆಯೋ ಹಾಗೆ ದೇವರನ್ನ ಭಕ್ತಿಯಿಂದ ಪೂಜಿಸಿದ್ದೇವೆ. ನಮ್ಮ ಮನೆಯಲ್ಲೂ ದೈವ ಸ್ಥಾನವಿದೆ. ನಾನು ಕೂಡ ದೈವರಾಧಕ. ಅದನ್ನ ನಂಬುವವರಿಗೆ ಹರ್ಟ್ ಆಗುತ್ತಿದೆ. ಕನ್ನಡ ಪ್ರೇಕ್ಷಕರು ಎಂದೂ ಕೈಬಿಟ್ಟಿಲ್ಲ. ಕನ್ನಡಿಗರು ಒಂದು ಒಳ್ಳೆ ಸಿನಿಮಾ ಮಾಡಿದರೆ ನಾವು ಬರ್ತೀವಿ ಅಂತಾರೆ. ಅದೇ ರೀತಿ ಕಾಂತಾರ ಚಿತ್ರವನ್ನ ಗೆಲ್ಲಿಸಿ ಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾಂತಾರ ಚಾಪ್ಟರ್ 1 ಯಶಸ್ವಿಯಾದ ಹಿನ್ನೆಲೆಯಲ್ಲಿ ನಟ ರಿಷಬ್ ಶೆಟ್ಟಿ ಟೆಂಪಲ್ ರನ್ ಮಾಡುತ್ತಿದ್ದು ಗುರುವಾರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ಚಾಮುಂಡಿ ತಾಯಿಯ ಗರ್ಭಗುಡಿಯ ಲ್ಲಿ ನಿಂತು ನಾಲ್ಕು ನಿಮಿಷ ಪ್ರಾರ್ಥನೆ ಸಲ್ಲಿಸಿದ ನಟ ರಿಷಬ್ ಶೆಟ್ಟಿ ಅವರು ಬಳಿಕ ದೇವರ ಹುಂಡಿಗೆ ಕಾಣಿಕೆ ಹಾಕಿದರು.
57
ಸೆಲ್ಪಿಗೆ ಮುಗಿಬಿದ್ದ ಅಭಿಮಾನಿಗಳು
ರಿಷಟ್ ಶೆಟ್ಟಿ ಜೊತೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಸೆಲ್ಪಿಗೆ ಮುಗಿಬಿದ್ದರು. ಒತ್ತಡದ ನಡುವೆಯೂ ಕೆಲವರೊಂದಿಗೆ ರಿಷಬ್ ಶೆಟ್ಟಿ ಅವರು ಸೆಲ್ಪಿ ತೆಗೆಸಿಕೊಂಡರು. ಬಳಿಕ ಮಾತನಾಡಿದ ಅವರು, ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಟ ರಿಷಬ್ ಶೆಟ್ಟಿ, ಚಾಮುಂಡೇಶ್ವರಿ ದರ್ಶನ ಪಡೆದಿದ್ದೇನೆ. ಕಾಂತಾರ ಚಾಪ್ಟರ್1 ಯಶಸ್ವಿಯಾಗಿದೆ. ನಮ್ಮ ತಂಡದ ಶ್ರಮವನ್ನ ಜನರು ಒಪ್ಪಿದ್ದಾರೆ. ನಮ್ಮ ಸಿನಿಮಾದ ಯಶಸ್ಸು ಮೊದಲು ಕನ್ನಡಿಗರಿಗೆ ಸಲ್ಲಬೇಕು, ಕಾಂತಾರ ಬಂದಾಗ ಜನರು ಇಷ್ಟ ಪಟ್ಟಿದ್ದರು. ಸಿನಿಮಾದ ಗಳಿಕೆ, ಆದಾಯದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು. ನಾನು ದೈವವನ್ನ ನಂಬುವಂತವನು. ದೈವದ ಅನುಮತಿ ಪಡೆದು ಸಿನಿಮಾ ಮಾಡಿದ್ದೇನೆ. ನಾಡಿನ ಜನತೆ ತುಂಬಾ ಅದ್ಭುತವಾತ ಯಶಸ್ಸು ಕೊಟ್ಟಿದ್ದಾರೆ. ಗಳಕೆಯ ಬಗ್ಗೆ ನಾನು ಮಾತನಾಡುವುದಿಲ್ಲ, ಕನ್ನಡಿಗರಿಗೆ ಧನ್ಯವಾದ ಅರ್ಪಿಸುತ್ತೇನೆ.
67
ಹಿರಿಯರ ಮಾರ್ಗದರ್ಶನ ಪಡೆದು ಸಿನಿಮಾ ಮಾಡಿದ್ದೇನೆ: ರಿಷಭ್
ದೈವರಾದಕರು ಸಿನಿಮಾ ಬಗ್ಗೆ ವಿರೋಧ ವ್ಯಕ್ತಪಡಿಸಿರಬಹುದು. ಆದರೆ ದೇವರ ವಿಚಾರಗಳನ್ನ ಸಿನಿಮಾದಲ್ಲಿ ಮಾತ್ರ ಮಾತನಾಡುತ್ತೇನೆ. ಯಾರು ಏನು ಬೇಕಾದರೂ ಮಾತನಾಡಲಿ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಇಡೀ ತಂಡದ ಮೇಲೆ ದೈವದ ಆಶೀರ್ವಾದ ಇದೆ ಎಂದರು. ಎಲ್ಲಿಯೂ ತಪ್ಪುಗಳು ಆಗದಂತೆ ಹಿರಿಯರ ಮಾರ್ಗದರ್ಶನ ಪಡೆದು ಸಿನಿಮಾ ಮಾಡಿದ್ದೇನೆ. ನಾನು ಹೊಸಬನಲ್ಲ. ದೈವದ ಸಿನಿಮಾ ಮಾಡುವವರು ಸರಿಯಾದ ರೀತಿಯಲ್ಲಿ ಸಿನಿಮಾ ಮಾಡಬೇಕು. ಕುಂದಾಪುರದ ಕೆರಾಡಿ ಗ್ರಾಮದಿಂದ ಬಂದು ಜನರಿಗೆ ರೀಚ್ ಆಗುವ ರೀತಿ ಸಿನಿಮಾ ಮಾಡುತ್ತಿದ್ದೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಿನಿಮಾಗೆ ಒಳ್ಳೆಯ ಹೆಸರು ಬಂದಿದೆ. ಇದಿರಂದ ತುಂಬಾ ಖುಷಿ ಆಗುತ್ತಿದೆ ಎಂದು ಅವರು ಹೇಳಿದರು.
77
ಕಾಂತಾರ ಮುಂದಿನ ಚಾಪ್ಟರ್ ಬಗ್ಗೆ ಮಾತನಾಡಲ್ಲ
ಕಾಂತಾರ ಮುಂದಿನ ಚಾಪ್ಟರ್ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ನನ್ನ ಮುಂದಿನ ಚಿತ್ರ ಜೈ ಹನುಮಾನ. ಇದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದರು. ನಟ ಅಮಿತಾಬ್ ಬಚ್ಚನ್ ಭೇಟಿ ಮಾಡಿದ್ದೆ. ಅಣ್ಣಾವ್ರ ಬಗ್ಗೆ ಬಹಳ ಮಾತನಾಡಿದರು. ಅವರು ತಮ್ಮ ಅನುಭವ ಹಂಚಿಕೊಂಡರು. ಅಂತಹ ಲೆಜೆಂಡ್ ಜೊತೆ ನಾನು ಕಾಲ ಕಳೆದದ್ದು ಖುಷಿ ಕೊಟ್ಟಿದೆ. ಫ್ಯಾನ್ಸ್ ವಾರ್‌ಬಗ್ಗೆ ಸಲಹೆ ಕೊಡುವಷ್ಟು ದೊಡ್ಡವನಲ್ಲ. ಎಲ್ಲರ ಸಿನಿಮಾ ನೋಡಿ ಕನ್ನಡ ಸಿನಿಮಾ ಗೆಲ್ಲಿಸಿ ಅಂತ ಕೇಳಿಕೊಳ್ಳುತ್ತೇವೆ. ಥಿಯೇಟರ್‌ನಲ್ಲಿ ದೈವ ಆರಾಧನೆ ನೆಪದಲ್ಲಿ ಹುಚ್ಚಾಟ ಮಾಡಬೇಡಿ. ಅದಕ್ಕೆ ಒಂದು ಕ್ರಮ ಇರತ್ತದೆ. ದೈವ ಆರಾಧನೆಗೆ ಒಂದು ಶಿಸ್ತುಬದ್ಧಕ್ರಮವಿದೆ. ಆ ರೀತಿ ಮಾಡಬೇಡಿ ಅಂತ ಎಲ್ಲರಿಗೂ ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.