'ಅಪ್ಪನ ಬರ್ತಡೇ ಇವತ್ತು, ಪೂಜೆ ಮಾಡು' ಎಂದು ತಂಗಿಗೆ ಸೂಚಿಸಿದ ರಾಯನ್​: ಚಿರು ಸರ್ಜಾ ಕಂದನ ಮುದ್ದು ಮಾತಿಗೆ ಫ್ಯಾನ್ಸ್​ ಭಾವುಕ

Published : Oct 18, 2025, 04:09 PM IST

ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬದಂದು, ಪತ್ನಿ ಮೇಘನಾ ರಾಜ್ ಮತ್ತು ಪುತ್ರ ರಾಯನ್ ರಾಜ್ ಸರ್ಜಾ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ, ಅಪ್ಪನ ಕುರಿತು ರಾಯನ್ ಆಡಿದ ಮುದ್ದು ಮಾತುಗಳು ಎಲ್ಲರನ್ನೂ ಭಾವುಕರನ್ನಾಗಿಸಿದೆ.

PREV
17
ಚಿರಂಜೀವ ಸರ್ಜಾ ಹುಟ್ಟುಹಬ್ಬ

ಯುವ ಸಾಮ್ರಾಟ್ ಎಂದೇ ಫೇಮಸ್​ ಆಗಿದ್ದ ಚಿರಂಜೀವಿ ಸರ್ಜಾ ಚಿರಂಜೀವಿ ಸರ್ಜಾ ಅವರು ಎಲ್ಲರನ್ನೂ ಅಗಲಿ ಐದು ವರ್ಷಗಳೇ ಕಳೆದಿವೆ. 2020ರ ಜೂನ್​ 7ರಂದು ಹೃದಯಾಘಾತದಿಂದ ಅಗಲಿದಾಗ ಇಡೀ ಚಿತ್ರರಂಗ ಶಾಕ್​ ಆಗಿತ್ತು. ನಿನ್ನೆ ಅಂದರೆ ಅಕ್ಟೋಬರ್ 17 ಅವರ ಹುಟ್ಟುಹಬ್ಬ. ಅವರು ಬದುಕಿದ್ದರೆ, 41ನೇ ಹುಟ್ಟುಹಬ್ಬವಾಗಿರುತ್ತಿತ್ತು. ಅವರು ಬದುಕಿದ್ದಾಗ ಮನೆ ಮುಂದೆ ಅಭಿಮಾನಿಗಳೊಂದಿಗೆ ಬರ್ತ್‌ಡೇಯನ್ನು ಜೋರಾಗಿಯೇ ಆಚರಿಸಿಕೊಳ್ಳುತ್ತಿದ್ದರು. ಹೊಸ ಹೊಸ ಸಿನಿಮಾಗಳು ಅನೌನ್ಸ್ ಆಗುತ್ತಿದ್ದವು. ಇಡೀ ಫ್ಯಾಮಿಲಿ ಜೊತೆ ಸೇರಿ ಸಂಭ್ರಮಿಸುತ್ತಿದ್ದರು.

27
ವಿಧಿಯಾಟವೇ ಬೇರೆ

ಆದರೆ ವಿಧಿಯಾಟವೇ ಬೇರೆಯಾಗಿತ್ತು. ಅವರ ಹುಟ್ಟುಹಬ್ಬದ ನಿಮಿತ್ತ ಅವರ ಅಭಿಮಾನಿಗಳು ಚಿರು ಅವರನ್ನು ನೆನಪಿಸಿಕೊಂಡು ಭಾವುಕರಾಗುತ್ತಿದ್ದರೆ, ಪತ್ನಿ ಮೇಘನಾ ರಾಜ್​ ತಮ್ಮ ಪುತ್ರ ರಾಯನ್​ ಜೊತೆ ಸೇರಿ ಚಿರು ಸಮಾಧಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಯನ್​ ರಾಜ್​ ಸರ್ಜಾ (Raayan Raj Sarja) ಆಡಿದ ಮಾತುಗಳು ಎಲ್ಲರನ್ನೂ ಭಾವುಕರನ್ನಾಗಿಸುತ್ತಿದೆ.

37
ತಂಗಿಗೆ ಸೂಚನೆ

ತಂಗಿ ಅಂದರೆ ಚಿರು ಅವರ ಸಹೋದರ ಧ್ರುವ ಸರ್ಜಾ (Dhruva Sarja) ಅವರ ಮಗಳು ರುದ್ರಾಕ್ಷಿ ಸರ್ಜಾ ಜೊತೆ ಅಪ್ಪನ ಸಮಾಧಿ ಬಳಿ ತೆರಳಿರುವ ರಾಯನ್​, ತಂಗಿಗೆ ತನ್ನದೇ ಮುದ್ದು ಮಾತಿನಲ್ಲಿ, 'ಅಪ್ಪ ಬರ್ತಡೇ ಇವತ್ತು, ಪೂಜೆ ಮಾಡಿ, ನಮಸ್ತೆ ಮಾಡು, ಹ್ಯಾಪಿ ಬರ್ತ್ ಡೇ ವಿಶ್ ಮಾಡಿ ಹೋಗ್ಬೇಕು ಎಂದಿದ್ದಾನೆ. ಈ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಅಭಿಮಾನಿಗಳು ಕಣ್ಣೀರಾಗಿದ್ದಾರೆ.

47
ದಾಂಪತ್ಯದ ಕುರಿತು

ಇನ್ನು ಮೇಘನಾ ಮತ್ತು ಚಿರು ಅವರ ದಾಂಪತ್ಯದ ಕುರಿತು ಹೇಳುವುದಾದರೆ, ಇಬ್ಬರೂ ಸುಮಾರು 10 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮೇಘನಾ ರಾಜ್‌ ಅವರನ್ನು ಚಿರಂಜೀವಿ ಸರ್ಜಾ ಮನೆಯವರನ್ನು ಒಪ್ಪಿಸಿ 2 ಮೇ 2018 ರಂದು ವಿವಾಹವಾಗಿದ್ದರು. ಮದುವೆಯಾದ ಎರಡೇ ವರ್ಷದಲ್ಲಿ 7 ಜೂನ್‌ 2020 ಮಧ್ಯಾಹ್ನ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾದರು. ಚಿರು ನಿಧನರಾದಾಗ ಮೇಘನಾ 5 ತಿಂಗಳ ಗರ್ಭಿಣಿಯಾಗಿದ್ದರು. 22 ಅಕ್ಟೋಬರ್‌ 2020 ರಂದು ಮೇಘನಾ ಗಂಡು ಮಗುವಿಗೆ ಜನ್ಮ ನೀಡಿದ್ದರು.

57
ರಾಜಮಾರ್ತಾಂಡ ಕುರಿತು

ಈ ಹಿಂದೆ ರಾಜಮಾರ್ತಾಂಡ ಕುರಿತು ಮಾತನಾಡಿದ್ದ ಚಿರು ಪತ್ನಿ, ನಟಿ ಮೇಘನಾ ರಾಜ್‌, 'ಅದ್ಯಾಕೋ ಗೊತ್ತಿಲ್ಲ. ಚಿರಂಜೀವಿ ಸರ್ಜಾ ನಟಿಸುವ ಬೇರೆ ಚಿತ್ರಗಳ ಸಂಭಾಷಣೆಯನ್ನು ಸೆಟ್‌ನಲ್ಲಿ ಹೇಳಿ, ಹತ್ತು ನಿಮಿಷಕ್ಕೆ ಮರೆತು ಹೋಗುತ್ತಿದ್ದರು. ಆದರೆ ರಾಜಮಾರ್ತಾಂಡ ಚಿತ್ರದ ಸಂಭಾಷಣೆ ಮಾತ್ರ ಯಾವಾಗಲೂ ಹೇಳುತ್ತಿದ್ದರು ಎಂದಿದ್ದರು.

67
ಚಿರುನ ನೆನಪಿನಲ್ಲಿ

ಕೊನೆಗೆ ಚಿರು ಬಂದರೆ ನಾವೆಲ್ಲಾ ಆ ಡೈಲಾಗ್ ಹೇಳುತ್ತಿದ್ದೆವು. ಈ ಚಿತ್ರವನ್ನು ಅವರು ಅಷ್ಟೊಂದು ಹಚ್ಚಿಕೊಂಡಿದ್ದರು. ಅವರು ನಮ್ಮೊಂದಿಗೆ ಇಲ್ಲದ ಈ ಸಮಯದಲ್ಲಿ ರಾಜಮಾರ್ತಾಂಡ ಚಿತ್ರತಂಡಕ್ಕೆ ಬೆಂಬಲ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ನಮ್ಮ ಎರಡು ಕುಟುಂಬಗಳ ಸಹಕಾರ ಸದಾ ನಿಮಗೆ ಇರುತ್ತದೆ' ಎಂದು ಸ್ಮರಿಸಿಕೊಂಡಿದ್ದರು.

77
ಮೇಘನಾ ವಿಷ್​

ಇನ್ನೊಂದೆಡೆ ಮೇಘನಾ ರಾಜ್‌ ತಮ್ಮ ಇನ್ಸ್‌ಟಾಗ್ರಾಮ್‌ ಪೋಸ್ಟ್‌ಲ್ಲಿ ಚಿರು ಸರ್ಜಗೆ ಜನ್ಮದಿನದ ವಿಶ್‌ ಮಾಡಿದವರ ಫೋಟೋಗಳನ್ನು ಸ್ಟೋರಿಯಲ್ಲಿ ಶೇರ್‌ ಮಾಡಿಕೊಡಿದ್ದಾರೆ. ಧ್ರುವ ಸರ್ಜಾ ಎರಡು ಫೋಟೋಗಳನ್ನು ಪೋಸ್ಟ್‌ ಮಾಡಿ ನಮ್ಮ ಅಣ್ಣ ಎಂದು ಬರೆದುಕೊಂಡಿದ್ದಾರೆ. ಇದನ್ನು ಮೇಘನಾ ರಾಜ್‌ ಶೇರ್‌ ಮಾಡಿದ್ದಾರೆ.

Read more Photos on
click me!

Recommended Stories