ಸ್ಯಾಂಡಲ್‌ವುಡ್‌‌ಗೆ ಎಂಟ್ರಿ ಕೊಟ್ಟ ತೀರ್ಥಹಳ್ಳಿ ಬ್ಯೂಟಿ, ಇಷ್ಟುದ್ದದ ನಟಿಗೆ ಸಿಗುತ್ತಾ ತಕ್ಕ ಆಪರ್ಚುನಟಿ!

First Published Nov 22, 2023, 10:33 AM IST

'ಕೃಷ್ಣ ತುಳಸಿ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರ ಿಕೊಟ್ಟ ಪ್ರಿಯಾಂಕಾ ಕುಮಾರ್ ಇದೀಗ ಅಭಿಷೇಕ್ ಅಂಬರೀಷ್ ಅಭಿನಯ ಬ್ಯಾಡ್ ಮ್ಯಾನರ್ಸ್‌ನಲ್ಲಿ ಸಿರಿವಂತ ಉದ್ಯಮಿಯ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನವರಾದ ಈ ನಟಿ ಓದಿದ್ದು, ಬೆಳೆದಿದ್ದು ಮೈಸೂರಲ್ಲಿ. ಸುಮಾರು 5.9 ಅಡಿ ಉದ್ದವಿರೋ ಈ ನಟಿಗೆ ತಕ್ಕ ಹೀರೋ ಎಲ್ಲಿ ಸಿಕ್ತಾರೆ ಅನ್ನುವುದೇ ಪ್ರಶ್ನೆ. ಆದರೆ, ಪ್ರತಿಭೆ ಮುಖ್ಯ ಅನ್ನೋ ನಟಿ ಬಗ್ಗೆ ಮತ್ತೊಂದಿಷ್ಟು ಮಾಹಿತಿ ಇಲ್ಲಿದೆ. 

 

ಮ್ಯಾಡ್ ಮ್ಯಾನ್ಸರ್ಸ್ ಅಭಿಷೇಕ್ ಅಂಬರೀಷ್ ಹಾಗೂ ರಚಿತಾ ರಾಮ್ ಜೊತೆ ನಟಿಸಿರುವ ಪ್ರಿಯಾಂಕಾ ಕುಮಾರ್ ತೀರ್ಥಹಳ್ಳಿಯವರಾಗಿದ್ದು, ಬೆಳೆದಿದ್ದು ಮೈಸೂರಲ್ಲಿ. ಸೌಂದರ್ಯ ಸ್ಪರ್ಧೆಗಳಲ್ಲಿಯೂ ಗೆದ್ದಿರುವ ಈ ಬ್ಯೂಟಿ ಕೃಷ್ಣ ತುಳಸಿ ಸೀರಿಯಲ್‌ನಲ್ಲಿ ನಟಿಸಿ, ಮನೆ ಮಾತಾಗಿದ್ದರು. 

ಮಲೆನಾಡಿನ ತೀರ್ಥಹಳ್ಳಿಯಲ್ಲಿ ಬೆಳೆದ ಈ ನಟಿಗೆ ಮುಂಚಿನಿಂದನಲೂ ಯಕ್ಷಗಾನ, ನಾಟಕದ ಹುಚ್ಚು. ಆಗಿನಿಂದಲೇ ಆ್ಯಕ್ಟಿಂಗ್ ಕಡೆಗೆ ಒಲವು ಹೊರಳಿತು. 

ಸುಮಾರು ಮೂರು ವರ್ಷಗಳ ಪರದಾಡಿದ ಬಳಿಕ ಪ್ರಿಯಾಂಕಾಗೆ ಕೃಷ್ಮ ತುಳಸಿಯಲ್ಲೊಂದು ನಟನೆಗೆ ಅವಕಾಶ ಸಿಕ್ಕಿದ್ದು, ತಮ್ಮ ಪ್ರತಿಭೆ ತೋರಿಸಲು ನೆರವಾಯಿತು. 

ಇದೀಗ ಅಭಿಷೇಕ್ ಅಂಬರೀಷ್ ಹಾಗೂ ರಚಿತಾ ರಾಮ್ ಅಭಿನಯನದ Bad Mannersನಲ್ಲಿಯೂ ಅವಕಾಶ ಸಿಕ್ಕಿದ್ದು, ಸಿರಿವಂತರ ಮಕ್ಕಳನ್ನು ಬೇರೆಯವರು ಹೇಗೆ ಮಿಸ್ ಯೂಸ್ ಮಾಡಿಕೊಳ್ಳಬಹುದು ಎಂಬುದನ್ನು ತೋರಿಸುವ ಪಾತ್ರವಂತೆ. 

ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಮೊದಲ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿರುವ ನಟಿ, ಈ ಚಿತ್ರದಲ್ಲಿ ಸಹಜವಾಗಿಯೇ ನಟಿಸಿದ್ದಾರಂತೆ.

ಕಿರುತೆರೆ, ಇದೀಗ ಬೆಳ್ಳಿ ತೆರೆಗೆ ಬರುವ ಮುನ್ನ ಹಲವು ಸೌಂದರ್ಯ ಸ್ಪರ್ಧೆಗಳಲ್ಲಿಯೂ ಭಾಗಿಯಾಗಿ ಬಹುಮಾನ ಗೆದ್ದಿದ್ದಾರೆ ಮಲೆನಾಡ ಬ್ಯೂಟಿ.

ಟ್ರೆಡಿಷನಲ್ ಹಾಗೂ ಮಾಡರ್ನ್ ಡ್ರೆಸ್‌ಗೂ ಸೈ ಎನಿಸಿರುವ ಇವರಿಗೆ 5.9 ಅಡಿ ಉದ್ದ ತೊಡಕಾಗಬಹುದಾ? ಆರಡಿ ಎತ್ತರದ ಹೀರೋ ಸಿಗೋದು ಕನ್ನಡ ಚಿತ್ರರಂಗದಲ್ಲಿ ತುಸು ಕಷ್ಟವೇ.

ಕನ್ನಡದಲ್ಲಿಯೇ ಪ್ರತಿಭೆಯನ್ನು ಅನಾವರಣಗೊಳಿಸಬೇಕೆಂಬ ತುಡಿತ ಇರೋ ಈ ನಟಿಗೆ ಮತ್ತಷ್ಟು ಅವಕಾಶಗಳು ಸಿಗಲಿ ಎಂಬುವುದು ಎಲ್ಲರ ಆಶಯ.

ಈಗಾಗಲೇ ಅನೇಕ ಸೀರೆ ಹಾಗೂ ಜುವೆಲ್ಲರಿ ಆ್ಯಡ್‌ಗಳಲ್ಲಿ ಕಾಣಿಸಿಕೊಂಡಿರುವ ಪ್ರಿಯಾಂಕಾ, ಮಾಡೆಲಿಂಗ್‌ಗೆ ಹೇಳಿ ಮಾಡಿಸಿದಂತಿದ್ದಾರೆ. 

ಈಗಾಗಲೇ ಬ್ಯಾಡ್ ಮ್ಯಾನರ್ಸ್ ಬಿಡುಗಡೆಗೆ ರೆಡಿಯಾಗಿದ್ದು, ಎ.ಪಿ.ಅರ್ಜುನ್ ನಿರ್ದೇಶನದ ಅದ್ಧೂರಿ ಲವರ್‌ನಲ್ಲಿಯೂ ನಾಯಕಿಯಾಗಿ ನಟಿಸುತ್ತಿದ್ದಾರೆ. 

ಅಷ್ಟೇ ಅಲ್ಲ ರಿಷಿ ನಾಯಕನಾಗಿರುವ, ನಂದೀಶ್ ನಿರ್ದೇಶಿಸುತ್ತಿರುವ ರುದ್ರ ಗರುಡ ಪುರಾಣದಲ್ಲಿಯೂ ನಟಿಸುತ್ತಿದ್ದು, ಮೊದಲ ಚಿತ್ರ ಬಿಡುಗಡೆಗೂ ಮುನ್ನವೇ ಹ್ಯಾಟ್ರಿಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. 

ಮೊದಲ ಕನ್ನಡ ಚಿತ್ರರಂಗದಲ್ಲಿಯೇ ಬೆಳೆದು, ನಂತರ ಬೇರೆ ಸಿನಿ ಇಂಡಸ್ಟ್ರಿ ಬಗ್ಗೆ ಯೋಚಿಸುವುದಾಗಿ ಹೇಳುತ್ತಿರುವ ಪ್ರಿಯಾಂಕಾಗೆ  ಇಲ್ಲಿಯೇ ಸಾಕಷ್ಟು ಅವಕಾಶಗಳು ಸಿಗುವಂತಾಗಲಿ. 

click me!