ಕನ್ನಡ ಜನಪ್ರಿಯ ಕಿರುತೆರೆ ನಟಿ ಕಾವ್ಯಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುವ ಫೋಟೋ ಅಪ್ಲೋಡ್ ಮಾಡಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾವ್ಯಾ ಗೌಡ ಸ್ಪೆಷಲ್ ವ್ಯಕ್ತಿಯನ್ನು ಭೇಟಿ ಮಾಡಿದ್ದಾರೆ. ಅವರೇ ಸ್ಯಾಂಡಲ್‌ವುಡ್ ರಾಕಿಂಗ್ ಕ್ವೀನ್ ರಾಧಿಕಾ ಪಂಡಿತ್.
ಕಾವ್ಯಾ ಗೌಡ ನೆಚ್ಚಿನ ನಟಿ ರಾಧಿಕಾ ಪಂಡಿತ್. ಅಷ್ಟೇ ಅಲ್ಲ ಯಾರೇ ಕಾವ್ಯಾ ಗೌಡನ ಭೇಟಿ ಮಾಡಿದ್ದರೂ ನೋಡಲು ರಾಧಿಕಾ ಪಂಡಿತ್ ರೀತಿ ಇದ್ದೀರಿ ಎನ್ನುತ್ತಿದ್ದರಂತೆ.
ಈಗಲೂ ಕಾವ್ಯಾ ಏನೇ ಪೋಸ್ಟ್ ಮಾಡಿದರೂ ಅದರಲ್ಲಿ ಕೆಲವರು ನೋಡಲು ರಾಧಿಕಾ ಪಂಡಿತ್ ರೀತಿ ಇದ್ದೀರಿ ಎಂದು ಕಾಮೆಂಟ್ ಮಾಡೇ ಮಾಡಿರುತ್ತಾರೆ.
ರಾಧಿಕಾ ಪಂಡಿತ್ ಎಲ್ಲಿಗೆ ಪ್ರಯಾಣ ಮಾಡುತ್ತಿದ್ದಾರೆ? ಕಾವ್ಯಾ ಗೌಡ ಎಲ್ಲಿಗೆ ಪ್ರಯಾಣ ಮಾಡುತ್ತಿದ್ದಾರೆ ಗೊತ್ತಿಲ್ಲ. ಅಥವಾ ಇಬ್ಬರೂ ಒಂದೇ ಫ್ಲೈಟ್‌ನಲ್ಲಿದ್ದಾರಾ ಅನ್ನೋದು ಗೊತ್ತಿಲ್ಲ.
ಆದರೆ ಕಾವ್ಯಾ ಹಾಕುತ್ತಿರುವ ಸ್ಟೋರಿಗಳನ್ನು ನೋಡಿದರೆ ಬಾಲಿ (Bali), ಇಂಡೋನೇಷ್ಯಾ ಕಡೆ ಪ್ರಯಾಣ ಮಾಡಿದ್ದಾರೆ ಅನಿಸುತ್ತದೆ.
ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಂತೆ ಕಾವ್ಯಾ ಗೌಡ ಕಿರುತೆರೆ ಜೀವನಕ್ಕೆ ಗುಡ್ ಬೈ ಹೇಳಿ ಆಭರಣ ವಿನ್ಯಾಸಕಿಯಾಗಿ ತೊಡಗಿಸಿಕೊಳ್ಳುತ್ತಾರೆ. ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.