ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಕಾರುಣ್ಯ ರಾಮ್ ಇತ್ತೀಚಿನ ದಿನಗಳಲ್ಲಿ ತಮ್ಮ ಐಷಾರಾಮಿ ಜೀವನದಿಂದ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಕಾರುಣ್ಯ ರಾಮ್ ನಿವಾಸದಲ್ಲಿ ದೇವರ ಪೂಜೆ ಮಾಡಿಸಿದ್ದಾರೆ. ಅರ್ಜುನ ಅವಧೂತ ಗುರು ಮಹಾರಾಜ್ ಆಗಮಿಸಿದ್ದರು.
ಸರಳವಾಗಿ ಮನೆ ಮಟ್ಟಕ್ಕೆ ಪೂಜೆ ಮಾಡಿಸಿದ್ದರೂ ಕಾರುಣ್ಯ ರೆಡಿಯಾಗಿದ್ದ ಶೈಲಿ ಜನರ ಗಮನ ಸೆಳೆದಿದೆ. ಅದರಲ್ಲೂ ಅವರ ಕೊರಳಲ್ಲಿರುವ ಮಾಲೆ.
ಹೌದು! ಕೆಂಪು ಬಣ್ಣದ ಡಿಸೈನರ್ ಸೀರೆಗೆ ಕಾರುಣ್ಯ ರಾಮ್ ಅಭೂಷಣ್ ಅಂಗಡಿಯ ಆಭರಣ ಧರಿಸಿದ್ದರು. ನೆಟ್ಟಿಗರ ಕಣ್ಣು ಆ ನೆಕ್ಲೆಸ್ ಮೇಲಿದೆ.
ಎಷ್ಟು ಗ್ರಾಂ ಸರ? ಸರ ಡಿಸೈನ್ ಚೆನ್ನಾಗಿ...ಹೀಗೆ ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ಕಾರುಣ್ಯ ಐಷಾರಾಮಿ ಬದುಕು ಸೂಪರ್ ಎಂದೂ ಹೇಳಿದ್ದಾರೆ.
ಗುಬ್ಬಿ ಮೇಲೆ ಬ್ರಹ್ಮಸ್ತ್ರ, ಪೆಟ್ರೋಮ್ಯಾಕ್ಸ್, ಮನೆ ಮಾರಾಟಕ್ಕಿದೆ, ವಜ್ರಕಾಯ ಸೇರಿದಂತೆ ಹಲವು ಸಿನಿಮಾದಲ್ಲಿ ಕಾರುಣ್ಯ ನಟಿಸಿದ್ದಾರೆ. ಅವರ ಮಾತ್ರಗಳು ಜನ ಮನಸ್ಸು ಗೆದ್ದಿದೆ.
Vaishnavi Chandrashekar