ಪ್ರಣೀತಾ ಸುಭಾಷ್ Baby Shower ಫೋಟೊ ವೈರಲ್… ಇಲ್ಲೂ ಗಂಡನ ಸರಿಯಾದ ಫೋಟೊ ಹಾಕೇ ಇಲ್ವಲ್ಲ ನಟಿ!

First Published | Aug 23, 2024, 2:35 PM IST

ಸ್ಯಾಂಡಲ್ ವುಡ್ ನಟಿ ಪ್ರಣೀತಾ ಸುಭಾಷ್ ಮತ್ತೆ ತಾಯಿಯಾಗೋ ಸಂಭ್ರಮದಲ್ಲಿದ್ದಾರೆ, ಈ ಹಿನ್ನೆಲೆಯಲ್ಲಿ ಬೇಬಿ ಶವರ್ ನಡೆದಿದ್ದು, ಫೋಟೊಗಳನ್ನ ನಟಿ ಹಂಚಿಕೊಂಡಿದ್ದಾರೆ. 
 

ಸ್ಯಾಂಡಲ್ ವುಡ್ ಜನಪ್ರಿಯ ನಟಿ ಪೊರ್ಕಿ ನಾಯಕಿ ಪ್ರಣೀತಾ ಸುಭಾಷ್  (Pranitha Subhash) ಮತ್ತೊಮ್ಮೆ ತಾಯಿಯಾಗೋ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗಷ್ಟೇ ನಟಿ ತಾನು ಮತ್ತೆ ತಾಯಿಯಾಗುವ ಖುಷಿಯ ವಿಚಾರವನ್ನ ಹಂಚಿಕೊಂಡಿದ್ದರು.  
 

2010ರಲ್ಲಿ ಪೊರ್ಕಿ ಚಿತ್ರದ ಮೂಲಕ ದರ್ಶನ್ ಗೆ ನಾಯಕಿಯಾಗುವ ಮೂಲಕ ಸ್ಯಾಂಡಲ್ ವುಡ್ ಗೆ (Sandalwood) ಎಂಟ್ರಿ ಕೊಟ್ಟ ಪ್ರಣೀತಾ ನಂತ್ರ ತೆಲುಗು, ಮಲಯಾಲಂ, ಹಿಂದಿ, ತಮಿಳು ಸೇರಿ ಸುಮಾರು ಮೂವತ್ತಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. 
 

Tap to resize

2021ರಲ್ಲಿ ನಿತಿನ್ ರಾಜು ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ನಂತ್ರ ಸಿನಿಮಾದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ನಂತರ ಮತ್ತೆ ಸಿನಿಮಾದಲ್ಲಿ ನಟಿಸುತ್ತಿರುವ ನಟಿ, ಮಗುವಾದ ಬಳಿಕವೂ ನಟನೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. 
 

ಒಂದು ಮಗುವಾದ ಬಳಿಕವೂ ತಮ್ಮ ಸೌಂದರ್ಯವನ್ನೂ ಹಾಗೇ ಉಳಿಸಿಕೊಂಡಿದ್ದ ನಟಿ, ಇದೀಗ ಎರಡನೇ ಬಾರಿ ತಾಯಿಯಾಗುವ ಸಂಭ್ರಮವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. 
 

ಸೋಶಿಯಲ್ ಮೀಡಿಯಾದಲ್ಲಿ (Social Media) ತುಂಬಾನೆ ಆಕ್ಟೀವ್ ಆಗಿರುವ ಪ್ರಣೀತಾ ಇದೀಗ ಬೇಬಿ ಶವರ್ ಫೋಟೊಗಳನ್ನು ಹಂಚಿಕೊಂಡಿದ್ದು, ಸಾಂಪ್ರದಾಯಿಕವಾಗಿ ಸೀಮಂತ ಮಾಡೋದು ಬಿಟ್ಟು, ಈ ಬಾರಿ ಆಧುನಿಕವಾಗಿ ಬೇಬಿ ಶವರ್ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. 
 

ಬೆಂಗಳೂರಿನ ಬೆಸ್ಟಿಯನ್ ಗಾರ್ಡನ್ ಸಿಟಿಯಲ್ಲಿ ತಮ್ಮ ಗಂಡ, ಮಗು, ಸ್ನೇಹಿತರ ಜೊತೆ ಅದ್ಧೂರಿಯಾಗಿ ಬೇಬಿ ಶವರ್ ಸೆಲೆಬ್ರೇಟ್ ಮಾಡಿದ್ದು, ಅಲ್ಲಿನ ಸುಂದರ ಡೆಕೊರೇಶನ್, ಗಂಡ, ಮಗಳ ಜೊತೆಗಿನ ಫೋಟೊ ಹಾಗೂ ಸೆಲೆಬ್ರೇಶನ್ ಫೋಟೊಗಳನ್ನು ಹಂಚಿಕೊಂಡು A baby shower to remember ಎಂದು ಬರೆದುಕೊಂಡಿದ್ದಾರೆ. 
 

ಪ್ರಣೀತಾ ಸುಭಾಷ್ ಬಿಳಿ ಬಣ್ಣದ ಸ್ಲೀವ್ ಲೆಸ್ ಗೌನ್ ಧರಿಸಿದ್ರೆ, ಮಗಳು ಬಿಳಿ ಬಣ್ಣದ ಫ್ರಾಕ್ ಹಾಗೂ ಪತಿ ನಿತಿನ್ ಬಿಳಿ ಬಣ್ಣದ ಟಿ ಶರ್ಟ್ ಜೀನ್ಸ್ ಧರಿಸಿದ್ದಾರೆ. ಮುದ್ದಾದ ಫ್ಯಾಮಿಲಿ ಫೋಟೊ ನೋಡಿ ಅಭಿಮಾನಿಗಳು ಸಂತೋಷದಿಂದ ಶುಭ ಹಾರೈಸಿದ್ದಾರೆ. ಆದರೆ ಎಂದಿನಂತೆ ಈ ಬಾರಿ ಕೂಡ ಪ್ರಣೀತಾ ತಮ್ಮ ಪತಿಯ ಸರಿಯಾದ ಫೋಟೊವನ್ನ ಮಾತ್ರ ಹಾಕಿಯೇ ಇಲ್ಲ. ಗಂಡನ ಜೊತೆಗಿನ ಎರಡು ಫೋಟೊಗಳನ್ನೇನೋ ಹಾಕಿದ್ದಾರೆ, ಆದರೆ ಎರಡರಲ್ಲೂ ನಿತಿನ್ (Nithin Raju) ಕೆಳಗೆ ನೋಡ್ತಿದ್ದಾರೆ. ಗಂಡನ ಸರಿಯಾದ ಫೋಟೊ ಹಾಕ್ಲೇ ಬಾರದು ಅಂತ ಡಿಸೈಡ್ ಮಾಡಿದ್ದಾರೆನೋ.?
 

Latest Videos

click me!