ಕೃಷ್ಣಂ ಪ್ರಣಯ ಸಖಿ ಸಿನಿಮಾ ನೋಡಿ, ಶರಣ್ಯ ಶೆಟ್ಟಿ ಅಂದಕ್ಕೆ ಫಿದಾ ಆದ ಸಿನಿ ರಸಿಕರು

First Published | Aug 23, 2024, 11:46 AM IST

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾ ನೋಡಿ ಬಂದಿರುವ ವೀಕ್ಷಕರು ಶರಣ್ಯ ಶೆಟ್ಟಿ ಅಂದಕ್ಕೆ, ನಟನೆಗೆ ಫಿದಾ ಆಗಿದ್ದಾರೆ. ಸೂಪರ್ ಹಿಟ್ , ಸಿನಿಮಾ , 
 

ಇತ್ತೀಚಿಗೆ ಬಿಡುಗಡೆಯಾದ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಸೂಪರ್ ಹಿಟ್ ಆಗಿದೆ. ಸಿನಿಮಾದ ಕಥೆ, ಹಾಡನ್ನು ಕೇಳಿ ಜನ ಥ್ರಿಲ್ ಆಗಿದ್ದರು, ನಾಯಕಿ ಮಾಳವಿಕಾ ನಾಯರ್ ಜನರಿಗೆ ಹೇಗೂ ಇಷ್ಟವಾಗಿದ್ದಾರೆ, ಇದರ ಜೊತೆಗೆ ಮತ್ತೊಬ್ಬ ನಾಯಕಿಯನ್ನೂ ಜನ ಇಷ್ಟಪಟ್ಟಿದ್ದಾರೆ. 
 

ಹೌದು, ಕೃಷ್ಣಂ ಪ್ರಣಯ ಸಖಿ ನೋಡಿ ಬಂದಿರೋ ವೀಕ್ಷಕರಿಗೆ ಶರಣ್ಯ ಶೆಟ್ಟಿ (Sharanya Shetty) ಮೇಲೆ ಸಿಕ್ಕಾಪಟ್ಟೆ ಲವ್ ಆಗಿದೆ. ಸಿನಿಮಾ ನೋಡಿದವರಿಗೆ ಶರಣ್ಯ ಶೆಟ್ಟಿಯ ಅಂದ, ಚೆಂದ ಗ್ಲಾಮರ್ ಸಿಕ್ಕಾಪಟ್ಟೆ ಇಷ್ಟವಾಗಿದ್ದು, ಜನರು ಫಿದಾ ಆಗಿದ್ದಾರೆ. 
 

Tap to resize

ಶರಣ್ಯ ಶೆಟ್ಟಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಕಾಡದೆಯೇ ಹೇಗಿರಲಿ ಹಾಡಿನಲ್ಲಿ ತುಂಬಾನೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಯಶಸ್ಸಿನಿಮ್ದ ಶರಣ್ಯ ಶೆಟ್ಟಿ ಪಾಪ್ಯುಲಾರಿಟಿ ಕೂಡ ಹೆಚ್ಚಿದೆ. 
 

ಸಿನಿಮಾದ ಯಶಸ್ಸಿನಿಂದ ಖುಷಿಯಾಗಿರುವ ಶರಣ್ಯ ಶೆಟ್ಟಿಗೆ ಯಶಸ್ಸು ಸುಲಭವಾಗಿ ಸಿಕ್ಕಿಲ್ಲ, ಅದಕ್ಕಾಗಿ ಅವರು ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದಾರೆ. ಕಿರುತೆರೆಯಿಂದ ಆರಂಭವಾದ ಇವರ ನಟನಾ ಜರ್ನಿ ಈಗ ಹಿರಿತೆರೆಯಲ್ಲಿ ಮಿಂಚುವಂತೆ ಮಾಡಿದೆ. 

ಕೃಷ್ಣಂ ಪ್ರಣಯ ಸಖಿಗೂ (Krishnam Pranaya Sakhi) ಮುನ್ನ ಶರಣ್ಯ 1980, ನಗುವಿನ ಹೂಗಳ ಮೇಲೆ, ಹುಟ್ಟು ಹಬ್ಬದ ಶುಭಾಷಯಗಳು ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದರು, ಆದರೆ ಈ ಸಿನಿಮಾಗಳು ಅಷ್ಟೊಂದು ಹಿಟ್ ಆಗಿರಲಿಲ್ಲ. 
 

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತೆರೆ ಹಂಚಿಕೊಳ್ಳುವ ಅದೃಷ್ಟ ಕೆಲವೇ ನಟಿಯರಿಗೆ ಸಿಕ್ಕಿದೆ, ಆ ಕೆಲವರಲ್ಲಿ ತಾನು ಒಬ್ಬಳು ಎಂದು ಶರಣ್ಯ ಶೆಟ್ಟಿ ಸಂಭ್ರಮಿಸಿದ್ದಾರೆ.ಜೊತೆಗೆ  ಈ ಸಿನಿಮಾ ಮೂಲಕ ನಾನು ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇನೆ ಎಂದಿದ್ದಾರೆ ಶರಣ್ಯ. 

ಸದ್ಯ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಶರಣ್ಯ ಶೆಟ್ಟಿ, ಕನ್ನಡ ಸಿನಿಮಾ ಇಂಡಷ್ಟ್ರಿಯ ಭರವಸೆಯ ನಟಿಯಾಗಿ ಮಿಂಚಲಿದ್ದಾರೆ. ಈಗಾಗಲೇ ಇವರ ಕೈಯಲ್ಲಿ ಮೂರು ಸಿನಿಮಾಗಳಿವೆ. 

Latest Videos

click me!