ಕೆಜಿಎಫ್‌ ಚಿತ್ರದ ಖಡಕ್ ವಿಲನ್ ಅವಿನಾಶ್‌ ಆಂಡ್ರ್ಯೂಸ್‌ ಆಫ್‌ ಸ್ಕ್ರೀನ್‌ ಪತ್ನಿ ಇವರೇ ನೋಡಿ!

First Published | Aug 23, 2024, 2:21 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಆಂಡ್ರ್ಯೂಸ್ ಆಫ್‌ ಸ್ಕ್ರೀನ್ ಪತ್ನಿ ಫೋಟೋ......

ಕನ್ನಡ ಚಿತ್ರರಂಗವನ್ನು ಇಡೀ ಭಾರತವೇ ತಿರುಗಿ ನೋಡುವಂತೆ ಸಂಚಲನ ಸೃಷ್ಟಿ ಮಾಡಿದ್ದು ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2. 

ಈ ಚಿತ್ರದಲ್ಲಿ ಮಿಂಚಿದ ಪ್ರತಿಯೊಬ್ಬ ಕಲಾವಿದರಿಗೂ ದೊಡ್ಡ ಮಟ್ಟದಲ್ಲಿ ಯಶಸ್ಸು ಮತ್ತು ಗುರುತಿ ಸಿಕ್ಕಿತ್ತು. ಅವರಲ್ಲಿ ಬಿಎಸ್‌ ಅವಿನಾಶ್‌ ಕೂಡ ಒಬ್ಬರು.

Tap to resize

ಕೆಜಿಎಫ್‌ ಚಿತ್ರದ ಖಡಕ್ ವಿಲನ್ ಆಗಿ ಮಿಂಚಿದ ಅಂಡ್ರ್ಯೂಸ್ ಉರ್ಫ್‌ ಬಿಎಸ್‌ ಅವಿನಾಶ್‌ ಸದ್ಯ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ವಿಲನ್.

ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಅವಿನಾಶ್‌ ತಮ್ಮ ಫ್ಯಾಮಿಲಿ ಫೋಟೋವನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ. ಪತ್ನಿ ಫೋಟೋ ರಿವೀಲ್ ಮಾಡಿದ್ದಾರೆ.

 ಅವಿನಾಶ್ ಪತ್ನಿಯ ಹೆಸರು ಸಂಗೀತಾ....ಪತ್ನಿಯನ್ನು ಪ್ರೀತಿಯಿಂದ ಗೀತಮ್ಮಾ, ಡುಮ್ಮಿ ಮತ್ತು ಮೈ ಚಿನ್ನಮ್ಮಾ ಎಂದು ಕರೆಯುತ್ತಾರೆ. ಹೀಗೆಂದು ಇನ್‌ಸ್ಟಾಗ್ರಾಂನಲ್ಲೂ ಬರೆದುಕೊಂಡಿದ್ದಾರೆ.

ಆಗಸ್ಟ್‌ 10ರಂದು ತಮ್ಮ 27ನೇ ವರ್ಷದ ವೈವಾಹಿಕ ಜೀವನವನ್ನು ಆಚರಿಸಿಕೊಂಡಿದ್ದಾರೆ. ಆಗ ಅಪ್ಲೋಡ್ ಮಾಡಿರುವ ರೋಮ್ಯಾಂಟಿಕ್‌ ಫೋಟೋಗಳಿದು....

Latest Videos

click me!