ಭೀಮನ ಅಮಾವಾಸ್ಯೆ ಮಾಡಿದ್ರೂ ಗಂಡನ ಮುಖ ತೋರ್ಸಲ್ವಾ? ಪ್ರಣಿತಾ ಸುಭಾಷ್ ಕಾಲೆಳೆದ ನೆಟ್ಟಿಗರು

Published : Jul 29, 2022, 11:33 AM ISTUpdated : Jul 29, 2022, 12:06 PM IST

ಭೀಮನ ಅಮಾವಾಸ್ಯೆ ಫೋಟೋ ಹಂಚಿಕೊಂಡ ನಟಿ ಪ್ರಣಿತಾ ಸುಭಾಷ್. ವೈರಲ್ ಫೋಟೋಗೆ ಕಾಮೆಂಟ್ ಮೂಲಕ ಪ್ರಶ್ನೆ ಹಾಕಿದ ನೆಟ್ಟಿಗರು....  

PREV
17
ಭೀಮನ ಅಮಾವಾಸ್ಯೆ ಮಾಡಿದ್ರೂ ಗಂಡನ ಮುಖ ತೋರ್ಸಲ್ವಾ? ಪ್ರಣಿತಾ ಸುಭಾಷ್ ಕಾಲೆಳೆದ ನೆಟ್ಟಿಗರು

ಪೋರ್ಕಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಪ್ರಣಿತಾ ಸುಭಾಷ್ ಇದೀಗ ಪರ್ಸನಲ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. 

27

ಖ್ಯಾತ ಉದ್ಯಮಿ ನಿತಿನ್‌ ರಾಜು ಜೊತೆ ಮೇ 31,2021ರಂದು ಪ್ರಣಿತಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು.  ಏಪ್ರಿಲ್ 11,2022ರಲ್ಲಿ ತಾಯಾಗುತ್ತಿರುವ ವಿಚಾರ ಅನೌನ್ಸ್ ಮಾಡಿದ್ದರು.

37

ಮೇ 20, 2022ರಲ್ಲಿ ಬೇಬಿ ಶವರ್ (baby shower) ಮಾಡಿಕೊಂಡ ಪ್ರಣಿತಾ ಜೂನ್ 10ರಂದು ಕುಟುಂಬಕ್ಕೆ ಹೆಣ್ಣು ಮಗುವನ್ನು ಬರ ಮಾಡಿಕೊಂಡರು. 

47

ನಿನ್ನೆ ಭೀಮನ ಅಮಾವಾಸ್ಯೆ ಆಚರಿಸಿದ ಪ್ರಣಿತಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ದೃಷ್ಠಿ ಆಗಬಾರದು ಎಂದು ದೃಷ್ಠಿ ಎಮೋಜಿ ಹಾಕಿದ್ದಾರೆ. 

57

 ಸೋಷಿಯಲ್ ಮೀಡಿಯಾದಲ್ಲಿ ಪತಿ ಮತ್ತು ಮಗಳ ಫೋಟೋ ಅಪ್ಲೋಡ್ ಮಾಡುವ ಪ್ರಣಿತಾ ಅವರ ಮುಖವನ್ನು ತೋರಿಸದ ಕಾರಣ ನೆಟ್ಟಿಗರು ಬೇಸರ ವ್ಯಕ್ತ ಪಡಿಸಿದ್ದಾರೆ. 

67

ಮದ್ವೆಯಾಗಿ ಮಗು ಆದ್ರೂ ಅವರ ಮುಖ ಯಾಕೆ ತೋರಿಸುತ್ತಿಲ್ಲ? ಮಗು ಬೇಡ ಬಿಡಿ ದೃಷ್ಠಿ ಆಗುತ್ತೆ ಆದರೆ ಗಂಡನ ಮುಖ ಯಾಕೆ ತೋರಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

77

 ಮದುವೆ ವಿಚಾರವನ್ನು ಪ್ರಣಿತಾ ಪ್ರೈವೇಟ್ ಆಗಿಟ್ಟಿದ್ದರು. ನನ್ನ ಪತಿಗೆ ಕ್ಯಾಮೆರಾ ಪಬ್ಲಿಕ್ ಲೈಫ್‌ ಅಂದ್ರೆ ಅಷ್ಟು ಇಷ್ಟ ಆಗುವುದಿಲ್ಲ ಎಂದು ಹೇಳಿಕೊಂಡಿದ್ದರು...

Read more Photos on
click me!

Recommended Stories