ಬೆಂಗಳೂರಿನ ಲೂಲು ಮಾಲ್‌ನಲ್ಲಿ ‘ವಿಕ್ರಾಂತ್ ರೋಣ’ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಅದ್ದೂರಿಯಾಗಿ ನಡೆಯಿತು. ಇಡೀ ಚಿತ್ರತಂಡವೇ ಅಲ್ಲಿ ನೆರೆದಿತ್ತು.
27
ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಕಾರ್ಯಕ್ರಮ ರಂಗೇರಿತ್ತು. ಮುಖ್ಯ ಅತಿಥಿಯಾಗಿ ನಟ ಉಪೇಂದ್ರ ಅವರು ಆಗಮಿಸಿದ್ದು.
37
ಹಾಡು, ಮಾತು, ಡ್ಯಾನ್ಸ್ ಮೂಲಕ ‘ವಿಕ್ರಾಂತ್ ರೋಣ’ ತಂಡದ ಜತೆಗೆ ನೆರೆದಿದ್ದವರು ಸಂಭ್ರಮಿಸಿದರು. ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಬಗ್ಗೆ ಮಾತನಾಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
47
ಈ ಸಂದರ್ಭದಲ್ಲಿ ಮಾತನಾಡಿದ ಉಪೇಂದ್ರ ಅವರು ‘ನಟ ಯಶ್ ಅವರು ಕನ್ನಡಿಗರು ನಾವು ಯಾರಿಗೂ ಕಡಿಮೆ ಇಲ್ಲ ಅಂತ ‘ಕೆಜಿಎಫ್’ ಚಿತ್ರದ ಮೂಲಕ ಇಡೀ ಭಾರತವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದರೆ.'
57
ಈಗ ಸುದೀಪ್ ಅವರು ಕೂಡ ನಾವು ಯಾರಿಗೂ ಕಮ್ಮಿ ಇಲ್ಲ ಅಂತ ‘ವಿಕ್ರಾಂತ್ ರೋಣ’ ಚಿತ್ರದ ಮೂಲಕ ಇಡೀ ವಿಶ್ವ ಕನ್ನಡ ಚಿತ್ರರಂಗದ ಕಡೆಗೆ ನೋಡುವಂತೆ ಮಾಡುತ್ತಿದ್ದಾರೆ.
67
ಖಂಡಿತ ಈ ಸಿನಿಮಾ ಪ್ಯಾನ್ ವಲ್ಡ್‌ರ್ ಸಿನಿಮಾ ಆಗುತ್ತದೆ. ನನ್ನ ಪ್ರಕಾರ ವಿಕ್ರಾಂತ್ ರೋಣ ಎಂದರೆ ದಿಸ್ ಈಸ್ ವಿಕ್ಟರಿ ರೋಣ ಎಂದರ್ಥ. ನಾನು ಚಿತ್ರವನ್ನು ನೋಡಿದ್ದೇನೆ.
77
Vikrant Rona Review
ಇಂಥ ಸಿನಿಮಾ ಮಾಡಕ್ಕೆ ಸುದೀಪ್ ಅವರಿಗೆ ಎಲ್ಲಿಂದ ಧೈರ್ಯ, ಶಕ್ತಿ ಬರುತ್ತದೋ ಗೊತ್ತಿಲ್ಲ. ಅವರ ಅಭಿಮಾನಿಗಳನ್ನು ನೋಡಿದರೆ ಅವರಿಗೆ ಎನರ್ಜಿ ಬರುತ್ತದೆ. ತುಂಬಾ ಅದ್ಭುತವಾಗಿ ಸಿನಿಮಾ ಮೂಡಿ ಬಂದಿದೆ’ ಎಂದರು.