ಹಳೆಯ ಮಧುರ ಕ್ಷಣಗಳನ್ನ ಮೆಲುಕು ಹಾಕಿದ ರಿಷಭ್ ಶೆಟ್ಟಿ ಪತ್ನಿ… ಫ್ಯಾನ್ಸ್ ಏನಂದ್ರು ಗೊತ್ತಾ?

First Published Jun 25, 2024, 4:01 PM IST

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಮತ್ತು ನಟರಾಗಿರುವ ರಿಷಭ್ ಶೆಟ್ಟಿಯವರ ಪತ್ನಿ ಪ್ರಗತಿ ಶೆಟ್ಟಿ ಸೋಶಿಯಲ್ ಮೀಡೀಯಾದಲ್ಲಿ ಹಳೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
 

ಕನ್ನಡ ಸಿನಿಮಾದಲ್ಲಿ ಹೊಸತನದ ಕಥೆಗಳನ್ನು ಹೊತ್ತು ತಂದು ದೇಶವೇ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುವಂತೆ ಮಾಡಿದ ನಟ ರಿಷಭ್ ಶೆಟ್ಟಿ (Rishabh Shetty) . ಇವರಿಗೆ ಕಾಂತಾರ ಸಿನಿಮಾದಲ್ಲಿ ಜೊತೆಯಾದ ಕಾಸ್ಟ್ಯೂಮ್ ಡಿಸೈನರ್ ಪತ್ನಿ ಸಹ ಸಿಕ್ಕಾಪಟ್ಟೆ ಫೇಮಸ್ ಅನ್ನೋದು ನಿಮಗೆ ಗೊತ್ತೆ ಇದೆ. 
 

ಇದೀಗ ಅವರ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಪತಿಯ ಜೊತೆಗಿನ ಹಳೆಯ ಫೋಟೋಗಳನ್ನು ಶೇರ್ ಮಾಡಿಕೊಂಡು ಪ್ರೀತಿ ಮತ್ತು ನಗುವಿನಿಂದ ಕೂಡಿದ ಮಧುರ ನೆನಪುಗಳು ಎಂದು ಕ್ಯಾಪ್ಶನ್ ನೀಡಿದ್ದಾರೆ. 
 

ಪ್ರಗತಿ ಮತ್ತು ರಿಷಭ್ ಜೊತೆಯಾಗಿ ದೇಶ -ವಿದೇಶ ಸುತ್ತಿದಂತಹ ವಿವಿಧ ಸುಂದರ ಫೋಟೋಗಳನ್ನು ಪ್ರಗತಿ ಹಂಚಿಕೊಂಡಿದ್ದು, ಇಬ್ಬರ ಮುದ್ದಾದ ಜೋಡಿಯನ್ನು ನೋಡಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. 
 

ಇಬ್ಬರ ಜೋಡಿ ನೂರ್ಕಾಲ ಹೀಗೆ ಸುಖವಾಗಿ ಬಾಳಿ, ಮೇಡ್ ಫಾರ್ ಈಚ್ ಅದರ್ (made for each other) , ಇಬ್ಬರ ಜೋಡಿ ತುಂಬಾನೆ ಸುಂದರವಾಗಿದೆ ಎಂದು ಕನ್ನಡಿಗರು ಮಾತ್ರವಲ್ಲದೇ ವಿವಿಧ ರಾಜ್ಯಗಳ ಜನರು ಸಹ ಕಾಮೆಂಟ್ ಮಾಡಿ ತಿಳಿಸಿದ್ದಾರೆ. 
 

ಇನ್ನು ಕಾಂತಾರ ಸಿನಿಮಾದ ಅಭಿಮಾನಿಗಳೆಲ್ಲಾ ಯಾವಾಗ ಕಾಂತಾರ 2 (Kantara 2) ರಿಲೀಸ್, ಬೇಗ ರಿಲೀಸ್ ಆಗ್ಲಿ. ಕಾಂತಾರ 2 ನೋಡೋದಕ್ಕೆ ಕಾಯ್ತಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ. 
 

ಇನ್ನು ಸಿನಿಮಾ ವಿಷ್ಯಕ್ಕೆ ಬಂದ್ರೆ ಶೆಟ್ರು ಕಾಂತಾರಾ ಚಾಪ್ಟರ್ 1 (Kantara Chapter 1) ಸಿನಿಮಾ ಶೂಟಿಂಗ್ ನಲ್ಲಿ ಪೂರ್ತಿಯಾಗಿ ಬ್ಯುಸಿಯಾಗಿದ್ದಾರೆ. ಸಿನಿಮಾ ಹಾಲಿವುಡ್ ರೇಂಜ್ ಗೆ ಮೂಡಿ ಬರಲಿದೆ ಎನ್ನುವ ಊಹಾಪೋಹಗಳು ಕೇಳಿ ಬರುತ್ತಿವೆ. 

ಕಾಂತಾರ ಸಿನಿಮಾದಲ್ಲಿ ಸಪ್ತಮಿ ಗೌಡ (Sapthami Gowda) ನಾಯಕಿಯಾಗಿ ನಟಿಸಿದ್ದರು. ಸಪ್ತಮಿ ಪಾತ್ರವನ್ನು ಜನರು ಸಹ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಆದರೆ ಕಾಂತಾರ ಚಾಪ್ಟರ್ 1 ಕಥೆ ಏನಿರಲಿದೆ? ಇದರ ನಾಯಕಿ ಯಾರು? ಯಾವೆಲ್ಲಾ ನಟ-ನಟಿಯರು ಅಭಿನಯಿಸಲಿದ್ದಾರೆ ಎನ್ನುವ ಬಗ್ಗೆ ಯಾವ ಮಾಹಿತಿಯೂ ಲಭ್ಯವಾಗಿಲ್ಲ. 

Latest Videos

click me!